ಸೋಮವಾರ, ಜೂನ್ 16, 2025
HomeWorldTaliban Kidnap : 150ಕ್ಕೂ ಅಧಿಕ ಭಾರತೀಯರನ್ನು ಅಪಹರಿಸಿದ ತಾಲಿಬಾನ್‌ !

Taliban Kidnap : 150ಕ್ಕೂ ಅಧಿಕ ಭಾರತೀಯರನ್ನು ಅಪಹರಿಸಿದ ತಾಲಿಬಾನ್‌ !

- Advertisement -

ನವದೆಹಲಿ : ಏರ್‌ಲಿಫ್ಟ್‌ಗೆ ಕಾಯುತ್ತಿದ್ದ ಸುಮಾರು 150ಕ್ಕೂ ಅಧಿಕ ಭಾರತೀಯರನ್ನು ಕಾಬೂಲ್‌ ವಿಮಾನ ನಿಲ್ದಾಣದಿಂದ ತಾಲಿಬಾನ್‌ ಉಗ್ರರು ಅಪಹರಿಸಿದ್ದಾರೆ ಎಂದು ಅಪ್ಘಾನ್‌ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಅಪ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಭಾರತೀಯ ವಾಯುಸೇನೆಯ ವಿಮಾನ ಸಿದ್ದವಾಗಿ ಕಜಕಿಸ್ತಾನದಲ್ಲಿ ಕಾಯುತ್ತಿದೆ. ಆದರೆ ನಿನ್ನೆಯಿಂದಲೂ ಕೂಡ ವಿಮಾನದ ಲ್ಯಾಂಡಿಂಗ್‌ಗೆ ಕಾಬೂಲ್‌ ವಿಮಾನ ನಿಲ್ದಾಣದಿಂದ ಯಾವುದೇ ಸಿಗ್ನಲ್‌ ಸಿಕ್ಕಿರಲಿಲ್ಲ. ಹೀಗಾಗಿ ಎರಡು ವಿಮಾನಗಳು ಕಜಕಿಸ್ತಾನದಲ್ಲಿಯೇ ಕಾಯುತ್ತಿದೆ.

ಇನ್ನೊಂದೆಡೆಯಲ್ಲಿ ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಸ್ಥಳಾಂತರಕ್ಕೆ ಕಾಯುತಿದ್ದ ಭಾರತೀಯರನ್ನು ತಾಲಿಬಾನ್‌ಗಳು ಅಪಹರಣ ಮಾಡಿದ್ದಾರೆನ್ನಲಾಗುತ್ತಿದೆ. ಆದರೆ ಈ ಕುರಿತು ಭಾರತೀಯ ವಿದೇಶಾಂಗ ಇಲಾಖೆಯಾಗಲಿದೆ, ಭಾರತೀಯ ರಾಯಬಾರ ಕಚೇರಿಯಾಗಲಿ ಖಚಿತ ಪಡಿಸಿಲ್ಲ.

ಭಾರತೀಯರ ಕಿಡ್ನಾಪ್‌ ಸುದ್ದಿ ಇದೀಗ ಆತಂಕಕ್ಕೆ ಕಾರಣವಾಗಿದೆ. ಅಪ್ಘಾನಿಸ್ತಾನದಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ವಿದೇಶಿಗರು ಇನ್ನೂ ಉಳಿದುಕೊಂಡಿದ್ದು, ತಾಲಿಬಾನ್‌ ಅಟ್ಟಹಾಸದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ನಿರೂಪಕಿ ಮೇಲೆ ತಾಲಿಬಾನ್ ದೌರ್ಜನ್ಯ: ಮಹಿಳೆ ನೀನು ಮನೆಗೆ ತೆರಳು ಎಂದ ಅಧಿಕಾರಿಗಳು!

ಇದನ್ನೂ ಓದಿ : GOOD NEWS : ಕುವೈತ್‌ನಿಂದ ಭಾರತಕ್ಕೆ ಅ.22 ರಿಂದ ವಿಮಾನ ಸೇವೆ ಪುನರಾರಂಭ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular