Actresses Diet Information:ಪಿಟ್‌ ಆಗಿರಲು ನಟಿಯರು ಯಾವೆಲ್ಲಾ ಆಹಾರ ಸೇವನೆ ಮಾಡುತ್ತಾರೆ ಗೊತ್ತಾ?

(Actresses Diet Information)ಬಾಲಿವುಡ್‌ ನಟಿಯರು ಪಿಟ್‌ ಆಗಿರುವುದಕ್ಕೆ ವ್ಯಾಯಾಮ ಮಾಡುವುದು ಮತ್ತು ಕೆಲವು ಆಹಾರ ಕ್ರಮಗಳನ್ನು ರೂಡಿಸಿಕೊಂಡಿರುತ್ತಾರೆ. ಸಿನಿಮಾಗಷ್ಟೇ ಅಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳುಲು ಹಲವು ನಟಿಯರು ಕೇಲವು ಆಹಾರ ಕ್ರಮವನ್ನು ಅನುಸರಿಸುತ್ತಾರೆ. ಬೆಳಗಿನ ಉಪಾಹಾರದಲ್ಲಿ ಪೌಷ್ಟಿಕವಾಗಿರುವಂತಹ ಆಹಾರವನ್ನು ಸೇವನೆ ಮಾಡುತ್ತಾರೆ. ನೆಚ್ಚಿನ ನಟಿಯರು ಸೇವನೆ ಮಾಡುವಂತಹ ಆಹಾರದ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ನಿಮ್ಮ ನೆಚ್ಚಿನ ನಟಿಯರು ಯಾವ ಆಹಾರವನ್ನು ಸೇವನೆ ಮಾಡುತ್ತಾರೆ ಎಂದು ತಿಳಿದುಕೋಳ್ಳಿ ಮತ್ತು ನೀವು ಕೂಡ ಅವರಂತೆ ಆಹಾರ ತಿನ್ನುವ ಕ್ರಮವನ್ನು ಪಾಲನೆ ಮಾಡಿ ಪಿಟ್‌ ಆಗಿ ಕಾಣಬಹುದು.

(Actresses Diet Information)ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ ಪಿಟ್‌ ಆಗಿರಲು ಮುಖ್ಯವಾದ ಕಾರಣ ಅತಿ ಹೆಚ್ಚಾಗಿ ನೀರು ಕುಡಿಯುತ್ತಾರೆ .ದೀಪಿಕಾ ಪಡುಕೋಣೆ ಬೆಳಗಿನ ಉಪಾಹಾರವಾಗಿ ಉಪ್ಮಾ(ಉಪ್ಪಿಟ್ಟು), ದೋಸೆ, ಇಡ್ಲಿ, ಸಾಂಬಾರ್‌ಗಳನ್ನು ಸೇವನೆ ಮಾಡುಲು ಇಷ್ಟಪಡುತ್ತಾಳೆ. ಆಗಾಗ ಕೆಲವೊಮ್ಮೆ ಆಮ್ಲೆಟ್ ಅಥವಾ ಬೇಯಿಸಿದ ಮೊಟ್ಟೆಗಳನ್ನು ತಿನ್ನುತ್ತಾಳೆ. ವ್ಯಾಯಾಮ ಮುಗಿಸಿ ಶೂಟಿಂಗ್‌ ಗೆ ಹೊರಡುತ್ತಾರೆ.

ಸಮಂತಾ ರುತ್‌ ಪ್ರಭು
ಸಮಂತಾ ಫಿಟ್‌ನೆಸ್ ಫ್ರೀಕ್ ನಟಿ ಅವರ ದಿನಚರಿ ಕೊಂಚ ವಿಭಿನ್ನವಾಗಿದೆ . ಸಮಂತಾ ಉತ್ತಮ ಆಹಾರ ಕ್ರಮವನ್ನು ಅನುಸರಿಸುವುದರ ಜೊತೆಗೆ ವ್ಯಾಯಾಮ ಮತ್ತು ಯೋಗವನ್ನೂ ಮಾಡುತ್ತಾಳೆ. ಸಮಂತಾ ಬೆಳಗಿನ ಉಪಾಹಾರದಲ್ಲಿ ಪಿಸ್ತಾ, ಚಿಯಾ ಬೀಜಗಳು, ತೆಂಗಿನ ನೀರನ್ನು ಸೇವನೆ ಮಾಡುತ್ತಾಳೆ.

