Sports Budget 2023 : ಬಜೆಟ್‌ನಲ್ಲಿ ಕ್ರೀಡೆಗೆ ದಾಖಲೆಯ ಮೊತ್ತ 3397.32 ಕೋಟಿ

ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ 2023-24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಕ್ರೀಡೆಗೆ (Sports Budget 2023) ದಾಖಲೆಯ ಮೊತ್ತವನ್ನು ಮೀಸಲಿಡಲಾಗಿದೆ. ಖೇಲೋ ಇಂಡಿಯಾ, ಏಷ್ಯನ್‌ ಗೇಮ್ಸ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳನ್ನು ಗಮನದಲ್ಲಿರಿಸಿಕೊಂಡು ಈ ಬಾರಿಯ ಬಜೆಟ್‌ನಲಿ 300 ಕೋಟಿ ರೂ. ಹೆಚ್ಚಿನ ಮೊತ್ತವನ್ನು ಕಾಯ್ದಿರಿಸ ಲಾಗಿದೆ. ಇದರೊಂದಿಗೆ ಈ ಬಾರಿಯ ಬಜೆಟ್‌ನಲ್ಲಿ 3397.32 ಕೋಟಿ ಮೊತ್ತವನ್ನು ಕ್ರೀಡಾಭಿವೃದ್ಧಿಗಾಗಿ ಮೀಸಲಿಟ್ಟಂತಾಗಿದೆ. ಭಾರತದ ಬಜೆಟ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ರೀಡಾಭಿವೃದ್ಧಿಗೆ ಇಷ್ಟು ಪ್ರಮಾಣದ ಹಣವನ್ನು ಕಾಯ್ದಿರಿಸಲಾಗಿದೆ.

2023ರ ಏಷ್ಯನ್‌ ಗೇಮ್ಸ್‌ ಹಾಗೂ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಕ್ರೀಡಾಪಟುಗಳ ಸಿದ್ಧತೆಗಾಗಿ ಬಜೆಟ್‌ನಲ್ಲಿ ಹೆಚ್ಚಿಗೆ ಹಣ ಕಾಯ್ದಿರಿಸಲಾಗಿದೆ. ಇದರಲ್ಲಿ ಖೇಲೋ ಇಂಡಿಯಾಕ್ಕೆ 1045 ಕೋಟಿ ರೂ. ಮೀಸಲಿಡುವ ಮೂಲಕ ಭವಿಷ್ಯದ ಕ್ರೀಡಾಭಿವೃದ್ಧಿಯನ್ನು ಗಮನದಲ್ಲಿ ಇರಿಸಿಕೊಂಡಿರುವುದು ಗಮನಾರ್ಹ. 2022-23ರ ಕೇಂದ್ರ ಬಜೆಟ್‌ನಲ್ಲಿ ಕ್ರೀಡೆಗೆ 358.5 ಕೋಟಿ ರೂ. ಏರಿಕೆ ಮಾಡಲಾಗಿತ್ತು. 2021-22 ರಲ್ಲಿ 2757.02 ಕೋಟಿಯಿಂದ ಕಳೆದ ವರ್ಷ ಕ್ರೀಡಾಭಿವೃದ್ಧಿಗೆ 3062.60 ಕೋಟಿ ಕಾಯ್ದಿರಿಸಲಾಗಿತ್ತು. ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಸ್ಕೀಮ್‌ ಮೂಲಕವೂ ಅಥ್ಲೀಟ್‌ಗಳು ಉತ್ತಮ ರೀತಿಯಲ್ಲಿ ತರಬೇತಿ ಪಡೆಯಲು ಸರಕಾರ ಆರ್ಥಿಕ ನೆರವನ್ನು ನೀಡುತ್ತಿದೆ.

Sports Budget 2023 : ಕ್ರೀಡಾ ಬಜೆಟ್‌ ಹಂಚಿಕೆ :

ಖೇಲೋ ಇಂಡಿಯಾ: 1045 ಕೋಟಿ.
ಭಾರತೀಯ ಕ್ರೀಡಾಪ್ರಾಧಿಕಾರ: 785.52 ಕೋಟಿ
ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು: 325 ಕೋಟಿ.
ರಾಷ್ಟ್ರೀಯ ಸೇವಾ ಯೋಜನೆ: 325 ಕೋಟಿ.
ರಾಷ್ಟ್ರೀಯ ಕ್ರೀಡಾಭಿವೃದ್ಧಿ ನಿಧಿ: 15 ಕೋಟಿ.

ಇದನ್ನೂ ಓದಿ ; Shikhar Dhawan : ಶಿಖರ್ ಧವನ್’ಗೆ ಪೇಂಟಿಂಗ್ ಗಿಫ್ಟ್ ಕೊಟ್ಟ ಅಂತರಾಷ್ಟ್ರೀಯ ಚಿತ್ರಕಾರ ವಿಲಾಸ್ ನಾಯಕ್, ಕನ್ನಡಿಗನಿಗೆ ಥ್ಯಾಂಕ್ಸ್ ಎಂದ ಗಬ್ಬರ್

ಇದನ್ನೂ ಓದಿ : ರಣಜಿ ಕ್ವಾರ್ಟರ್ ಫೈನಲ್ : ಉತ್ತರಾಖಂಡ್ ವಿರುದ್ಧ ಮೊದಲ ದಿನವೇ ಕನ್ನಡಿಗರ ಆರ್ಭಟ

ಇದನ್ನೂ ಓದಿ : ಹೊಸ ಆದಾಯ ತೆರಿಗೆ : 7 ಲಕ್ಷದವರೆಗೆ ತೆರಿಗೆ ವಿನಾಯಿತಿ, ಸರ್ಚಾರ್ಜ್ ದರ ಶೇ. 37 ರಿಂದ ಶೇ. 25ಕ್ಕೆ ಇಳಿಕೆ

Sports Budget 2023 Sports sector gets RECORD Rs 3397 Cr allocation Khelo india Asian Games 2023

Comments are closed.