ಮಂಗಳವಾರ, ಏಪ್ರಿಲ್ 29, 2025
HomeWorldTaliban: ನಿರೂಪಕಿ ಮೇಲೆ ತಾಲಿಬಾನ್ ದೌರ್ಜನ್ಯ: ಮಹಿಳೆ ನೀನು ಮನೆಗೆ ತೆರಳು ಎಂದ ಅಧಿಕಾರಿಗಳು!

Taliban: ನಿರೂಪಕಿ ಮೇಲೆ ತಾಲಿಬಾನ್ ದೌರ್ಜನ್ಯ: ಮಹಿಳೆ ನೀನು ಮನೆಗೆ ತೆರಳು ಎಂದ ಅಧಿಕಾರಿಗಳು!

- Advertisement -

ಕಾಬೂಲ್: ಅಪ್ಘಾನಿಸ್ತಾನ್ ದ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾಎ ನಿರೂಪಕಿಯ  ಮೇಲೆ ತಾಲಿಬಾನ್ ಅಧಿಕಾರಿಗಳು ದೌರ್ಜನ್ಯ ಮೆರೆದಿದ್ದಾರೆ.

ನೀನು ಮಹಿಳೆ. ಮನೆಗೆ ತೆರಳು ಎಂದು  ತಾಲಿಬಾನ್ ಅಧಿಕಾರಿಗಳು ನನಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ನಿರೂಪಕಿ ನಮಗೆ ಸಹಾಯ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಬಿಡುಗಡೆ ಮಾಡುವ ಮೂಲಕ   ಅಂಗಲಾಚಿದ್ದಾರೆ.

ಸುದ್ದಿ ನಿರೂಪಕಿ ಶಬನಮ್ ದವ್ರಾನ್ ಕಳೆದ ಐದು ವರ್ಷದಿಂದ ಸರ್ಕಾರಿ ಸ್ವಾಮ್ಯದ ಆರ್.ಟಿ.ಎ ಪಾಸ್ತೋ ಸುದ್ದಿಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಅಪ್ಘಾನಿಸ್ತಾನ್ ದ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡ ಬಳಿಕವೂ ಶಬನಮ್ ಕೆಲಸಕ್ಕೆ ತೆರಳಿದ್ದರು.

https://twitter.com/MuslimShirzad/status/1427982504443645963?s=08

ವ್ಯವಸ್ಥೆ ಬದಲಾದ ನಂತರವೂ ಕೆಲಸ ಮಾಡಲು ತೆರಳಿದೆ. ನನ್ನ ಕಚೇರಿಯ ಕಾರ್ಡ್ ತೋರಿಸಿದ್ರೂ ನನಗೆ ಒಳಹೋಗುವ ಅವಕಾಶವನ್ನೇ ನೀಡಲಿಲ್ಲ. ನೀನು ಮಹಿಳೆ ಮನೆಗೆ ಹೋಗು ಎಂದು ತಾಲಿಬಾನ್ ಅಧಿಕಾರಿಗಳು ಹೇಳಿದ್ರು ಎಂದು ಶಬನಮ್ ವಿಡಿಯೋದಲ್ಲಿ ಹೇಳಿದ್ದಾರೆ. ಅಲ್ಲದೇ ವಿಡಿಯೋ ನೋಡುತ್ತಿರುವವರು ನಮ್ಮನ್ನು ರಕ್ಷಿಸಿ ಎಂದು ಮನವಿ ಮಾಡಿದ್ದಾರೆ.

RELATED ARTICLES

Most Popular