ನಿಫಾ ವೈರಸ್ ಪ್ರಕರಣ ಹೆಚ್ಚಳ: ಶಾಲೆಗಳಿಗೆ ರಜೆ‌ ಘೋಷಣೆ, ಕೇರಳದಲ್ಲಿ ಲಾಕ್‌ಡೌನ್‌ ಜಾರಿ ?

Increase in Nipah Virus Cases Holidays for schools full lockdown imposed in Kerala ಕೇರಳದಲ್ಲಿ ನಿಫಾ ವೈರಸ್ (Nipah Virus ) ಹೆಚ್ಚುತ್ತಿದ್ದು, ಶಾಲೆಗಳಿಗೆ ರಜೆ (kerala School Holiday) ಘೋಷಣೆ ಮಾಡಲಾಗಿದೆ. ಸರಕಾರಿ ಕಚೇರಿ (Government office Closed) ಮುಚ್ಚಲಾಗಿದ್ದು, ಕೇರಳದಲ್ಲಿ ಸಂಪೂರ್ಣ ಲಾಕ್‌ಡೌನ್‌ (Kerala Lockdown) ಜಾರಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಕೋಝಿಕ್ಕೋಡ್: ಕೇರಳದಲ್ಲಿ ನಿಫಾ ವೈರಸ್‌ (Nipah Virus ) ಪ್ರಕರಣ ದಿನೇ ದಿನೇ ಹೆಚ್ಚಳವಾಗುತ್ತಿದೆ. ಈಗಾಗಲೇ ನಿಫಾ ಜ್ವರಕ್ಕೆ ಇಬ್ಬರು ಬಲಿಯಾಗಿದ್ದಾರೆ. ಇದರ ಬೆನ್ನಲ್ಲೇ ಶಾಲೆ ಹಾಗೂ ಕೆಲವು ಸರಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಏಳು ಗ್ರಾಮಗಳನ್ನು ಕಂಟೈನ್ಮೆಂಟ್‌ ವಲಯ ಎಂದು ಘೊಷಿಸಲಾಗಿದ್ದು, ಕೇರಳದಲ್ಲಿ ಸಂಪೂರ್ಣ ಲಾಕ್‌ಡೌನ್‌ (Kerala Lockdown) ಜಾರಿಯಾಗಲಿದೆ ಎನ್ನಲಾಗುತ್ತಿದೆ.

ಕೇರಳ ರಾಜ್ಯದಲ್ಲಿ ನಿಫಾ ಜ್ವರದಿಂದಾಗಿ ಇಬ್ಬರು ಈಗಾಗಲೇ ಮೃತಪಟ್ಟಿದ್ದು, ಸದ್ಯ ಕೋಝಿಕ್ಕೋಡ್‌ನಲ್ಲಿ ಮತ್ತೋರ್ವ ವ್ಯಕ್ತಿಗೆ ನಿಫಾ ಪಾಸಿಟಿನ್‌ ಇರುವುದು ದೃಢಪಟ್ಟಿದೆ. ಇದೀಗ ಒಟ್ಟು ಸೋಂಕಿತರ ಸಂಖ್ಯೆ 3 ಕ್ಕೆ ಏರಿಕೆಯಾಗಿದೆ.

Kerala Increase in Nipah Virus Cases Holidays for schools full lockdown imposed in Kerala
Image Credit to Original Source

ಕೇರಳ ಜಾರಿಯಾಗುತ್ತಾ ಸಂಪೂರ್ಣ ಲಾಕ್‌ಡೌನ್ ?

ನಿಫಾ ವೈರಸ್‌ ಸೋಂಕು ಹರಡುವುದನ್ನು ತಡೆಯಲು ಕೇರಳ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದಲ್ಲಿ ಆದರೆ ರಾಜ್ಯದಲ್ಲಿ ಭಾಗಶಃ ಲಾಕ್‌ಡೌನ್‌ ಮಾದರಿಯನ್ನು ಕೈಗೊಂಡಿದೆ. ಆದರೂ ರಾಜ್ಯದ್ಲಲಿ ಇದುವರೆಗೂ ಸಂಪೂರ್ಣ ಲಾಕ್‌ಡೌನ್‌ ಬಗ್ಗೆ ಯಾವುದೇ ಘೋಷಣೆಯನ್ನು ಮಾಡಿಲ್ಲ.

