health

Kannada Health tips : ಊಟ ಮಾಡುವಾಗ ನೀರು ಕುಡಿಯ ಬಾರದೇ ? ಯಾವಾಗ ನೀರು ಕುಡಿಯೋದು ಬೆಸ್ಟ್‌ : ಡಾ.ರಾಜುಕೃಷ್ಣಮೂರ್ತಿ

Published by
Kannada News Next Desk

drink before or after food : ಊಟ ಮಾಡುವ ವೇಳೆಯಲ್ಲಿ ನೀರು ಕುಡಿಯಬಾರದು ಅಂತಾ ಬಹುತೇಕರು ಸಲಹೆ ನೀಡ್ತಾರೆ. ಇನ್ನೂ ಕೆಲವರು ಊಟ ಮಾಡಿದ ಮೇಲೆ ನೀರು ಕುಡಿಯ ಬಾರದು ಅಂತಾನೂ ಹೇಳ್ತಾರೆ. ಹಾಗಾದ್ರೆ ಊಟದ ಹೊತ್ತಲ್ಲಿ ಯಾವಾಗ ನೀರು ಕುಡಿಯೋದು ಬೆಸ್ಟ್‌ ? ಈ ಕುರಿತು ಖ್ಯಾತ ವೈದ್ಯರಾದ ಡಾ.ರಾಜು ಕೃಷ್ಣಮೂರ್ತಿ (Dr. Raju Krishnamurthy) ಅವರು ಕೆಲವೊಂದು ಆರೋಗ್ಯ ಸಲಹೆ (Health Tips) ನೀಡಿದ್ದಾರೆ.

Image Credit to Original Source

ಹೌದು, ಊಟಕ್ಕಿಂತ ಮೊದಲು ಒಂದು ಲೋಟ ನೀರು ಕೊಡುವುದು ಭಾರತೀಯ ಸಂಪ್ರದಾಯ. ಇದು ರಾಮಾಯಣ, ಮಹಾಭಾರತದಲ್ಲಿಯೂ ಉಲ್ಲೇಖವಿದೆ. ಒಂದು ಲೋಟ ನೀರು ಕೊಡುವುದರಿಂದ ಬಾಳೆ ಎಲೆ ತೊಳೆಯೋದಕ್ಕೆ, ತಟ್ಟೆ ತೊಳೆದುಕೊಳ್ಳುವುದಕ್ಕೆ ಅನುಕೂಲವಾಗುತ್ತೆ ಅಂತಾ ಈ ಸಂಪ್ರದಾಯವನ್ನು ಪೂರ್ವಜರು ಅಳವಡಿಸಿಕೊಂಡಿದ್ದರು.

ಆದ್ರೆ ಊಟಕ್ಕೆ ಮೊದಲು ಒಂದು ಲೋಟ ನೀರು ನೀಡುವುದು ಆರೋಗ್ಯದ ದೃಷ್ಟಿಯಿಂದಲೂ ಅನುಕೂಲಕರ. ಹೌದು, ತಿಂದ ಆಹಾರ ಚೆನ್ನಾಗಿ ಜೀರ್ಣ ಆಗಬೇಕು, ನಾವು ಆರೋಗ್ಯವಾಗಿ ಇರಬೇಕು ಅಂದ್ರೆ ಊಟಕ್ಕಿಂತ ಮೊದಲು ಒಂದೆರಡು ಸಿಪ್‌ ನೀರು ಕುಡಿಯೋದು ಬಹಳ ಉತ್ತಮ. ಕೆಲಸ ಮಾಡಿ, ದಣಿದು ಬಂದು ಊಟಕ್ಕೆ ಕುಳಿತಾಗ ಗಂಟಲಲ್ಲಿ ಡ್ರೈನೆಸ್‌ ಇರುತ್ತೆ.

ಇದನ್ನೂ ಓದಿ : Sleeping Tips : ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದ್ರೆ ಏನಾಗುತ್ತೆ ? ಯಾವ ದಿಕ್ಕಿಗೆ ಮಲಗೋದು ಸೂಕ್ತ, ಇಲ್ಲಿದೆ ವೈಜ್ಞಾನಿಕ ಕಾರಣ

