Hair Pack : ಕೂದಲು ಉದುರುವ ಸಮಸ್ಯೆ ಕಾಡುತ್ತಿದೆಯೇ ? ಹಾಗಾದರೆ ಮನೆಯಲ್ಲೇ ಮಾಡಿ ಈ ಹೆರ್‌ ಪ್ಯಾಕ್

(Hair Pack)ಇತ್ತೀಚಿನ ದಿನಗಳಲ್ಲಿ ಪ್ರದೂಷಣೆಯಿಂದಾಗಿ ಪುರುಷ ಮತ್ತು ಮಹಿಳೆಯರಲ್ಲಿ ಕೂದಲು ಉದುರುವ ಸಮಸ್ಯೆಗಳು ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಹಲವಾರು ವೈದ್ಯಕೀಯ ಟ್ರಿಟ್ ಮೆಂಟ್‌ ಮಾಡುತ್ತಾ ಇರುತ್ತಾರೆ. ಇದರ ಬದಲು ಮನೆಯಲ್ಲೇ ಕೂದಲು ಉದುರುವ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಈ ಹೆರ್‌ ಪ್ಯಾಕ್‌ ಮಾಡಿ ಹಚ್ಚಿಕೊಂಡರೆ ನಿಮ್ಮ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ಹೆರ್‌ ಪ್ಯಾಕ್‌ ಮಾಡುವ ವಿಧಾನವನ್ನು ಈ ಕೆಳಗೆ ತಿಳಿಸಲಾಗಿದೆ.

ಬೇಕಾಗುವ ಸಾಮಾಗ್ರಿಗಳು:

  • ಕರಿಬೇವು
  • ದಾಸವಾಳದ ಎಲೆ
  • ಮೊಸರು
  • ಕೊಬ್ಬರಿ ಎಣ್ಣೆ

ಮಾಡುವ ವಿಧಾನ:
ಮಿಕ್ಸಿ ಜಾರಿನಲ್ಲಿ ಕರಿಬೇವು, ದಾಸವಾಳದ ಎಲೆ, ಮೊಸರು,ಕೊಬ್ಬರಿ ಎಣ್ಣೆಯನ್ನು ಹಾಕಿ ರುಬ್ಬಿಕೊಂಡು ಒಂದು ಬೌಲ್‌ ಗೆ ಹಾಕಬೇಕು. ಈ ಹೆರ್‌ ಪ್ಯಾಕ್‌ ಅನ್ನು ಕೂದಲಿಗೆ ಹಚ್ಚಿಕೊಂಡು 30 ನಿಮಿಷಗಳ ವರೆಗೆ ಬಿಡಬೇಕು ನಂತರ ತಲೆಸ್ನಾನ ಮಾಡಿದರೆ ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ. ಜೊತೆಗೆ ಡ್ಯಾಂಡ್ರಪ್ ಕಡಿಮೆ ಮಾಡಲು ಸಹಕಾರಿಯಾಗಿದೆ. ಇದನ್ನೂ ಓದಿ : Peanut Health Benefits : ಚಳಿಗಾಲದಲ್ಲಿ ಶೇಂಗಾ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು ನಿಮಗೆ ಗೊತ್ತಾ

ಕಪ್ಪು ಕಲೋಂಜಿ ಹೆರ್‌ ಪ್ಯಾಕ್‌

ಬೇಕಾಗುವ ಸಾಮಾಗ್ರಿಗಳು:

  • ಕಪ್ಪು ಕಾಲೋಂಜಿ ಬೀಜ
  • ಕರಿಬೇವು
  • ಹರಳೆಣ್ಣೆ
  • ನೀರು

ಇದನ್ನೂ ಓದಿ:Alovera Juice : ಅಲೋವೆರಾ ಜ್ಯೂಸ್‌ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ?

ಇದನ್ನೂ ಓದಿ:Chickpea : ದೇಹದ ತೂಕ ಇಳಿಸಬೇಕಾ ? ಹಾಗಾದ್ರೆ ಹುರಿಗಡಲೆ ತಿನ್ನಿ

ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ ಕಪ್ಪು ಕಾಲೋಂಜಿ ಬೀಜ ಮತ್ತು ಕರಿಬೇವನ್ನು ಹಾಕಿ ಹುರಿದುಕೊಂಡು ಪುಡಿಮಾಡಿಕೊಳ್ಳಬೇಕು. ನಂತರ ಒಂದು ಬೌಲ್ ನಲ್ಲಿ ಎರಡು ಚಮಚ ಕಪ್ಪು ಕಾಲೋಂಜಿ ಬೀಜ ಮತ್ತು ಕರಿಬೇವಿನ ಪುಡಿಯನ್ನು ಹಾಕಿಕೊಂಡು ಅದಕ್ಕೆ ಒಂದು ಚಮಚ ಹರಳೆಣ್ಣೆ , ಒಂದು ಚಮಚ ನೀರನ್ನು ಹಾಕಿಕೊಂಡು ಮಿಶ್ರಣ ಮಾಡಿಕೊಂಡು ಪೇಸ್ಟ್‌ ತಯಾರಿಸಿಕೊಳ್ಳಬೇಕು. ನಂತರ ಇದನ್ನು ತಲೆಗೆ ಬುಡಕ್ಕೆ ಹಚ್ಚಿಕೊಂಡು ಇಪ್ಪತ್ತು ನಿಮಿಷಗಳ ವರೆಗೆ ಬಿಟ್ಟು ತಲೆಸ್ನಾನ ಮಾಡಿದರೆ ಕೂದಲನ್ನು ಕಪ್ಪಾಗಿಸುತ್ತದೆ. ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ.

Are you suffering from hair fall problem ? So make this hair pack at home

Comments are closed.