Kerala Corona Updates : ಕೇರಳದಲ್ಲಿ ನಿಲ್ಲದ ಕೊರೊನಾ ಆರ್ಭಟ : ಇಂದು 31,265 ಮಂದಿಗೆ ಕೊರೊನಾ ಸೋಂಕು

ತಿರುವನಂತಪುರಂ : ಕೇರಳದಲ್ಲಿ ಕಳೆದ ನಾಲ್ಕು ದಿನಗಳಿಂದಲೂ ಮೂವತ್ತು ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿದೆ. ರಾಜ್ಯದಲ್ಲಿಂದು ಬರೋಬ್ಬರಿ 31,265 ಮಂದಿಗೆ ಹೊಸದಾಗಿ ಕೊರೊನಾ ವೈರಸ್‌ ಸೋಂಕು ದೃಢಪಟ್ಟಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ತ್ರಿಶೂರ್ 3957, ಎರ್ನಾಕುಲಂ 3807, ಕೋಯಿಕ್ಕೋಡ್ 3292, ಮಲಪ್ಪುರಂ 3199, ಕೊಲ್ಲಂ 2751, ಪಾಲಕ್ಕಾಡ್ 2488, ತಿರುವನಂತಪುರಂ 2360, ಆಲಪ್ಪುಳ 1943, ಕೊಟ್ಟಾಯಂ 1680, ಕಣ್ಣೂರು 1643, ಪತ್ತನಂತಿಟ್ಟ 1229, ವಯನಾಡ್ 1224, ಇಡುಕ್ಕಿ 1171 ಮತ್ತು ಕಾಸರಗೋಡು 521 ಪ್ರಕರಣ ದಾಖಲಾಗಿದೆ.

ಕಳೆದ 24 ಗಂಟೆಯ ಅವಧಿಯಲ್ಲಿ 1,67,497 ಮಂದಿಯನ್ನು ಪರೀಕ್ಷಿಸಲಾಗಿದ್ದು, ಪಾಸಿಟಿವಿಟಿದರ 18.67 ಏರಿಕೆಯಾಗಿದೆ. ಸೆಂಟಿನೆಲ್ ಮಾದರಿ, CBNAT, Trunat, POCT. ಪಿಸಿಆರ್, ಆರ್ಟಿ LAMP ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 3,11,23,643 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದೆ. ಇಂದು ರಾಜ್ಯದಲ್ಲಿ ಒಟ್ಟು 153 ಮಂದಿ ಸಾವನ್ನಪ್ಪಿದ್ದು, ಇದುವರೆಗೆ 20,466 ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಇಂದು ಪತ್ತೆಯಾದ ಕೊರೊನಾ ಸೋಂಕಿತರ ಪೈಕಿ 120 ಜನರು ಹೊರ ರಾಜ್ಯದವರಾಗಿದ್ರೆ, 29,891 ಜನರು ಕೊರೊನಾ ಸಂಪರ್ಕಿತರೊಂದಿಗೆ ಸಂಪರ್ಕ ಹೊಂದಿದವರೇ ಆಗಿದ್ದಾರೆ. ಆದರ 1158 ಜನರಿಗೆ ಯಾವ ಸಂರ್ಪಕದಿಂದ ಸೋಂಕು ತಗುಲಿದೆ ಅನ್ನೋದು ಖಚಿತವಾಗಿಲ್ಲ. ಇನ್ನೊಂದೆಡೆಯಲ್ಲಿ ಆರೋಗ್ಯ ಇಲಾಖೆಯ ವೈದ್ಯರು, ಸಿಬ್ಬಂದಿಗಳಿಗೂ ಸೋಂಕು ಕಾಣಿಸಿಕೊಂಡಿದೆ. ಇಂದು ಬರೋಬ್ಬರಿ 96 ಆರೋಗ್ಯ ಕಾರ್ಯಕರ್ತರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಕಣ್ಣೂರು 21, ವಯನಾಡು 18, ಕೊಲ್ಲಂ 10, ಕೋಯಿಕ್ಕೋಡ್ 7, ಪತ್ತನಂತಿಟ್ಟ 6, ತಿರುವನಂತಪುರಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಕಾಸರಗೋಡು ತಲಾ 5 ಮತ್ತು ಆಲಪ್ಪುಳ 4 ಮಂದಿಗೆ ದೃಢಪಟ್ಟಿದೆ.

ಇದನ್ನೂ ಓದಿ :  ಭಾರತದಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು : 46,759 ಮಂದಿಗೆ ಸೋಂಕು, 509 ಮಂದಿ ಸಾವು

ಕೇರಳದಲ್ಲಿಂದು 21,468 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ತಿರುವನಂತಪುರಂ 1571, ಕೊಲ್ಲಂ 2416, ಪತ್ತನಂತಿಟ್ಟ 805, ಆಲಪ್ಪುಳ 1244, ಕೊಟ್ಟಾಯಂ 476, ಇಡುಕ್ಕಿ 741, ಎರ್ನಾಕುಲಂ 1819, ತ್ರಿಶೂರ್ 2521, ಪಾಲಕ್ಕಾಡ್ 2235, ಮಲಪ್ಪುರಂ 3002, ಕೋಳಿಕ್ಕೋಡ್ 2301, ವಯನಾಡ್ 649, ಕಣ್ಣೂರು 1138 ಮತ್ತು ಕಾಸರಗೋಡು 550 ಗುಣಮುಖರಾಗಿದ್ದಾರೆ. ಈ ಮೂಲಕ ಕೊರೊನಾ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 37,51,666 ಏರಿಕೆಯಾಗಿದೆ. ರಾಜ್ಯದಲ್ಲಿ 5,14,031 ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ 4,84,508 ಜನರು ಮನೆ ಹಾಗೂ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ರೆ, 29,523 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ 2792 ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ : No Vaccine No Ration : ಕೊರೊನಾ ಲಸಿಕೆ ಪಡೆಯದಿದ್ರೆ ಪಡಿತರ ಕಡಿತ : ಚರ್ಚೆ ಹುಟ್ಟು ಹಾಕಿದೆ ತಹಶೀಲ್ದಾರ್‌ ಆದೇಶ

Comments are closed.