ಸೋಮವಾರ, ಏಪ್ರಿಲ್ 28, 2025
HomeWorldHafiz Saeed : ಪಾಕ್​​ನಲ್ಲಿ ಮುಂಬೈ ದಾಳಿ ಮಾಸ್ಟರ್​ ಮೈಂಡ್​ಗೆ 31 ವರ್ಷಗಳ ಶಿಕ್ಷೆ

Hafiz Saeed : ಪಾಕ್​​ನಲ್ಲಿ ಮುಂಬೈ ದಾಳಿ ಮಾಸ್ಟರ್​ ಮೈಂಡ್​ಗೆ 31 ವರ್ಷಗಳ ಶಿಕ್ಷೆ

- Advertisement -

2008ರ ನವೆಂಬರ್​ ತಿಂಗಳಲ್ಲಿ ನಡೆದಿದ್ದ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಮಾಸ್ಟರ್​ ಮೈಂಡ್​ ಆಗಿದ್ದ ಉಗ್ರ ಹಫೀಜ್​ ಸಯೀದ್​ಗೆ( Hafiz Saeed) ಪಾಕಿಸ್ತಾನ ಭಯೋತ್ಪಾದನಾ ನಿಗ್ರಹ ದಳ ನ್ಯಾಯಾಲಯವು 31 ವರ್ಷಗಳ ಜೈಲು ಶಿಕ್ಷೆಯನ್ನು ಘೋಷಿಸಿ ಆದೇಶ ಹೊರಡಿಸಿದೆ.

ಲಷ್ಕರ್ ಇ ತೈಬಾ ಉಗ್ರ ಸಂಘಟನೆಯ ಸಂಸ್ಥಾಪಕ ಹಾಗೂ ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್‌ಗೆ ಎರಡು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದೆ. ಆತನ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಮತ್ತು ವಿಶ್ವಸಂಸ್ಥೆಯಿಂದ ಭಯೋತ್ಪಾದಕ ಎಂದು ಘೋಷಣೆಗೊಂಡ ಈತನಿಗೆ ₹ 3,40,000 ದಂಡ ವಿಧಿಸುವಂತೆಯೂ ನ್ಯಾಯಾಲಯ ಆದೇಶಿಸಿದೆ. ಹಫೀಝ್​ ಸಯೀದ್​ ನಿರ್ಮಿಸಿದ್ದಾನೆ ಎಂದು ಹೇಳಲಾದ ಮಸೀದಿ ಹಾಗೂ ಮದರಸಾಗಳನ್ನೂ ವಶಪಡಿಸಿಕೊಳ್ಳಲಾಗುವುದು ಎಂದು ವರದಿಗಳು ಹೇಳಿವೆ.


70 ವರ್ಷದ ಹಫೀಜ್ ಸಯೀದ್ ಈ ಹಿಂದೆ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಹಲವು ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದಾನೆ. 2020 ರಲ್ಲಿ, ಈತನಿಗೆ 15 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಪಾಕಿಸ್ತಾನದಲ್ಲಿ ಅನೇಕ ಬಾರಿ ಬಂಧನದಲ್ಲಿ ಹಾಗೂ ಹೊರಗೆ ಈತ ಜೀವನ ನಡೆಸಿದ್ದಾನೆ. ಈತ ಕೆಲವು ಬಾರಿ ಗೃಹ ಬಂಧನಕ್ಕೂ ಒಳಗಾಗಿದ್ದ. ಆದರೆ ಭಾರತವನ್ನು ಗುರಿಯಾಗಿಸಿ ದ್ವೇಷಪೂರಿತ ಭಾಷಣಗಳನ್ನ ಮಾಡುತ್ತಾ ಈತ ಪಾಕಿಸ್ತಾನದಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದ.

2019ರಲ್ಲಿ ಈತನನ್ನು ಬಂಧಿಸಲಾಗಿತ್ತು. ಅಮೆರಿಕಕ್ಕೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್ ಭೇಟಿ ನೀಡುವ ಮುನ್ನ ಈತನ ಬಂಧನವಾಗಿತ್ತು. ಆ ಸಮಯದಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್​ ಟ್ರಂಪ್​ 10 ವರ್ಷಗಳ ಹುಡುಕಾಟದ ಬಳಿಕ ಸಯೀದ್​ನನ್ನು ಬಂಧಿಸಲಾಗಿದೆ ಎಂದು ಟ್ವೀಟ್​ ಮಾಡಿದ್ದರು.

ಇದನ್ನು ಓದಿ : Shashi Tharoor : ಸಂಸತ್ತಿನಲ್ಲಿ ಸುಪ್ರಿಯಾ ಸುಳೆ ಜೊತೆಗಿನ ಸಂಭಾಷಣೆಗೆ ತರೂರ್​ ಸ್ಪಷ್ಟನೆ

ಇದನ್ನೂ ಓದಿ : Covishield Booster :ಬೂಸ್ಟರ್​ ಡೋಸ್​ ಲಸಿಕೆಗಳ ಬೆಲೆಯ ಬಗ್ಗೆ ಇಲ್ಲಿದೆ ಮಾಹಿತಿ

26/11 Mastermind Hafiz Saeed Gets 31 Years In Jail By Pak Court: Report

RELATED ARTICLES

Most Popular