Man makes mini garden: ಬಿಸಿಲ ಧಗೆಯಿಂದ ಪಾರಾಗಲು ಮಾಸ್ಟರ್​ ಪ್ಲಾನ್ ಮಾಡಿದ ಆಟೋ ಚಾಲಕ..!

ಈಗಂತೂ ಬೇಸಿಗೆ ಕಾಲ. ನೆತ್ತಿ ಮೇಲೆ ನಿಗಿ ನಿಗಿ ಕೆಂಡಕಾರುವ ಸೂರ್ಯನ ಶಾಖದಿಂದ ಪಾರಾಗೋದು ಅಂದರೆ ಸುಲಭದ ಮಾತಂತೂ ಅಲ್ಲವೇ ಅಲ್ಲ. ಎಷ್ಟೇ ನೀರು ಕುಡಿದರೂ, ಗಾಳಿ ಬೀಸಿದರೂ ಸಹ ಶೆಖೆ ಅನ್ನೋದು ಕಡಿಮೆ ಆಗೋದೇ ಇಲ್ಲ. ಆದರೆ ಈ ಎಲ್ಲಾ ಸಮಸ್ಯೆಗೆ ಆಟೋ ಡ್ರೈವರ್​ ಒಬ್ಬರು ಮಾಸ್ಟರ್​ ಪ್ಲಾನ್​ ಮಾಡಿದ್ದು (Man makes mini garden)ಇದರ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವ್ಯಾಪಕ ಮೆಚ್ಚುಗೆ ಪಡೆಯುತ್ತಿದೆ.


ಎರಿಕ್ ಸೊಲ್ಲೈಮ್​ ಪೋಸ್ಟ್​ ಮಾಡಿರುವ ಫೋಟೋಗಳಲ್ಲಿ ಚಾಲಕರೊಬ್ಬರು ತಮ್ಮ ಆಟೋದಲ್ಲಿ ಕುಳಿತಿದ್ದಾರೆ. ಆದರೆ ಈ ಆಟೋ ರಿಕ್ಷಾವು ನೀವು ದಿನನಿತ್ಯ ನೋಡುವ ಆಟೋದಂತೆ ಇಲ್ಲ. ಇದು ಸೊಂಪಾದ ಹುಲ್ಲು ಹಾಸಿನಿಂದ ಆವರಿಸಲ್ಪಟ್ಟಿದೆ. ಅಲ್ಲದೇ ರಿಕ್ಷಾದ ತುಂಬೆಲ್ಲ ಸಣ್ಣ ಕುಂಡಗಳಲ್ಲಿ ಗಿಡಗಳನ್ನು ನೆಡಲಾಗಿದೆ. ಬಿಸಿಲಿನಲ್ಲಿಯೂ ತಂಪಾಗಿರಲು ಈ ವ್ಯಕ್ತಿಯು ಆಟೋ ರಿಕ್ಷಾದಲ್ಲಿಯೇ ಹುಲ್ಲು ಬೆಳೆದಿದ್ದಾರೆ. ನಿಜವಾಗಿಯೂ ತಂಪಾಗಿದೆ..! ಎಂದು ಫೋಟೋಗೆ ಶೀರ್ಷಿಕೆ ನೀಡಲಾಗಿದೆ.


ಈ ಪೋಸ್ಟ್​ ಸೋಶಿಯಲ್​ ಮೀಡಿಯಾಗೆ ಅಪ್​ಲೋಡ್​ ಮಾಡಿದ ಕೆಲವೇ ಗಂಟೆಗಳಲ್ಲಿ 20 ಸಾವಿರಕ್ಕೂ ಅಧಿಕ ಲೈಕ್​ಗಳನ್ನು ಸಂಪಾದಿಸಿದೆ. ಬೇಸಿಗೆಯಿಂದ ಪಾರಾಗಲು ಆಟೋ ಚಾಲಕ ಮಾಡಿದ ಈ ಪ್ಲಾನ್​​ಗೆ ನೆಟ್ಟಿಗರು ಶಹಬ್ಬಾಸ್​ ಎಂದಿದ್ದಾರೆ.

April Fools Day 2022 : ಏಪ್ರಿಲ್‌ ಫೂಲ್ಸ್‌ ಡೇ ಏಕೆ ಈ ದಿನ ಅಷ್ಟು ಫೇಮಸ್‌! ಇದರ ಇತಿಹಾಸ ಮತ್ತು ಮೂಲ ನಿಮಗೆ ಗೊತ್ತೇ?

