husband put gum on his wife’s private part :ನಶೆಯಲ್ಲಿ ಪತ್ನಿಯ ಖಾಸಗಿ ಅಂಗಕ್ಕೆ ಗಮ್ ಹಾಕಿದ ಪಾಪಿ ಪತಿ

ಮಧ್ಯಪ್ರದೇಶ : husband put gum on his wife’s private part : ವ್ಯಕ್ತಿಯೊಬ್ಬನಿಗೆ ಮಾದಕ ದ್ರವ್ಯದ ಚಟ ಶುರುವಾದರೆ ಆತ ಆ ಚಕ್ರವ್ಯೂಹದಿಂದ ಹೊರ ಬರೋದು ಸಾಕಷ್ಟು ಕಷ್ಟವಿದೆ. ಒಂದು ವೇಳೆ ಈ ಚಟ ಹತ್ತಿಕೊಂಡರು ಯಾರಿಗು ತೊಂದರೆ ನೀಡದೆ ಅವನ್ನಷ್ಟಕ್ಕೆ ಅವನಿದ್ದರೆ ಯಾರಿಗೂ ಕಿರಿಕಿರಿ ಇಲ್ಲ. ಆದ್ರೆ ಅಮಲು ತಲೆಗೇರಿಸಿಕೊಂಡು ಲೋಕದ ಜ್ಞಾನವೇ ಇಲ್ಲ ಎಂಬಂತೆ ವರ್ತಿಸಿ ಮಾಡಬಾರದ ಕೃತ್ಯ ಎಸಗಿದರೆ ಜೈಲೂಟ ಫಿಕ್ಸ್. ಇಲ್ಲೊಬ್ಬ ಮಾದಕ ವ್ಯಸನಿ ಪಾಪಿ ಕೃತ್ಯ ಮಾಡೋಕೆ ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ. ತನ್ನದೇ ಪತ್ನಿಯ ಖಾಸಗಿ ಅಂಗಕ್ಕೆ ಫೆವಿಕ್ವಿಕ್ ಗಮ್ ಹಾಕಿ ಮೃಗೀಯ ವರ್ತನೆ ತೋರಿದ್ದಾನೆ.

ಮಧ್ಯಪ್ರದೇಶದ ಶಿಯೋಪುರದ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸೇನ್ ಎಂಬಾತನೇ ಈ ರೀತಿಯ ಕೃತ್ಯವೆಸಗಿದ ಪಾಪಿ ಪತಿ. ಸೇನ್ ಹಲವು ವರ್ಷಗಳಿಂದ ಮಾದಕ ವ್ಯಸನದ ದಾಸನಾಗಿದ್ದ ಎಂದು ತಿಳಿದುಬಂದಿದೆ. ಈತ ಅಮಲೇರಿಸಿಕೊಳ್ಳಲು ಹಲವು ರೀತಿಯ ಮಾದಕ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದ ಎಂದು ತನಿಖೆಯಲ್ಲಿ ಗೊತ್ತಾಗಿದೆ.

ಸೇನ್ ನ ಈ ಮಾದಕ ವ್ಯಸನದಿಂದ ಆತನ ಪತ್ನಿ ಬಹಳಷ್ಟು ಸಂಕಷ್ಟ ಅನುಭವಿಸಿದ್ದಳು.‌ಇದರ ಜೊತೆ ಸೇನ್ ವಿರುದ್ಧ ಅಸಮಾಧಾನವನ್ನು ಸಹ ಹೊಂದಿದ್ದಳು. ಹೀಗಾಗಿ ಮನೆಯಲ್ಲಿ ಗಂಡ ಹೆಂಡತಿ ನಡುವೆ ಆಗಾಗ ಜಗಳಗಳು ನಡೆಯುತಿತ್ತು.