ಈ ಡ್ರೈನೆಸ್‌ ಇದ್ದಾಗ ಗಂಟಲಿಗೆ ಆಹಾರ ಹೋದಾಗ, ಗಂಟಲು ಕಟ್ಟಿದ ಹಾಗೆ, ಬಿಕ್ಕಳಿಗೆ ಬರುತ್ತೆ. ಒಂದೊಮ್ಮೆ ಎರಡು ಸಿಪ್‌ ನೀರು ಕುಡಿಯೋದ್ರಿಂದ ಗಂಟಲು ಕಟ್ಟಿದ ಸಮಸ್ಯೆ ದೂರವಾಗುತ್ತೆ. ಅಷ್ಟೇ ಅಲ್ಲಾ, ಎದೆಯಲ್ಲಿ ಆಹಾರ ಹಿಡಿದ ಹಾಗೆ ಆಗುವ ಸಮಸ್ಯೆ ಕೂಡ ಪರಿಹಾರ ಆಗುತ್ತೆ. ಜೊತೆಗೆ ಗ್ಯಾಸ್‌ಸ್ಟ್ರಿಕ್‌, ಅಜೀರ್ಣ ಸಮಸ್ಯೆಗೆ ಕೂಡ ಪರಿಹಾರ ಸಿಗುತ್ತೆ.

ನಾವು ಸೇವಿಸುವ ಆಹಾರ ಪದ್ದತಿಯಿಂದಲೇ ಕೆಲವೊಮ್ಮೆ ಆಸಿಡಿಟಿ ಸಮಸ್ಯೆ ತಲೆ ದೋರಲಿದೆ. ಹೀಗಾಗಿ ಊಟಕ್ಕಿಂತ ಮೊದಲು ಎರಡರಿಂದ ಮೂರು ಸಿಪ್‌ ನೀರು ಕುಡಿಯೋದು ಆರೋಗ್ಯಕರ. ಹೀಗಾಗಿ ಊಟಕ್ಕಿಂತ ಮೊದಲು ಒಂದು ಲೋಟದಲ್ಲಿ ನೀರು ಇಟ್ಟುಕೊಂಡು, ಒಂದೆರಡು ಸಿಪ್‌ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ ಎನ್ನುತ್ತಾರೆ ಡಾ. ರಾಜು ಕೃಷ್ಣಮೂರ್ತಿ.

Image Credit to Original Source

ಊಟದ ಮಧ್ಯೆ ನೀರು ಕುಡಿಯಬಹುದೇ ?

ಇನ್ನು ಕೆಲವರನ್ನು ಕಾಡುತ್ತಿರೋ ಪ್ರಶ್ನೆ ಅಂದ್ರೆ ಊಟದ ನಡುವಲ್ಲಿ ನೀರು ಕುಡಿಯ ಬಹುದೇ ಅನ್ನೋದು ? ಹೌದು, ಸಾಮಾನ್ಯವಾಗಿ ಊಟದ ನಡುವಲ್ಲೇ ನೀರು ಕುಡಿಯುವ ಅಭ್ಯಾಸ ಹಲವರಿಗೆ ಇರುತ್ತದೆ. ಆದರೆ ಈ ಅಭ್ಯಾಸ ಒಳ್ಳೆಯದಲ್ಲ ಅಂತಾ ಹಲವರು ಹೇಳ್ತಾರೆ. ಆದರೆ ವೈಜ್ಞಾನಿಕವಾಗಿ ಊಟದ ನಡುವಲ್ಲೇ ನೀರು ಕುಡಿಯೋದು ಆರೋಗ್ಯದ ದೃಷ್ಟಿಯಿಂದ ಕೆಟ್ಟದಲ್ಲ, ಬದಲಾಗಿ ಅನುಕೂಲಕರವೂ ಅಲ್ಲ.

ಇದನ್ನೂ ಓದಿ : ಪ್ರೋಟಿನ್‌ ಶೇಕ್‌ ಕುಡಿಯೋದ್ರಿಂದ ಕಾರ್ಡಿಕ್‌ ಅರೆಸ್ಟ್‌ ! ಡಾ. ರಾಜುಕೃಷ್ಣಮೂರ್ತಿ ಅವರು ಹೇಳೋದೇನು ?

ವೇಗವಾಗಿ ಊಟ ಮಾಡುವುದು, ಖಾರವಾಗಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡುವ ಕಾರಣದಿಂದಲೇ ಹೆಚ್ಚಾಗಿ ಊಟದ ಮಧ್ಯೆದಲ್ಲಿ ನೀರು ಕುಡಿಯುವ ಅಗತ್ಯತೆ ಬರುತ್ತದೆ. ಆದರೆ ನಿಧಾನವಾಗಿ ಊಟ ಮಾಡುವ ಅಭ್ಯಾಸ ಮಾಡಿಕೊಂಡು, ಹೆಚ್ಚು ಖಾರ ಇಲ್ಲದ ಆಹಾರ ಸೇವನೆ ಮಾಡಿದ್ರೆ ಊಟದ ಮಧ್ಯದಲ್ಲಿ ನೀರು ಕುಡಿಯುವ ಪ್ರಮೆಯ ಬರೋದಿಲ್ಲ. ಆದರೆ ಊಟದ ಮಧ್ಯದಲ್ಲಿ ನೀರು ಕುಡಿದ್ರೆ ಯಾವುದೇ ಅಪಾಯವಿಲ್ಲ.

