Shashi Tharoor : ಕಾಂಗ್ರೆಸ್ ಅಧ್ಯಕ್ಷ ಗದ್ದುಗೆ ಮೇಲೆ ಶಶಿ ಕಣ್ಣು..?

ತಿರುವನಂತಪುರ : (Shashi Tharoor) ಕಾಂಗ್ರೆಸ್ ಅಧ್ಯಕ್ಷ ಯಾರಾಗ್ತಾರೆ. ಗಾಂಧಿ ಕುಟುಂಬದ ಹೊರತಾಗಿ ಕಾಂಗ್ರೆಸ್ ಪಕ್ಷವನ್ನ ಮುನ್ನಡೆಸುವ ನಾಯಕ ಯಾರಾಗಿರಬಹುದು. ಸದ್ಯ ಎಲ್ಲರನ್ನ ಕಾಡುತ್ತಿರುವ ಪ್ರಶ್ನೆ ಇದು. ಆದ್ರೆ ನಾನೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಸಂಸದ ಶಶಿ ತರೂರ್ ಸುಳಿವು ಬಿಟ್ಟು ಕೊಟ್ಟಿದ್ದಾರೆ.

ಕೇರಳದ ತಿರುವನಂತಪುರದ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಶಶಿ ತರೂರ್ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ ಸ್ಟಾರ್ ಗಿರಿ ಪಡೆದಿರೋ ಶಶಿ ತರೂರ್ ಪತ್ರಿಕೆಯೊಂದಕ್ಕೆ ಬರೆದ ಲೇಖನದಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತಾವೂ ಆಕಾಂಕ್ಷಿಯ ಅನ್ನೋದರ ಸುಳಿವು ಬಿಟ್ಟು ಕೊಟ್ಟಿದ್ದಾರೆ.

ಈಗಾಗಲೇ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಪ್ರಬಲ ಸ್ಪರ್ಧಿಯಾಗಬಹುದು. ಹಾಗೂ ಗಾಂಧಿ ಕುಟುಂಬದ ಆಯ್ಕೆ ಆಗಿರಬಹುದು ಅಂತಾ ರಾಷ್ಟ್ರ ರಾಜಕಾರಣದಲ್ಲಿ ಹಾಗೂ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆ ನಡೀತಿದೆ. ಈ ಹೊತ್ತಲ್ಲಿ ಶಶಿ ತರೂರ್ ಕಾಂಗ್ರೆಸ್ ಅಧ್ಯಕ್ಷ ಯಾರಗಬೇಕು ಅಂತಾ, ಅಧ್ಯಕ್ಷರಾದವರು ಹೇಗಿರಬೇಕು, ಅಧ್ಯಕ್ಷರಾಗಲು ಬೇಕಾದ ಅರ್ಹತೆ ಕುರಿತು ಪತ್ರಿಕೆಯೊಂದಕ್ಕೆ ಬರೆದ ಲೇಖನದಲ್ಲಿ ದಾಖಲಿಸಿದ್ದಾರೆ. ಹೀಗಾಗಿ ಶಶಿ ತರೂರ್ ಸಹ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯೋ ಚುನಾವಣೆಗೆ ಸ್ಪರ್ಧೆ ಮಾಡಬಹುದು ಅಂತಾ ಹೇಳಲಾಗ್ತಿದೆ.

ಶಶಿ ತರೂರ್ ಪತ್ರಿಕೆ ಬರೆದ ಲೇಖನದಲ್ಲಿ ಪ್ರಮುಖವಾಗಿ ಮೂರು ಅಂಶಗಳನ್ನ ಉಲ್ಲೇಖಿಸಿದ್ದಾರೆ. ಅದರಲ್ಲಿ ಮೊದಲನೇಯದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸೋಕೆ ಮುಂದಾಗಿರೋದು. ಎರಡನೇಯದು ರಾಹುಲ್ ಗಾಂಧಿ ಮತ್ತೆ ನಾಯಕತ್ವವನ್ನ ವಹಿಸಿಕೊಳ್ಳೋದಕ್ಕೆ ಹಿಂದೇಟು ಹಾಕಿರೋದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಅಲ್ದೆ,  ಒಂದೇ ಕುಟುಂಬ ಪಕ್ಷವನ್ನ ಮುನ್ನಡೆಸುತ್ತೆ ಅಂತಾ ನಂಬಿಕೊಳ್ಳಬಾರದು ಎಂದೂ ಪ್ರತಿಪಾದಿಸಿದ್ದಾರೆ. ಹೀಗಾಗಿ ತರೂರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸ್ತಾರಾ ಅನ್ನೋ ಅನುಮಾನ ಹುಟ್ಟಿದೆ.

ಆದರೆ ಮತ್ತೊಂದು ಮೂಲಗಳ ಪ್ರಕಾರ ಒಂದು ವೇಳೆ ಅಧ್ಯಕ್ಷ ಚುನಾವಣಾ ಅಖಾಡಕ್ಕೆ ಗಾಂಧಿ ಕುಟುಂಬದವರು ಯಾರಾದ್ರೂ ಇಳಿದರೆ ಶಶಿ ತರೂರ್ ಸ್ಪರ್ಧೆ ಮಾಡೋದಿಲ್ಲ ಅಂತ ಹೇಳಲಾಗ್ತಿದೆ. ಅಕ್ಟೋಬರ್ 17 ರಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 19ರಂದು ಫಲಿತಾಂಶ ಬರಲಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಯಾರು ಬೇಕಾದ್ರೂ ನಾಮಪತ್ರ ಸಲ್ಲಿಸಬಹುದು ಅಂತಾ ತಿಳಿಸಲಾಗಿದೆ. ಸೆಪ್ಟೆಂಬರ್ 24ರಿಂದ 30ನೇ ತಾರೀಖಿನವರೆಗೆ ನಾಮಪತ್ರ ಸಲ್ಲಿಕೆ ಮಾಡಬಹುದಾಗಿದೆ. 2000ನೇ ಇಸ್ವಿ ಬಳಿಕ ಬರೋಬ್ಬರಿ 21 ವರ್ಷದ ನಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಇದನ್ನೂ ಓದಿ : Amitabh Bachchan Statue New Jersey :ಅಮೇರಿಕಾದಲ್ಲೂ ಅಮಿತಾಬ್ ಹವಾ: ಭಾರತೀಯ ಅಭಿಮಾನಿ ಮನೆ ಮುಂದೇ ಸಿದ್ಧವಾಯ್ತು ಬಿಗ್ ಬೀ ಪ್ರತಿಮೆ

ಇದನ್ನೂ ಓದಿ : Ganesh Chaturthi : ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಪಾಲಿಕೆಯ ಐತಿಹಾಸಿಕ ತೀರ್ಮಾನ

Shashi Tharoor- congress president election-Sonia Gandhi-Rahul Gandhi-Politics

Comments are closed.