ಸಿಡ್ನಿ : Queen Elizabeth : ಬ್ರಿಟನ್ ರಾಣಿಯಾಗಿದ್ದ ಎರಡನೇ ಎಲೆಜಬೆತ್ ನಿಧನರಾಗಿ ವಾರಗಳೆ ಕಳೆಯುತ್ತಾ ಬಂದರೂ ಸಹ ಈಗಲೂ ಕೂಡ ಅವರ ಸುತ್ತ ಅನೇಕ ವಿಚಾರಗಳು ಚರ್ಚೆಯಾಗುತ್ತಿದೆ. ಭಾರತೀಯರಂತೂ ರಾಣಿ ಎಲೆಜಬೆತ್ರ ಕಿರೀಟದ ಮೇಲೆ ಕಣ್ಣಿಟ್ಟಿದ್ದು ನಮಗೆ ನಮ್ಮ ಕೊಹಿನೂರ್ ವಜ್ರವನ್ನು ವಾಪಸ್ ಕೊಡಿ ಎಂದೆಲ್ಲ ಕೇಳ್ತಿದ್ದಾರೆ. ಬ್ರಿಟನ್ ರಾಣಿ ಎಲೆಜಬೆತ್ ಕಿರೀಟದಲ್ಲಿರುವ ಕೊಹಿನೂರ್ ವಜ್ರವು ಕರ್ನಾಟಕದ್ದು ಎಂದು ಹೇಳಲಾಗುತ್ತದೆ, ಆದರೆ ಇದೀಗ ಈ ವಜ್ರವು ಪುರಿ ಜಗನ್ನಾಥನಿಗೆ ಸೇರಿದ್ದು ಅಂತಾ ಮತ್ತೊಂದು ವಾದವು ಶುರುವಾಗಿದ್ದು ಕೊಹಿನೂರ್ ವಜ್ರವನ್ನು ಪುರಿ ಜಗನ್ನಾಥನಿಗೆ ಹಿಂದಿರುಗಿಸಲು ಬ್ರಿಟನ್ ಸರ್ಕಾರಕ್ಕೆ ಒತ್ತಡ ಹೇರುವಂತೆ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಪತ್ರ ಬರೆಯಲಾಗಿದೆ .
ಈ ಎಲ್ಲದರ ನಡುವೆ ಎರಡನೇ ಎಲೆಜಬೆತ್ ಬರೆದಿರುವ ರಹಸ್ಯ ಪತ್ರವೊಂದು ಇದೀಗ ಭಾರೀ ಸುದ್ದಿಯಲ್ಲಿದೆ. ಈ ಪತ್ರವನ್ನು ಸಿಡ್ನಿಯ ಐತಿಹಾಸಿಕ ಕಟ್ಟಡದ ತಿಜೋರಿಯ ಒಳಗೆ ಭದ್ರವಾಗಿ ಇಡಲಾಗಿದೆ. ಈ ಪತ್ರದಲ್ಲಿ ರಾಣಿ ಎಲೆಜಬೆತ್ ಏನನ್ನು ಬರೆದಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು ಅಂದರೆ ನೀವು ಇನ್ನೂ ಅರವತ್ಮೂರು ವರ್ಷಗಳ ಕಾಲ ಕಾಯಲೇಭೇಕು..! ಹೌದು ಮುಂದಿನ 63 ವರ್ಷಗಳವರೆಗೆ ಈ ಪತ್ರವನ್ನು ತೆರೆಯಲಾಗುವುದಿಲ್ಲ.
ಆಸ್ಟ್ರೇಲಿಯಾದ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ, ಈ ಪತ್ರವನ್ನು ಸಿಡ್ನಿಯ ಐತಿಹಾಸಿಕ ಕಟ್ಟಡದ ತಿಜೋರಿಯಲ್ಲಿ ಇಡಲಾಗಿದೆ. ಈ ಪತ್ರವನ್ನು ಎರಡನೇ ಎಲೆಜಬೆತ್ 1986ರಲ್ಲಿ ಬರೆದಿದ್ದರು. ಈ ಪತ್ರದಲ್ಲಿ ಅವರು ಸಿಡ್ನಿಯ ಜನರನ್ನು ಉದ್ದೇಶಿಸಿ ಬರೆದಿದ್ದಾರೆ ಎನ್ನಲಾಗಿದೆ.
