Face Pack:ಟ್ಯಾನ್ ಆಗದಂತೆ ನಿಮ್ಮನ್ನು ರಕ್ಷಿಸಿಕೊಳ್ಳಲು‌ ಇಲ್ಲಿದೆ ಫೇಸ್ ಪ್ಯಾಕ್

(Face Pack)ಕೆಲವರು ಟ್ಯಾನ್ ಆಗಲೆಂದು ಬಿಚ್ ಇರುವ ಸ್ಥಳಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಇನ್ನು ಕೆಲವರು ಟ್ಯಾನ್ ಆಗಲು ಇಷ್ಟ ಪಡುವುದಿಲ್ಲ ಹಾಗಾಗಿ ಬಿಸಿಲಿಗೆ ಹೋಗುವ ಮುನ್ನ ಕ್ರಿಮ್ ಹಚ್ಚಿಕೊಂಡು ಹೋಗುತ್ತಾರೆ. ಟ್ಯಾನ್‌ ಆಗಬಾರದು ಎಂದು ಅಂಗಡಿಯಿಂದ ಫೇಸ್ ಪ್ಯಾಕ್ ಖರೀದಿಸಿ ಮುಖಕ್ಕೆ ಹಚ್ಚುತ್ತಾರೆ. ಖರೀದಿಸಿದಂತಹ ಸನ್ಸ್ ಕ್ರೀಮ್, ಫೇಸ್ ಫ್ಯಾಕ್ ನಲ್ಲಿ ಹೆಚ್ಚು ಕೆಮಿಕಲ್ ಬಳಸುವುದರಿಂದ ಚರ್ಮಕ್ಕೂ ಹಾನಿ ಇದರ ಬದಲು ಮನೆಯಲ್ಲೇ ಸುಲಭದಲ್ಲಿ ಫೇಸ್ ಪ್ಯಾಕನ್ನು ತಯಾರಿಸಿಕೊಳ್ಳಬಹುದು. ಇದನ್ನು ಮಾಡುವ ವಿಧಾನವನ್ನು ಈ ಕೆಳಗೆ ತಿಳಿಸಲಾಗಿದೆ.

Face Pack : ಬೇಕಾಗುವ ಸಾಮಗ್ರಿಗಳು:

  • ಅಕ್ಕಿ ಹಿಟ್ಟು
  • ಮುಲ್ತಾನಿ ಮಿಟ್ಟಿ
  • ಕಡಲೆ ಹಿಟ್ಟು
  • ಆಲೂಗಡ್ಡೆಯ ನೀರು
  • ಸೌತೆಕಾಯಿಯ ನೀರು

ಮಾಡುವ ವಿಧಾನ:
ಒಂದು ಬಟ್ಟಲಿನಲ್ಲಿ ಒಂದು ಚಮಚ ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಮುಲ್ತಾನಿ ಮಿಟ್ಟಿ, ಆಲೂಗಡ್ಡೆಯ ನೀರು, ಸೌತೆಕಾಯಿಯ ನೀರನ್ನು ಹಾಕಬೇಕು. ನಂತರ ಬಟ್ಟಲಿನಲ್ಲಿ ಹಾಕಿದ ಪದಾರ್ಥವನ್ನು ಕಲಸಿಕೊಂಡರೆ ಪೇಸ್ ಪ್ಯಾಕ್ ರೆಡಿಯಾಗುತ್ತದೆ . ರೆಡಿಮಾಡಿ ಇಟ್ಟುಕೊಂಡ ಪ್ಯಾಕನ್ನು ಮುಖಕ್ಕೆ ಹಚ್ಚಿಕೊಂಡು ಹದಿನೈದು ನಿಮಿಷಗಳ ನಂತರ ತಣ್ಣಿರಿನಿಂದ ಮುಖವನ್ನು ತೊಳೆದರೆ ಟ್ಯಾನ್ ಕಡಿಮೆಯಾಗುತ್ತದೆ ಜೊತೆಗೆ ಮುಖ ಕಾಂತಿಯುತವಾಗಿ ಹೊಳೆಯುತ್ತದೆ. ಮಹಿಳೆಯರು ಅಷ್ಟೇ ಅಲ್ಲದೆ ಪುರುಷರು ಸಹ ಈ ಫೇಸ್ ಫ್ಯಾಕ್‌ ಅನ್ನು ಮುಖಕ್ಕೆ ಹಚ್ಚ ಬಹುದು.