ಪ್ರತಿವರ್ಷ ಎಪ್ರಿಲ್‌ ಒಂದನ್ನು ಏಪ್ರಿಲ್‌ ಫೂಲ್ಸ್‌ ಡೇ(April Fools Day 2022) ಎಂದು ಜಗತ್ತಿನಾದ್ಯಂತ ಆಚರಿಸುತ್ತಾರೆ. ಈ ದಿನವನ್ನು ಅನಿಯಮಿತ ಹಾಸ್ಯ, ತಮಾಷೆ ಮತ್ತು ಸಂತೋಷಕ್ಕೆ ಮೀಸಲಿಡಲಾಗಿದೆ. ಈ ಸಂದರ್ಭದಲ್ಲಿ ಜನರು ತಮಾಷೆ ಮಾಡುತ್ತ ಒಬ್ಬರನ್ನೊಬ್ಬರು ನಗಿಸುವುದೇ ಆಗಿದೆ. ಜನರು ಚಿತ್ರ ವಿಚಿತ್ರ ಐಡಿಯಾಗಳೊಂದಿಗೆ ತಮ್ಮ ಪ್ರೀತಿ ಪಾತ್ರರಿಗೆ ಅಥವಾ ಗೆಳಯರಿಗೆ ಆಶ್ಚರ್ಯಕರ ರೀತಿಯಲ್ಲಿ ಸುದ್ದಿಗಳನ್ನು ಹೇಳಿ ಅವರನ್ನು ಪೇಚಿಗೆ ಸಿಲುಕಿಸಿ ನಂತರ ಅದು ಸುಳ್ಳು ಸುದ್ದಿ ಎಂದು ಹೇಳುತ್ತಾ ನಗಿಸುತ್ತಾರೆ. ಏಪ್ರಿಲ್‌ ಫೂಲ್‌ ಅನ್ನು ಶತಮಾನಗಳಿಂದಲೂ ವಿವಿಧ ಸಂಸ್ಕ್ರತಿಗಳು ಆಚರಿಸುತ್ತಲೇ ಬಂದಿದ್ದಾರೆ. ಇದನ್ನು ಮೊದಲು ಆಚರಿಸಿದವರು ಯುರೋಪ್‌ನ ಜನರು ಎಂದು ಇತಿಹಾಸ ಹೇಳುತ್ತದೆ.

ಇತಿಹಾಸ ಮತ್ತು ಮೂಲ:
ನಾವು ಏಪ್ರಿಲ್‌ ಫೂಲ್‌ ಅಥವಾ ಮೂರ್ಖರ ದಿನವನ್ನು ಏಕೆ ಮತ್ತು ಎಂದಿನಿಂದ ಆಚರಿಸುತ್ತಿದ್ದೇವೆ? ನಿಜ ಹೇಳಬೇಕೆಂದರೆ ಈ ಏಪ್ರಿಲ್‌ ಫೂಲ್‌ ಡೇ ಯಾವಾಗನಿಂದ ಶುರುವಾಯಿತು ಎಂಬುದು ಈಗಲೂ ಒಂದು ನಿಗೂಢವೇ. ಇದನ್ನು ಯಾರು ಪ್ರಾರಂಭಿಸಿದರು ಎನ್ನುವುದು ಯಾರಿಗೂ ಸರಿಯಾಗಿ ಗೊತ್ತಿರದ ಸಂಗತಿಯಾಗಿದೆ. ಅದೇನೇ ಇದ್ದರೂ ಇತಿಹಾಸ ತಜ್ಞರ ಪ್ರಕಾರ ಇದನ್ನು 1582 ರಲ್ಲಿ ಪ್ರಾರಂಭಿಸಲಾಯಿತು ಎಂದು ತಿಳಿದುಬಂದಿದೆ. ಇದು ಫ್ರಾನ್ಸ್‌ ಜೂಲಿಯನ್‌ ಕ್ಯಾಲಂಡರ್‌ ನಿಂದ ಗ್ರೇಗೋರಿಯನ್‌ ಕ್ಯಾಲಂಡರ್‌ಗೆ ಬದಲಾದ ಸಮಯವಾಗಿತ್ತು.