ಕುತೂಹಲಕಾರಿ ವಿಚಾರ ಏನೆಂದರೆ ರಾಣಿ ಎರಡನೇ ಎಲೆಜಬೆತ್ ಬರೆದಿದ್ದ ಈ ಪತ್ರದಲ್ಲಿ ಏನಿರಬಹುದು ಎಂಬುದರ ಸಣ್ಣ ಕುರುಹು ಕೂಡ ರಾಣಿಯ ವೈಯಕ್ತಿಕ ಸಿಬ್ಬಂದಿಗೂ ಸಹ ತಿಳಿದಿಲ್ಲ. ಪತ್ರದಲ್ಲಿ ಏನು ಬರೆಯಲಾಗಿದೆ ಎಂಬ ಕಿಂಚಿತ್ ಐಡಿಯಾ ಕೂಡ ಯಾರಿಗೂ ಇಲ್ಲ. ಈ ಪತ್ರವನ್ನು ಸುರಕ್ಷಿತ ಸ್ಥಳದಲ್ಲಿ ಗಾಜಿನ ಪೆಟ್ಟಿಗೆಯ ಒಳಗಡೆ ಇಡಲಾಗಿದೆ. ಈ ಪತ್ರದಲ್ಲಿ ಏನಿದೆ ಎಂಬುದು ಇಂದಿಗೂ ಸ್ವಾರಸ್ಯಕರ ವಿಚಾರವೇ ಆಗಿದೆ. ಆದರೆ ಈ ಪತ್ರವನ್ನು ಯಾವುದೇ ಕಾರಣಕ್ಕೂ 2085ರವರೆಗೆ ತೆರೆಯಲಾಗುವುದಿಲ್ಲ.
ಈ ಪತ್ರದ ಸಂಬಂಧ ಸಿಡ್ನಿಯ ಲಾರ್ಡ್ ಮೇಯರ್ಗೆ ಈ ಸೂಚನೆಯೊಂದನ್ನು ನೀಡಲಾಗಿದೆ. 2085ನೇ ಇಸ್ವಿಯಲ್ಲಿ ನೀವೇ ಆಯ್ಕೆ ಮಾಡಿದ ಸೂಕ್ತ ದಿನದಂದು ದಯವಿಟ್ಟು ಈ ಲಕೋಟೆಯನ್ನು ತೆರೆಯಿರಿ. ಅಂದು ನಾನು ಸಿಡ್ನಿಯ ನಾಗರಿಕರಿಗೆ ಯಾವ ಸಂದೇಶವನ್ನು ನೀಡಿದ್ದೇನೆ ಎಂಬುದನ್ನು ತಿಳಿಸುವಿರಾ..? ಎಂದು ಬರೆಯಲಾಗಿದೆ. ಅಲ್ಲದೇ ಈ ಸೂಚನೆಯ ಜೊತೆಯಲ್ಲಿ ಎಲಿಜಬೆತ್ ಆರ್ ಎಂದು ಸಹಿ ಮಾಡಲಾಗಿದೆ. ಎರಡನೇ ಎಲೆಜಬೆತ್ ಒಟ್ಟು ಹದಿನಾರು ಬಾರಿ ಆಸ್ಟ್ರೇಲಿಯಾಗೆ ಭೇಟಿ ನೀಡಿದ್ದರು.
ಇದನ್ನು ಓದಿ : Five men gang-rape : ಬಾಯ್ಫ್ರೆಂಡ್ ಎದುರಲ್ಲೇ ಮಹಿಳೆ ಮೇಲೆ ಐವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ
ಇದನ್ನೂ ಓದಿ : husband put gum on his wife’s private part :ನಶೆಯಲ್ಲಿ ಪತ್ನಿಯ ಖಾಸಗಿ ಅಂಗಕ್ಕೆ ಗಮ್ ಹಾಕಿದ ಪಾಪಿ ಪತಿ
A Letter From Queen Elizabeth Is Locked In A Vault, Can’t Be Opened Until…