ಕೇರಳದಲ್ಲಿ ನಿಫಾ ಸೋಂಕಿತ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇರಳ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಕೇರಳದಲ್ಲಿ ಇಲ್ಲಿಯವರೆಗೆ, ಮೂರು ಮಾದರಿಗಳಲ್ಲಿ ನಿಫಾ ಪಾಸಿಟಿವ್ ಎಂದು ಪರೀಕ್ಷಿಸಲಾಗಿದೆ.

ರಾಜ್ಯದಲ್ಲಿ ನಿಫಾ ಸಂಪರ್ಕಿತರನ್ನು ಪತ್ತೆಹಚ್ಚುವ ಕಾರ್ಯವನ್ನು ಆರಂಭಿಸಿದ್ದೇವೆ. 706 ಸಂಪರ್ಕಗಳಲ್ಲಿ, 77 ಹೈ-ರಿಸ್ಕ್ ವಿಭಾಗದಲ್ಲಿದ್ದಾರೆ, 153 ಆರೋಗ್ಯ ಕಾರ್ಯಕರ್ತರು ಕಡಿಮೆ-ಅಪಾಯದ ವಿಭಾಗದಲ್ಲಿದ್ದಾರೆ. ಆರೋಗ್ಯ ಇಲಾಖೆ ನಿಫಾ ತಡೆಗೆ ಸಕಲ ರೀತಿಯ ಸಿದ್ದತೆಗಳನ್ನು ಮಾಡಿಕೊಂಡಿದೆ ಎಂದು ವೀಣಾ ಜಾರ್ಜ್ ಹೇಳಿದರು.

ಇದನ್ನೂ ಓದಿ : ಟೀ ಜೊತೆ ಸ್ನ್ಯಾಕ್ಸ್ ತಿನ್ನೋದ್ರಿಂದ ಇಷ್ಟೆಲ್ಲಾ ಸಮಸ್ಯೆಗಳಿವೆಯಾ ?

ಕೇರಳದಲ್ಲಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಒಟ್ಟು 19 ಸಮಿತಿಗಳನ್ನು ರಚಿಸಲಾಗಿದೆ. ಇನ್ನು ಟೆಲಿಮೆಡಿಸಿನ್ ಸೌಲಭ್ಯವನ್ನು ಏರ್ಪಡಿಸಿದ್ದೇವೆ. ನಿಪಾಹ್ ವೈರಸ್ ನಿಯಂತ್ರಣಕ್ಕಾಗಿ ನಾವು 19 ಸಮಿತಿಗಳನ್ನು ರಚಿಸಿದ್ದೇವೆ. ಹೆಚ್ಚಿನ ಅಪಾಯದ ವರ್ಗದಲ್ಲಿರುವ ಯಾವುದೇ ವ್ಯಕ್ತಿಗೆ ಯಾವುದೇ ರೋಗಲಕ್ಷಣಗಳಿಲ್ಲ ಎಂದು ವೀಣಾ ಜಾರ್ಜ್ ಹೇಳಿದರು.

ಇನ್ನು ರೋಗಿಗಳು ತಮ್ಮ ಮನೆಯಲ್ಲಿಯೇ ಇರಲು ಸೂಚಿಸಲಾಗಿದೆ. ಹೆಚ್ಚು ಅಪಾಯದಲ್ಲಿರುವ ರೋಗಿಗಳು ಮಾತ್ರವೇ ಕಾಲ್‌ಸೆಂಟರ್‌ ಅನ್ನು ಸಂಪರ್ಕ ಮಾಡಬಹುದಾಗಿದೆ. ಐಸೋಲೇಶನ್‌ನಲ್ಲಿರುವ ವ್ಯಕ್ತಿಯು ಯಾವುದೇ ರೋಗಲಕ್ಷಣಗಳು ಪತ್ತೆಯಾದ್ರೆ ಮಾತ್ರವೇ ಅವರನ್ನು ವೈದ್ಯಕೀಯ ಕಾಲೇಜಿಗೆ ಸ್ಥಳಾಂತರ ಮಾಡಲಾಗುವುದು ಎಂದಿದ್ದಾರೆ.