ಪೋಪ್‌ ಗ್ರೆಗೋರಿ XIII ಗ್ರೆಗೋರಿಯನ್‌ ಕ್ಯಾಲೆಂಡರ್‌ ಅನ್ನು ಜನವರಿ 1ರಂದು ಪರಿಚಯಿಸಿದ ನಂತರ ಈ ಏಪ್ರಿಲ್‌ ಫೂಲ್ಸ್‌ ಡೇಯನ್ನು ಆಚರಿಸುತ್ತಾ ಬಂದಿದ್ದಾರೆ. ಇದಕ್ಕಿಂತ ಮೊದಲು ಹೊಸ ವರ್ಷವನ್ನು ಮಾರ್ಚ ಅಂತ್ಯದಲ್ಲಿ ಆಚರಿಸಲಾಗುತ್ತಿತ್ತು.

ಪ್ರಾಚೀನ ಕಾಲದಲ್ಲಿ ಕ್ಯಾಲೆಂಡರ್‌ಗಳು ವೆರ್ನಲ್‌ ಇಕ್ವಿನೊಕ್ಸ್‌(ವಸಂತ ಋತು) ಅನ್ನು ಆಧರಿಸಿದ್ದವು. ಹೊಸ ವರ್ಷವನ್ನು ಏಪ್ರಿಲ್‌ 1 ರ ಅಥವಾ ಅದರ ಆಸುಪಾಸಿನಲ್ಲಿ ಆಚರಿಸಲಾಗುತ್ತಿತ್ತು. ಯುರೋಪಿನ ಅನೇಕ ಸ್ಥಳಗಳಲ್ಲಿ ಹೊಸ ವರ್ಷವನ್ನು ಮಾರ್ಚ್ 25ರ ಸುಮಾರಿಗೆ ಆಚರಿಸುತ್ತಿದ್ದರು.

ಪೀಪಲ್‌ ಗ್ರೆಗೋರಿ ಹೊಸವರ್ಷವನ್ನು ಜನವರಿ 1ಕ್ಕೆ ಬದಲಾಯಿಸಿದ ನಂತರವೂ ಅನೇಕರು ಈ ತೀವ್ರವಾದ ಹಠಾತ್‌ ಬದಲಾವಣೆಯನ್ನು ಸ್ವೀಕರಿಸಲು ನಿರಾಕರಿಸಿದರು ಎಂದು ನಂಬಲಾಗಿದೆ. ಒಂದು ಅವರಿಗೆ ಹೊಸ ಕ್ಯಾಲೆಂಡರ್‌ ಬಗ್ಗೆ ತಿಳಿದಿರಲಿಲ್ಲ ಅಥವಾ ಅವರು ಹಳೆಯ ಕ್ಯಾಲೆಂಡರ್‌ ಅನ್ನೇ ಅನುಸರಿಸುತ್ತಿದ್ದರು. ಅದಕ್ಕಾಗಿಯೇ ಸಾಮಾನ್ಯವಾಗಿ ಸಾಂಪ್ರದಾಯಿಕ ಕ್ಯಾಲೆಂಡರ್‌ ಅನ್ನು ಅನುಸರಿಸುವ ಮತ್ತು ಆ ದಿನವನ್ನು ಆಚರಿಸುವ ಜನರನ್ನು ಅಪಹಾಸ್ಯ ಮಾಡಲು ಪ್ರಾರಂಭಿಸಿದರು. ಹೀಗೆ ಏಪ್ರಿಲ್‌ 1ಅನ್ನು ಏಪ್ರಿಲ್‌ ಫೂಲ್ಸ್‌ ಡೇ ಎಂದು ಆಚರಿಸುತ್ತಾ ಬಂದಿದ್ದಾರೆ.

ಇದನ್ನು ಓದಿ : Covishield Booster :ಬೂಸ್ಟರ್​ ಡೋಸ್​ ಲಸಿಕೆಗಳ ಬೆಲೆಯ ಬಗ್ಗೆ ಇಲ್ಲಿದೆ ಮಾಹಿತಿ

ಇದನ್ನೂ ಓದಿ : james movie ott premiere : ಜೇಮ್ಸ್​ ಸಿನಿಮಾ ಒಟಿಟಿ ಪ್ರದರ್ಶನಕ್ಕೆ ದಿನಗಣನೆ ಆರಂಭ

Man makes mini garden in his rickshaw to beat the heat. Internet loves the idea

Comments are closed.