(Banana Stem Recipe)ಬಾಳೆ ದಿಂಡಿನ ಪಲ್ಯ ಮಾಡಿಕೊಂಡು ತಿಂದರೆ ಹೊಟ್ಟೆಯ ಹಲವು ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಹೊಟ್ಟೆಯಲ್ಲಿ ಕಲ್ಮಶ ಅಥವಾ ಹೊಟ್ಟೆಯಲ್ಲಿ ಕೂದಲು ಸೇರಿಕೊಂಡಿದ್ದರೆ ಇದನ್ನು ಶುದ್ಧಿ ಮಾಡುವಂತಹ ಕೆಲಸವನ್ನು ಮಾಡುತ್ತದೆ. ಬಾಳೆದಿಂಡನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನ ಸಿಗುತ್ತದೆ. ಬಾಳೆ ದಿಂಡಿನ ಪಲ್ಯ ಅಷ್ಟೇ ಅಲ್ಲದೆ ದೋಸೆ ಮಾಡಿಕೊಂಡು ತಿನ್ನಬಹುದು . ಬಾಳೆ ದಿಂಡಿನ ದೋಸೆ ಹೇಗೆ ಮಾಡುವುದು ಎಂಬ ಮಾಹಿತಿಯ ಕುರಿತು ತಿಳಿದುಕೊಳ್ಳೋಣ.
(anana Stem Recipe)ಬೇಕಾಗುವ ಸಾಮಾಗ್ರಿಗಳು:
ಬಾಳೆದಿಂಡು
ಅಕ್ಕಿ
ಉಪ್ಪು
ಮಾಡುವ ವಿಧಾನ
ಬಾಳೆ ದಿಂಡಿನ ದೋಸೆ ಮಾಡುವ ಮುಂಚಿನ ದಿನ ಎರಡು ಕಪ್ ಅಕ್ಕಿಯನ್ನು ತೊಳೆದು ನೀರಲ್ಲಿ ನೆನಸಿಟ್ಟುಕೊಳ್ಳಬೇಕು. ಬಾಳೆ ದಿಂಡಿನ ದೋಸೆ ಮಾಡುವ ಮೊದಲು ಬಾಳೆದಿಂಡು ಬಿಡಿಸಿಕೊಂಡು ರೌಂಡ್ ಶೇಪ್ ನಲ್ಲಿ ಕತ್ತರಿಸಿಕೊಂಡು ಅದನ್ನು ನಾಲ್ಕು ತುಂಡು ಮಾಡಿ ನೀರಿರುವ ಪಾತ್ರೆಗೆ ಹಾಕಿಟ್ಟುಕೊಳ್ಳಬೇಕು( ಮುಂಚಿತವಾಗಿ ಬಾಳೆ ದಿಂಡನ್ನು ಕತ್ತರಿಸಿಕೊಂಡರೆ ಕಪ್ಪಾಗುತ್ತದೆ ಹಾಗಾಗಿ ದೋಸೆ ಮಾಡುವ ಮುಂಚೆ ಕಟ್ ಮಾಡಿಕೊಂಡರೆ ಸಾಕು). ಮಿಕ್ಸಿ ಜಾರಿಯಲ್ಲಿ ನೆನಸಿಟ್ಟ ಅಕ್ಕಿ, ತುಂಡರಿಸಿದ ಬಾಳೆದಿಂಡು, ರುಚಿಗೆ ಬೇಕಾದಷ್ಟು ಉಪ್ಪು, ಸ್ವಲ್ಪ ನೀರು ಬೆರೆಸಿ ರುಬ್ಬಿಕೊಂಡು ಹಿಟ್ಟು ಮಾಡಿಕೊಳ್ಳಬೇಕು.ಕಾವಲಿಯನ್ನು ಒಲೆಯ ಮೇಲೆ ಇಟ್ಟು ಕಾಯಿಸಿಕೊಂಡು ಎಣ್ಣೆ ಹಚ್ಚಿ ದೋಸೆ ಮಾಡಿಕೊಂಡು ತಿಂದರೆ ಆರೋಗ್ಯವನ್ನು ಕಾಪಾಡುತ್ತದೆ.
ಇದನ್ನೂ ಓದಿ:Shankha Pushpa dosa recipe:ಶಂಖ ಪುಷ್ಪ ದೋಸೆಯಿಂದ ಹೆಚ್ಚುತ್ತೆ ಮಕ್ಕಳ ನೆನಪಿನ ಶಕ್ತಿ
ಇದನ್ನೂ ಓದಿ:Custard Apple Kheer Recipe:ಸೀತಾಫಲ ಹಣ್ಣಿನ ಖೀರ್ ಮಾಡುವ ವಿಧಾನ
ಬಾಳೆದಿಂಡು
ವರ್ಷಕ್ಕೆ ಎರಡು ಬಾರಿಯಾದರು ಬಾಳೆ ದಿಂಡಿನ ಪಲ್ಯ ತಿನ್ನುವುದರಿಂದ ಹೊಟ್ಟೆ ನೋವು, ಕಲ್ಮಶ, ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ. ಬಾಳೆ ದಿಂಡಿನಲ್ಲಿ ನಾರಿನ ಅಂಶ ಇರುವುದರಿಂದ ಆಹಾರವು ಬೇಗ ಜೀರ್ಣ ಆಗುವುದಕ್ಕೆ ಸಹಕಾರಿಯಾಗಿದೆ. ಬಾಳೆ ದಿಂಡಿನಿಂದ ಜ್ಯೂಸ್ ಮಾಡಿ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಮತ್ತು ಮೂತ್ರನಾಳದ ಸೋಂಕನ್ನು ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿದೆ. ಬಾಳೆ ದಿಂಡು ಸೇವನೆ ಮಾಡುವುದರಿಂದ ತೂಕ ಸಮತೋಲನದಲ್ಲಿರುತ್ತದೆ. ದೇಹದಲ್ಲಿ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಫೈಬರ್ ಅಂಶ ಇರುವುದರಿಂದ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಸಕ್ಕರೆ ಕಾಯಿಲೆ ಇರುವವರು ಬಾಳೆ ದಿಂಡಿನ ರಸವನ್ನು ಸೇವನೆ ಮಾಡಿದರೆ ತಕ್ಕಮಟ್ಟಿಗೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಬಾಳೆ ದಿಂಡಿನ ಪಲ್ಯವನ್ನು ಆಗಾಗ ಮಾಡಿ ತಿನ್ನುವುದರಿಂದ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು.
Banana Stem Recipe Banana stem that cures many problems of the body