Amitabh Bachchan Statue New Jersey : ಬಾಲಿವುಡ್ ಬಿಗ್ ಬೀ ಅಮಿತಾಬ್ ಬಚ್ಚನ್ ದಶಕಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಇದುವರೆಗೂ ವಿಭಿನ್ನ ಪಾತ್ರಗಳ ಮೂಲಕ ಮನರಂಜಿಸಿದ್ದಾರೆ. ಹೀಗಾಗಿ ದೇಶದಾದ್ಯಂತ ಹಾಗೂ ಪ್ರಪಂಚದಲ್ಲಿನಟ ಅಮಿತಾಬ್ ಬಚ್ಚನ್ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಈ ಪೈಕಿ ವಿದೇಶಿ ಅಭಿಮಾನಿಯೊಬ್ಬರು (Rinku and Gopi Seth) ಮನೆ ಮುಂದೇ ಅಮಿತಾಬ್ ಬಚ್ಚನ್ ಪ್ರತಿಮೆ ಸ್ಥಾಪಿಸಿ ಅಭಿಮಾನ ಪರಾಕಾಷ್ಠೆ ಮೆರೆದಿದ್ದಾರೆ.

ಅಮಿತಾಬ್ ಬಚ್ಚನ್ ಭಾಷೆಗಳನ್ನು ದಾಟಿ ಎಲ್ಲ ವರ್ಗದ ಜನರ ಮನಗೆದ್ದ ಹೀರೋ. ಹೀಗಾಗಿ ಎಷ್ಟೇ ಸೂಪರ್ ಸ್ಟಾರ್, ಹೀರೋಗಳು ಬಂದರೂ ಅಮಿತಾಬ್ ಮೇಲಿನ ಅಭಿಮಾನ ಕಡಿಮೆಯಾಗೋದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಅಮಿತಾಬ್ ಬಚ್ಚನ್ ಅಭಿಮಾನಿಯೊಬ್ಬರು ದೂರದ ಅಮೆರಿಕಾದಲ್ಲಿ ಮನೆ ಕಟ್ಟಿದ್ದರೂ ಅಲ್ಲಿ ಅಮಿತಾಬ್ ಬಚ್ಚನ್ ಮೇಲಿನ ಅಭಿಮಾನ ಮೆರೆದು ಅಚ್ಚರಿ ಮೂಡಿಸಿದ್ದಾರೆ.

ಭಾರತ ಮೂಲದ ಗೋಪಿ ಎಂಬುವವರು ಅಮಿತಾಬ್ ಬಚ್ಚನ್ ಅಭಿಮಾನಿಯಾಗಿದ್ದು, ದೂರದ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನೆಲೆಸಿದ್ದಾರೆ. ಅಲ್ಲಿಯೇ ಹೊಸ ಮನೆಯನ್ನು ಕಟ್ಟಿದ್ದಾರೆ. ಆ ಮನೆಯ ಎದುರು ಕೋಟ್ ಧರಿಸಿ ಕುಂತ ಅಮಿತಾಭ್ ಬಚ್ಚನ್ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಈ ಪೋಟೋಗಳನ್ನು ಸ್ವತಃ ಗೋಪಿಯವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.ಅಮಿತಾಬ್ ಅವರು ನನಗೆ ಮತ್ತು ನನ್ನ ಪತ್ನಿಗೆ ದೇವರಿಗಿಂತ ಹೆಚ್ಚು. ಅವರ ಎಲ್ಲ ವಿಚಾರಗಳು ನನಗೆ ಸ್ಪೂರ್ತಿದಾಯಕ. ಅವರಂಥ ಸರಳ ವ್ಯಕ್ತಿಯನ್ನು ನಾನು ನೋಡಿಲ್ಲ.ಅವರು ಇತರ ಸ್ಟಾರ್ ಗಳಂತೆ ಅಲ್ಲ. ಇದೇ ಕಾರಣಕ್ಕೆ ನಮ್ಮ ಮನೆ ಎದುರು ಅವರ ಪ್ರತಿಮೆ ನಿರ್ಮಿಸಲು ನಿರ್ಧರಿಸಿದ್ದೇನೆ ಎಂದು ಗೋಪಿ ಮಾಧ್ಯಮಗಳಿಗೆ ನೀಡಿದ ಮಾಹಿತಿಯಲ್ಲಿ ಹೇಳಿದ್ದಾರೆ.