Kerala Increase in Nipah Virus Cases Holidays for schools full lockdown imposed in Kerala
Image Credit to Original Source

ಕಂಟೈನ್ಮೆಂಟ್‌ ಝೋನ್‌ಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧ :

ಕೋವಿಡ್‌ ವೈರಸ್‌ ಸೋಂಕು ಕಾಣಿಸಿಕೊಂಡಾಗ ಕೈಗೊಂಡಿರುವ ಕ್ರಮಗಳ ಮಾದರಿಯಲ್ಲಿಯೇ ಇದೀಗ ನಿಫಾ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೇರಳ ಸರಕಾರ ಕೈಗೊಂಡದಿಎ. ಕಂಟೈನ್ಮೆಂಟ್‌ ವಲಯಗಳಲ್ಲಿ ವ್ಯಕ್ತಿಗಳಿಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸೂಚಿಸಲಾಗಿದೆ.

ಮಾಸ್ಕ್‌ ಧರಿಸಲು ಮತ್ತು ಹ್ಯಾಂಡ್‌ ಸ್ಯಾನಿಟೈಸರ್‌ಗಳನ್ನು ಬಳಸುವಂತೆ ಜನರಲ್ಲಿ ಮನವಿ ಮಾಡಲಾಗಿದೆ. ಇನ್ನು ಕಂಟೈನ್ಮೆಂಟ್‌ ವಲಯಗಳಿಗೆ ಪ್ರವೇಶ ಹಾಗೂ ನಿರ್ಗಮನವನ್ನು ಕಟ್ಟುನಿಟ್ಟಾನಿ ನಿಷೇಧಿಸಲಾಗಿದೆ. ಪ್ರತೀ ವಾರ್ಡುಗಳ ಪ್ರವೇಶ ದ್ವಾರದಲ್ಲಿ ಬ್ಯಾರಿಕೇಡ್‌ಗಳನ್ನು ಇರಿಸಲಾಗಿದೆ. ಕಂಟೈನ್‌ಮೆಂಟ್ ವಲಯಗಳಲ್ಲಿ ಮೆಡಿಕಲ್ ಶಾಪ್‌ಗಳು ಮತ್ತು ಅಗತ್ಯ ಚಿಲ್ಲರೆ ಅಂಗಡಿಗಳು ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಆದರೆ ವ್ಯವಹಾರದ ಸಮಯವನ್ನು ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ : ಉಚಿತ ಎಲ್‌ಪಿಜಿ ಸಂಪರ್ಕ: ಬಡ, ಮಧ್ಯಮ ವರ್ಗದವರಿಗೆ ಸಿಹಿಸುದ್ದಿ, 75 ಲಕ್ಷ ಕುಟುಂಬಗಳಿಗೆ ಉಚಿತ ಗ್ಯಾಸ್

ಕಂಟೈನ್‌ಮೆಂಟ್ ವಲಯದೊಳಗಿನ ಮೆಡಿಕಲ್ ಶಾಪ್‌ಗಳು, ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳು ಸಮಯದ ಮಿತಿಯಿಲ್ಲದೆ ಕಾರ್ಯನಿರ್ವಹಿಸ ಬಹುದು. ಆದರೆ ಮುಂದಿನ ಸೂಚನೆ ಬರುವವರೆಗೂ ಬ್ಯಾಂಕ್‌ಗಳು, ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳು ಮುಚ್ಚಿರುತ್ತವೆ.

ಕಂಟೈನ್‌ಮೆಂಟ್ ವಲಯಗಳಲ್ಲಿ ಸಾರ್ವಜನಿಕ ರಸ್ತೆ ಸಾರಿಗೆಯನ್ನು ನಿಷೇಧಿಸಲಾಗಿದೆ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳನ್ನು ಕಂಟೈನ್‌ಮೆಂಟ್ ವಲಯಗಳಲ್ಲಿ ನಿಲ್ಲಿಸುವಂತಿಲ್ಲ.

Increase in Nipah Virus Cases Holidays for schools full lockdown imposed in Kerala

Comments are closed.