ಊಟ ಮಾಡಿದ ೨ ಗಂಟೆಯ ಬಳಿಕ ನೀರು ಕುಡಿಯಬೇಕೇ ?

ಬಹುತೇಕರು ಊಟ ಮಾಡಿದ ನಂತರ ನೀರು ಕುಡಿಯ ಬಾರದು ಅಂತಾ ಸಲಹೆ ನೀಡುತ್ತಾರೆ. ಕೆಲವವರು ಊಟ ಮಾಡಿದ ೨ ಗಂಟೆಯ ನಂತರವೇ ನೀರು ಕುಡಿಯ ಬೇಕು ಅಂತಾನೇ ಹೇಳ್ತಾರೆ. ಆದರೆ ಆರೋಗ್ಯ, ಜೀರ್ಣ ಕ್ರೀಯೆ ಉತ್ತಮವಾಗ ಬೇಕು ಅಂದ್ರೆ ಕಡ್ಡಾಯವಾಗಿ ಊಟವಾದ ಬಳಿಕ ನೀರು ಕುಡಿಯಲೇ ಬೇಕು.

ಇದನ್ನೂ ಓದಿ : Noni Juice : ನೋನಿ ಜ್ಯೂಸ್‌ ಕುಡಿಯೋದು ಅಪಾಯಕಾರಿ : ಮಧುಮೇಹ ನಿಯಂತ್ರಣಕ್ಕೆ ಬರೋದು ನಿಜನಾ ?

ಊಟ ಮಾಡೋದಕ್ಕೆ ಶುರು ಮಾಡುತ್ತಿದ್ದಂತೆಯೇ ದೇಹದಲ್ಲಿ ಜೀರ್ಣ ಕ್ರೀಯೆ ಆರಂಭಗೊಳ್ಳುತ್ತದೆ. ಊಟ ಮಾಡಿದ ಕೂಡಲೇ ನೀರು ಕುಡಿಯೋದ್ರಿಂದ ತಿಂದ ಆಹಾರ ಚೆನ್ನಾಗಿ ಜೀರ್ಣ ಕ್ರೀಯೆ ಆಗಲಿದೆ. ಇದರಿಂದ ಆಸಿಡಿಟಿಯಂತಹ ಸಮಸ್ಯೆಗಳು ಕೂಡ ದೂರವಾಗಲಿದೆ. ಸಾಮಾನ್ಯವಾಗಿ ನೀವು ಹೊಟ್ಟೆ ತುಂಬಾ ಊಟ ಮಾಡಬಾರದು. ಹೊಟ್ಟೆ ತುಂಬಲು ಇನ್ನೂ ಎರಡು ತುತ್ತು ಬಾಕಿ ಇರುವಾಗಲೇ ಊಟ ಮಾಡೋದನ್ನು ನಿಲ್ಲಿಸಬೇಕು.

ಕಡಿಮೆ ಊಟ ಮಾಡಿ ಆ ಜಾಗ ತುಂಬಲು ನೀರು ಕುಡಿಯೋದು ಬಹಳ ಮುಖ್ಯ. ಯಾವುದೇ ಆಹಾರ ಜೀರ್ಣ ಆಗಲು ಕನಿಷ್ಠ ಎರಡರಿಂದ ಮೂರು ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ದೇಹಕ್ಕೆ ಬೇಕಾದಷ್ಟು ನೀರು ಕುಡಿಯೋದು ಬಹಳ ಮುಖ್ಯ. ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಕಡ್ಡಾಯವಾಗಿ ಊಟಕ್ಕೆ ಮೊದಲು ಒಂದೆರಡು ಸಿಪ್‌ ನೀರು ಕುಡಿದು, ಊಟದ ನಂತರ ಚೆನ್ನಾಗಿ ನೀರು ಕುಡಿಯೋದು ಬಹಳ ಉತ್ತಮ.

Kannada Health tips: is it good to drink before or after food, Drinking Water at the Right Time Dr. Raju Krishnamurthy

Share