ಸಿನಿಮಾದಲ್ಲಿ ಏಲಿಯನ್ಸ್ ನೋಡಿರ್ತೀರಿ. ನಿಜವಾಗ್ಲೂ ಏಲಿಯನ್ಸ್ ಇದ್ಯಾ ? ಇಲ್ವಾ ? ಎಂಬ ಪ್ರಶ್ನೆಗೆ ಇನ್ನೂ ಸರಿಯಾಗಿ ಉತ್ತರವೇ ಸಿಕ್ಕಿಲ್ಲಾ. ಹೀಗಿರುವಾಗ ಇಲೊಬ್ಬರು ಮಹಿಳೆ ಏಲಿಯನ್ ಹೋಲುವ ಮಗುವಿಗೆ ಜನ್ಮ ನೀಡಿದ್ದಾರೆ. ಸಿನಿಮಾಗಳಲ್ಲಿ ಏಲಿಯನ್ಸ್ ಅನ್ನೂ ಯಾವ ರೀತಿ ತೋರಿಸಲಾಗಿದೆಯೋ ಅದೇ ರೀತಿ ಈ ಮಗುವಿನ ಮುಖವಿದೆ ಎಂಬುವುದೇ ವಿಚಿತ್ರ.
ಪೂರ್ವ ಆಫ್ರಿಕಾದ ರುವಾಂಡಾದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ವಿಚಿತ್ರ ಮಗುವಿಗೆ ಜನ್ಮ ನೀಡಿದ್ದಾಳೆ. ಕೆಲವರು ಆ ಮಗುವನ್ನು ಏಲಿಯನ್ಸ್ ಎನ್ನುತ್ತಿದ್ದಾರೆ. ಕೆಲವರು ಇದು ದೆವ್ವ ಎನ್ನುತ್ತಿದ್ದಾರೆ. ತಂದೆ ಮಗುವನ್ನು ಸ್ವೀಕರಿಸಲು ಒಪ್ಪುತ್ತಿಲ್ಲ.
ಇದನ್ನೂ ಓದಿ: Photoshoot:ಮರ, ಗಿಡ, ಎಲೆ ಬಳಸಿ ಹಾಟ್ ಪೋಟೋ ಶೂಟ್….! ವೈರಲ್ ಆಯ್ತು ಫ್ರೀವೆಡ್ಡಿಂಗ್ ಪೋಟೋಸ್….!!
ವರದಿಯ ಪ್ರಕಾರ, ಮಗುವನ್ನು ಇಷ್ಟಪಡದ ತಂದೆ, ಮಗುವನ್ನು ಕೊಲ್ಲಲು ಆದೇಶ ನೀಡಿದ್ದಾನೆ ಎನ್ನಲಾಗಿದೆ. ಮಗುವಿನ ತಾಯಿ ಬಜೆನೆಜಾ ಲಿಬರ್ಟಾ ಇದಕ್ಕೆ ಒಪ್ಪಲಿಲ್ಲ. ಇದೇ ಕಾರಣಕ್ಕೆ ತಾಯಿ ಮಗುವಿನೊಂದಿಗೆ ಪತಿಯಿಂದ ದೂರವಾಗಿದ್ದಾರೆ. ಯಾವುದೇ ಕಾರಣಕ್ಕೂ ಮಗುವನ್ನು ತಾನು ಸ್ವೀಕಾರ ಮಾಡುವುದಿಲ್ಲ ಎಂದಿದ್ದಾನೆ ತಂದೆ.
ಈ ಕುರಿತು ಮಗುವಿನ ತಾಯಿ ಬಜೆನೆಜಾ, ಸಾಮಾಜಿಕ ಜಾಲತಾಣದಲ್ಲಿ ತನ್ನ ನೋವನ್ನುಹಂಚಿಕೊಂಡಿದ್ದಾಳೆ. ಮಗುವನ್ನು ನೋಡಿಕೊಳ್ಳುವುದು ಕಷ್ಟವಾಗ್ತಿದೆ ಎಂದಿದ್ದಾಳೆ. ಬಜೆನೆಜಾಗೆ ಈಗಾಗಲೇ ಕೆಲವು ಮಕ್ಕಳಿದ್ದಾರೆ. ಆದರೆ ಉಳಿದ ಎಲ್ಲಾ ಮಕ್ಕಳು ಸಾಮಾನ್ಯವಾಗಿದ್ದಾರೆ ಎಂದು ಬಜೆನೆಜಾ ಹೇಳಿದ್ದಾಳೆ. ಮಗನ ಚಿಕಿತ್ಸೆಗಾಗಿ ಆನ್‌ಲೈನ್‌ನಲ್ಲಿ ಆರ್ಥಿಕ ನೆರವು ಕೇಳಿದ್ದಾಳೆ.
ಇದನ್ನೂ ಓದಿ: ಸತ್ತ ಮಗನನ್ನು ಬದುಕಿಸಿದ ತಾಯಿ : ಅಂತ್ಯಕ್ರೀಯೆ ಹೊತ್ತಲ್ಲಿ ನಡೆಯಿತು ಪವಾಡ ..!!