ಆಲಿಯಾ ಭಟ್
ಆಲಿಯಾ ಭಟ್ ಅವರ ಆರೋಗ್ಯದ ಬಗ್ಗೆ ತುಂಬಾ ಕಟ್ಟುನಿಟ್ಟಾಗಿರುತ್ತಾರೆ. ಬೆಳಗಿನ ಉಪಾಹಾರದಲ್ಲಿ ರೋಗ ನಿರೋಧಕಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸುತ್ತಾಳೆ. ಆಯಾ ಋತುಮಾನಕ್ಕೆ ತಕ್ಕಂತೆ ಬರುವಂತಹ ಹಣ್ಣುಗಳನ್ನು ಸೇವನೆ ಮಾಡುತ್ತಾಳೆ . ಅಲಿಯಾ ದಿನಚರಿ ಪ್ರಾರಂಭವಾಗುವುದು ಸಕ್ಕರೆ ಇಲ್ಲದೆ ಗಿಡಮೂಲಿಕೆ ಚಹಾ ಅಥವಾ ಕಾಫಿಯೊಂದಿಗೆ . ಇದರ ನಂತರ ಅವಳು ಪೋಹಾ(ಅವಲಕ್ಕಿ) ಅಥವಾ ಮೊಟ್ಟೆ, ಸ್ಯಾಂಡ್ವಿಚ್ ತಿನ್ನಲು ಇಷ್ಟಪಡುತ್ತಾಳೆ. ನಂತರ ವ್ಯಾಯಾಮ ಮಾಡುತ್ತಾಳೆ ಮತ್ತು ಅತಿಹೆಚ್ಚು ನೀರು ಕುಡಿಯುತ್ತಾಳೆ.

ಇದನ್ನೂ ಓದಿ:Chalapati Rao passed away : ಟಾಲಿವುಡ್‌ನ ಹಿರಿಯ ನಟ ಚಲಪತಿ ರಾವ್‌ ವಿಧಿವಶ : ಸಂತಾಪ ಸೂಚಿಸಿದ ತೆಲುಗು ಸಿನಿರಂಗದ ಗಣ್ಯರು

ಇದನ್ನೂ ಓದಿ:Actor thunisha sharma: ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣ : ಮರಣೋತ್ತರ ಪರೀಕ್ಷೆ, ಸಹ ನಟ ಅರೆಸ್ಟ್‌

ಕತ್ರಿನಾ ಕೈಫ್
ಕತ್ರಿನಾ ಕೈಫ್ ಸ್ಟ್ರಾಬೆರಿಗಳು, ಬ್ಲ್ಯಾಕ್‌ಬೆರಿಗಳು, ಬ್ಲೂಬೆರ್ರಿ, ಆವಕಾಡೊ ಮತ್ತು ಇತರ ಹಣ್ಣುಗಳಿಂದ ತುಂಬಿದ ಉಪಹಾರವನ್ನು ಸೇವಿಸಲು ಇಷ್ಟಪಡುತ್ತಾರೆ. ಇದಲ್ಲದೇ ಕತ್ರಿನಾಗೆ ಮೊಟ್ಟೆ, ಗೆಣಸು ಕೂಡ ಇಷ್ಟ ಪಟ್ಟು ತಿನ್ನುತ್ತಾರೆ. ಪ್ರತಿದಿನ ಅತಿ ಹೆಚ್ಚು ನೀರು ಕುಡಿಯುತ್ತಾರೆ ಜೊತೆಗೆ ವ್ಯಾಯಾಮ ಮಾಡುತ್ತಾರೆ.

Actresses Diet Information Do you know what food actresses eat to be fit?

Comments are closed.