ಮೊನ್ನೆಯ ದಿನ ಸೇನ್ ನ ನಶೆಯ ಮಿತಿ ಮೀರಿತ್ತು. ಹೆಂಡತಿಯ ಬಳಿ ಮತ್ತಷ್ಟು ಅಮಲೇರಿಸಿಕೊಳ್ಳಲು ಹಣ ನೀಡುವಂತೆ ಕೇಳಿದ್ದಾನೆ. ಪತ್ನಿ ಕೊಡದೆ ಇದ್ದಾಗ ಮತ್ತಷ್ಟು ಪೀಡಿಸಿದ್ದಾನೆ. ಕೊನೆಗೆ ಪತ್ನಿಯ ಕೈ ಕಾಲುಗಳನ್ನು ಹಗ್ಗದಿಂದ ಬಿಗಿಯಾಗಿ ಕಟ್ಟಿದ್ದಾನೆ. ಇದಾದ ಬಳಿಕ‌ ಪತ್ನಿಯ ಖಾಸಗಿ ಅಂಗಕ್ಕೆ ಫೆವಿಕ್ವಿಕ್ ಗಮ್ ಹಾಕಿದ್ದಾನೆ. ಘಟನೆಯಿಂದ ನೋವು ತಾಳಲು ಸಾಧ್ಯವಾಗದೆ ಪತ್ನು ಕಿರುಚಿದ್ದಾಳೆ.‌ ಕಿರುಚಿದ ಸದ್ದು ಕೇಳಿ ನೆರೆಹೊರೆಯವರು ಮನೆಗೆ ಬಂದಿದ್ದಾರೆ. ‌ಪಾಪಿ ಪತಿ ಮಾಡಿದ ಕೃತ್ಯ ಕಂಡು ಒಮ್ಮೆ ಬೆಚ್ಚಿ ಬಿದ್ದಿದ್ದಾರೆ. ಗಮ್ ಹಾಕಿರುವ ವಿಚಾರ ಗೊತ್ತಾಗುತ್ತಿದಂತೆ‌ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪಾಪಿ‌ ಪತಿ ಸೇನ್ ಮಾಡಿರುವ ಈ ಅಮಾನವೀಯ ಕೃತ್ಯವನ್ನು ನೆರೆ ಹೊರೆಯವರು ಖಂಡಿಸಿದ್ದಾರೆ. ಪೊಲೀಸರು ಆರೋಪಿ‌ ಸೇನ್ ನನ್ನು ಬಂಧಿಸಿ ಆತನ ನಶೆ ಇಳಿದ ಬಳಿಕ ಚೆನ್ನಾಗಿಯೇ ಡ್ರಿಲ್ ಮಾಡಿದ್ದಾರೆ. ಈ ವಿಚಾರ ಸೋಷಿಯಲ್ ಮಿಡೀಯಾದಲ್ಲೂ ಸುದ್ದಿಯಾಗುತ್ತಿದಂತೆ ನೆಟ್ಟಿಗರು ಸಹ ಸೇನ್ ಕೃತ್ಯಕ್ಕೆ ಕಿಡಿಕಾರಿದ್ದಾರೆ. ಒಟ್ಟಿನಲ್ಲಿ ನಶೆಯಲ್ಲಿ ಮಾಡಬಾರದ ಕೆಲಸ ಮಾಡೋಕೆ ಹೋಗಿ ಸೇನ್ ಈಗ ಮುದ್ದೆ ಮುರಿಯುವಂತಾಗಿದೆ.

ಇದನ್ನು ಓದಿ : Six girls escaped :ಹಾಸ್ಟೆಲ್ ಟಾಯ್ಲೆಟ್ ನ ಗ್ರಿಲ್ ಮುರಿದು ಕಿಟಕಿ ಮೂಲಕ ಆರು ಬಾಲಕಿಯರು ಎಸ್ಕೇಪ್

ಇದನ್ನೂ ಓದಿ : Five men gang-rape : ಬಾಯ್​ಫ್ರೆಂಡ್​ ಎದುರಲ್ಲೇ ಮಹಿಳೆ ಮೇಲೆ ಐವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ

husband put gum on his wife’s private part while drunk

Comments are closed.