ಇರಾನ್ : (10 years in prison) ದಿನದಿಂದ ದಿನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ವಿಡಿಯೋ ಮಾಡುವುದರ ಮೂಲಕ, ರೀಲ್ಸ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ಸೆಲೆಬ್ರಿಟಿಗಳಾಗಿದ್ದಾರೆ. ಸಾಮಾಜಿಕ ಮಾದ್ಯಮದಲ್ಲಿ ಫೇಮಸ್ ಆಗಲು ಹಲವರು ಕಷ್ಟ ಪಡುತ್ತಾರೆ. ಅಂತೆಯೇ ಸಾಮಾಜಿಕ ಮಾಧ್ಯಮದಲ್ಲಿ ದಂಪತಿಗಳು ವಿಡಿಯೋ ಮಾಡಿ ನಂತರ ಜೈಲು ಶಿಕ್ಷೆಗೆ ಗುರಿಯಾದ ಘಟನೆ ನಡೆದಿದೆ.
ಹಾಗಿದ್ದರೆ ವಿಡಿಯೋದಲ್ಲಿರುವುದೇನು ?
ದಂಪತಿಗೆ ಜೈಲು ಶಿಕ್ಷೆಯಾಗಲು ಕಾರಣವೇನು ಎಂಬುದನ್ನು ತಿಳಿಯಬೇಕಾದರೆ ಈ ಸ್ಟೋರಿಯನ್ನು ನೀವು ಓದಲೇಬೇಕು. ಇರಾನ್ ನ ದಂಪತಿಗಳು ಟೆಹ್ರಾನ್ ಟವರ್ ಮುಂದೆ ನಿಂಟು ರೊಮ್ಯಾಂಟಿಕ್ ಆಗಿ ನೃತ್ಯ ಮಾಡಿ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಇರಾನ್ ಆಡಳಿತ ದಂಪತಿಗಳಿಗೆ ಶಿಕ್ಷೆಯನ್ನು ನೀಡಿದೆ. ಅಸ್ತಿಯಾಜ್ ಹಘಿಘಿ ಹಾಗೂ ಆಕೆಯ ಪತಿ ಅಮೀರ್ ಮೊಹಮ್ಮದ್ ಅಹ್ಮದಿ ಅವರಿಗೆ ಟೆಹ್ರಾನ್ ನ ಟವರ್ ಮುಂದೆ ರೊಮ್ಯಾಂಟಿಕ್ ಆಗಿ ನೃತ್ಯ ಮಾಡಿದ್ದಕ್ಕೆ ಇರಾನ್ ಆಡಳಿತವು ಹತ್ತು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿದೆ.
ಇರಾನ್ ಹುಡುಗಿಯರು ಸ್ಕಾರ್ಫ್ ಧರಿಸುವಂತಿಲ್ಲ !
ಇರಾನ್ ನಲ್ಲಿ ಯಾವುದೇ ಹುಡುಗಿಯರು ತಲೆಗೆ ಸ್ಕಾರ್ಫ್ ಧರಿಸದೇ ಓಡಾಡುವಂತಿಲ್ಲ. ಹಾಗೆಯೇ ಮಹಿಳೆಯರು ಯಾವುದೇ ಕಾರಣಕ್ಕೂ ಸಾರ್ವಜನಿಕವಾಗಿ ನೃತ್ಯ ಮಾಡಬಾರದು. ಆದರೆ ಈ ದಂಪತಿಗಳು ನಿಯಮವನ್ನು ಉಲ್ಲಂಘಿಸಿ ಹಘಿಘಿ ಅವರು ಟೆಹ್ರಾನ್ ಟವರ್ ಮುಂದೆ ಸಾರ್ವಜನಿಕವಾಗಿ, ಸ್ಕಾರ್ಫ್ ಧರಿಸದೇ ಪುರುಷನೊಂದಿಗೆ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿತ್ತು. ಇದಾದ ಬಳಿಕ ಇರಾನ್ ನ್ಯಾಯಾಲಯ ಈ ದಂಪತಿಗಳಿಗೆ ಹತ್ತು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಇದನ್ನೂ ಓದಿ : Balochistan Bus accident: ಕಂದಕಕ್ಕೆ ಉರುಳಿದ ಪ್ರಯಾಣಿಕರ ಬಸ್ : 39 ಸಾವು
ಇದನ್ನೂ ಓದಿ : Women give birth to child: ಎಮಿರೇಟ್ಸ್ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಮಗುವಿಗೆ ಜನ್ಮ ನೀಡಿದ ಮಹಿಳೆ
10 years in prison: 10 years in prison for husband and wife dancing!