👆🏻👆🏻On Saturday august 27th we have placed @SrBachchan statue 👆🏻👆🏻👆🏻👆🏻at outside in the front of our new home in edison NJ USA . Lots of Mr Bachchan’s fan’s participated on Mr Bachchan’s staue inoguration ceremony. pic.twitter.com/O3RklFS5eZ
— Gopi EFamily (@GopiSheth) August 28, 2022
1990 ರಿಂದ ಗೋಪಿ ಅಮೇರಿಕಾಕ್ಕೆ ತೆರಳಿದ್ದು ಅಂದಿನಿಂದ ಅಲ್ಲೇ ವ್ಯವಹಾರ ನಡೆಸುತ್ತಿದ್ದಾರೆ. ಕೇವಲ ಉದ್ಯಮಿ ಮಾತ್ರವಲ್ಲ ಅಮಿತಾಬ್ ಬಚ್ಚನ್ ಹೆಸರಿನಲ್ಲಿ ಒಂದು ವೆಬ್ ಸೈಟ್ ಕೂಡ ನಡೆಸುತ್ತಿದ್ದಾರೆ.ಇನ್ನೂ ಅಮಿತಾಬ್ ಹೆಸರಿನಲ್ಲಿ ಪ್ರತಿಮೆ ನಿರ್ಮಿಸೋ ಸಂಗತಿಯನ್ನು ಗೋಪಿ ಅಮಿತಾಬ್ ಗೂ ತಿಳಿಸಿದ್ದಾರಂತೆ. ಆದರೆ ಈ ಅಭಿಮಾನ ಸರಿಯಲ್ಲ ಎಂದು ಅಮಿತಾಬ್ ಕೂಡ ಹೇಳಿದ್ದಾರಂತೆ. ಆದರೂ ಕೂಡ ಗೋಪಿ ಅಮಿತಾಬ್ ಪ್ರತಿಮೆ ನಿರ್ಮಿಸಿದ್ದಾರೆ. ಅಮಿತಾಬ್ ಬಚ್ಚನ್ ಕೌನ್ ಬನೇಗಾ ಕರೋಡ್ ಪತಿ ಶೋ ಮೂಲಕ ಜನಪ್ರಿಯತೆ ಗಳಿಸಿದ್ದರು. ಇದೇ ಶೋ ಮಾದರಿಯ ಪ್ರತಿಮೆಯನ್ನೇ ಗೋಪಿ ನಿಲ್ಲಿಸಿದ್ದು ಇದಕ್ಕಾಗಿ ಬರೋಬ್ಬರಿ 60 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿದ್ದಾರೆ.
ಇದನ್ನೂ ಓದಿ : Coffee Nadu Chandu: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮೂಲಕ ಶಿವಣ್ಣರನ್ನು ಭೇಟಿಯಾದ ಕಾಫಿನಾಡು ಚಂದು : ಅನುಶ್ರೀಯಿಂದ ವಿಶೇಷ ಗಿಫ್ಟ್
ಇದನ್ನೂ ಓದಿ : Shilpa Shetty Kundra Workout : ಕಾಲು ಮುರಿದ್ರೂ ಕೈಯಲ್ಲೇ ವರ್ಕೌಟ್: ಕರಾವಳಿ ಬೆಡಗಿಯ ಹೊಸ video viral
Amitabh Bachchan Statue Installed By An Indian-American Rinku and Gopi Seth Family At New Jersey Home