ಕಡಲೆ ಹಿಟ್ಟು:
ಕಡಲೆ ಹಿಟ್ಟಿಗೆ ಸ್ವಲ್ಪ ನೀರನ್ನು ಹಾಕಿ ಕಲಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಬೇಕು. ನಂತರ ಮುಖವನ್ನು ತೊಳೆದರೆ ಆಯ್ಲಿ ಸ್ಕಿನ್ ಇರುವವರಿಗೆ ಸಹಕಾರಿಯಾಗಿದೆ. ಜೊತೆಗೆ ಮುಖದಲ್ಲಿರುವ ಕಲೆಯನ್ನು ಕಡಿಮೆ ಮಾಡುತ್ತದೆ. ಕಣ್ಣಿನ ಭಾಗದಲ್ಲಿ ಡಾರ್ಕ್ ಸರ್ಕಲ್ಸ್ ಇದ್ದರೆ ಅಕ್ಕಿ ಹಿಟ್ಟಿನ ಜೊತೆ ಕಡಲೆ ಹಿಟ್ಟನ್ನು ಬೆರೆಸಿ ಪೇಸ್ ಪ್ಯಾಕ್ ಮಾಡಿಕೊಂಡು ಮುಖಕ್ಕೆ ಲೆಪನ ಮಾಡಿಕೊಂಡರೆ ಕಾಲಕ್ರಮೇಣ ಡಾರ್ಕ್ ಸರ್ಕಲ್ಸ್ ಅನ್ನು ಕಡಿಮೆ ಮಾಡುತ್ತದೆ.

ಅಕ್ಕಿ ಹಿಟ್ಟು:
ಎಣ್ಣೆಯುಕ್ತ ಚರ್ಮವನ್ನು ಹೊಂದಿರುವರಿಗೆ ಅಕ್ಕಿ ಹಿಟ್ಟು ಹೆಚ್ಚು ಉಪಯುಕ್ತವಾಗಿದೆ. ಅಕ್ಕಿ ಹಿಟ್ಟಿನಿಂದ ಮಾಡಿದ ಪೇಸ್ ಪ್ಯಾಕನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ನೈಸರ್ಗಿಕವಾಗಿ ಮುಖದ ಹೊಳಪನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ.

ಇದನ್ನೂ ಓದಿ:Beauty Tips : ಚಳಿಗಾಲದಲ್ಲಿ ಮುಖದಕಾಂತಿಯನ್ನು ಹೆಚ್ಚಿಸಿಕೊಳ್ಳಬೇಕೇ ? ಹಾಗಾದರೆ ಬಳಸಿ ಈ ಬ್ಯುಟಿ ಟಿಪ್ಸ್

ಇದನ್ನೂ ಓದಿ:Hair Pack : ಕೂದಲು ಉದುರುವ ಸಮಸ್ಯೆ ಕಾಡುತ್ತಿದೆಯೇ ? ಹಾಗಾದರೆ ಮನೆಯಲ್ಲೇ ಮಾಡಿ ಈ ಹೆರ್‌ ಪ್ಯಾಕ್

ಮುಲ್ತಾನಿ ಮಿಟ್ಟಿ:
ಮುಲ್ತಾನಿ ಮಿಟ್ಟಿ ಮಣ್ಣು ತ್ವಚೆಯನ್ನು ಆಳವಾಗಿ ಸ್ವಚ್ಛಗೊಳಿಸಲು ಸಹಕಾರಿಯಾಗಿದೆ. ಮುಲ್ತಾನಿ ಮಿಟ್ಟಿ ಮಣ್ಣನ್ನು ಬಳಸುವುದರಿಂದ ಮುಖದಲ್ಲಿರುವ ಮೋಡವೆಯನ್ನು ಕಡಿಮೆ ಮಾಡಬಹುದು ಮತ್ತು ಸೋಂಕುಗಳು ಚಿಕಿತ್ಸೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.

Here is a face pack to protect yourself from getting tan

Comments are closed.