Another Pandemic: ಇನ್ನೊಂದು ಪ್ಯಾಂಡೆಮಿಕ್ ಎದುರಾಗಬಹುದು ಹುಷಾರ್, ಈಗಲೇ ತಯಾರಿ ಮಾಡಿಕೊಳ್ಳಿ: ಬಿಲ್ ಗೇಟ್ಸ್ ಎಚ್ಚರಿಕೆ

ಕೋವಿಡ್ -19 ರ ಅಪಾಯ ಕಡಿಮೆಯಾಗಿದೆ ಅನಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಜಗತ್ತು ಮತ್ತೊಂದು ಸಾಂಕ್ರಾಮಿಕ ರೋಗವನ್ನು (Another Pandemic) ಎದುರಿಸುವ ಸನ್ನಿವೇಶ ಬರಬಹುದಾಗಿದೆ ಎಂಬುದು ಬಹುತೇಕ ಖಚಿತವಾಗಿದೆ ಎಂದು ಜರ್ಮನಿಯ ವಾರ್ಷಿಕ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಬಿಲ್ ಗೇಟ್ಸ್ (Bill Gates) ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ಜಾಗತಿಕ ಜನಸಂಖ್ಯೆಯ ಹೆಚ್ಚಿನ ಭಾಗವು ಕರೋನವೈರಸ್ ವಿರುದ್ಧ ಒಂದು ನಿರ್ದಿಷ್ಟ ಮಟ್ಟದ ರಕ್ಷಣೆಯನ್ನು ಸಾಧಿಸಿದೆ. ಅದರ ತೀವ್ರತೆಯು ಕ್ಷೀಣಿಸಿದೆ ಎಂದು ಅವರು ಹೇಳಿದರು.

ಭವಿಷ್ಯದಲ್ಲಿ ಅಪಾಯಕ್ಕೀಡು ಮಾಡಬಲ್ಲ ತೀವ್ರವಾದ ಕಾಯಿಲೆಯ ಸಾಧ್ಯತೆಯು ಮುಖ್ಯವಾಗಿ ವಯಸ್ಸಾದವರಿಗೆ ಮತ್ತು ಬೊಜ್ಜು ಅಥವಾ ಮಧುಮೇಹ ಹೊಂದಿರುವವರಿಗೆ ಸಂಬಂಧಿಸಿದೆ. ನಾವು ಮತ್ತೊಂದು ಸಾಂಕ್ರಾಮಿಕ ರೋಗವನ್ನು ಎದುರಿಸಬೇಕಾಗಬಹುದು. ಮುಂದಿನ ಬಾರಿ ವಿಭಿನ್ನ ರೋಗಕಾರಕವೊಂದು ನಮಗೆ ಸಮಸ್ಯೆ ಉಂಟುಮಾಡಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ವೈದ್ಯಕೀಯ ತಂತ್ರಜ್ಞಾನದಲ್ಲಿ ಈಗ ಹೂಡಿಕೆ ಮಾಡಿದರೆ, ಭವಿಷ್ಯದ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಜಗತ್ತು ಉತ್ತಮ ಸ್ಥಿತಿಯಲ್ಲಿರುತ್ತದೆ. ಇದಲ್ಲದೆ, ಈ ವರ್ಷದ ಮಧ್ಯದ ವೇಳೆಗೆ ಜಾಗತಿಕ ಜನಸಂಖ್ಯೆಯ 70% ರಷ್ಟು ಲಸಿಕೆ ಹಾಕುವ ವಿಶ್ವ ಆರೋಗ್ಯ ಸಂಸ್ಥೆಯ ಗುರಿಯನ್ನು ತಲುಪಲು ಈಗಾಗಲೇ “ತುಂಬಾ ತಡವಾಗಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

“ಮುಂದಿನ ಸಲ ಯಾವುದೇ ಪ್ಯಾಂಡೆಮಿಕ್ ಉಂಟಾದಲ್ಲಿ ಎರಡು ವರ್ಷಗಳ ಬದಲಿಗೆ, ನಾವು ಅದನ್ನು ಆರು ತಿಂಗಳಿಗೆ ಎಲ್ಲರಿಗೂ ಲಸಿಕೆ ವಿತರಿಸುವಂತಹ ಪ್ರಯತ್ನ ಮಾಡಬೇಕು” ಎಂದು ಅವರು ಹೇಳಿದರು, ಮೆಸೆಂಜರ್ ಆರ್‌ಎನ್‌ಎ (ಎಂಆರ್ಎನ್ಎ) ತಂತ್ರಜ್ಞಾನ ಸೇರಿದಂತೆ ಪ್ರಮಾಣಿತ ವೇದಿಕೆಗಳು ಅದನ್ನು ಸಾಧ್ಯವಾಗಿಸುತ್ತದೆ ಎಂದು ಅವರು ಸಲಹೆ ನೀಡಿದರು.

“ಮುಂದಿನ ಸಾಂಕ್ರಾಮಿಕ ರೋಗಕ್ಕೆ ತಯಾರಾಗುವ ವೆಚ್ಚವು ಅಷ್ಟು ದೊಡ್ಡದಲ್ಲ. ಇದು ಹವಾಮಾನ ಬದಲಾವಣೆಯಂತಲ್ಲ. ನಾವು ತರ್ಕಬದ್ಧರಾಗಿ ಯೋಷಿಸಿ ಮುಂಚಿತವಾಗಿ ಅಂದರೆ ಈಗಿನಿಂದಲೆ ಕ್ರಮ ಕೈಗೊಂಡಲ್ಲಿ ನಾವು ಅದನ್ನು ಬೇಗನೆ ಹಿಡಿಯಬಹುದಾಗಿದೆ ಎಂದು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ ಸಹ-ಅಧ್ಯಕ್ಷರಾಗಿರುವ ಗೇಟ್ಸ್ ಹೇಳಿದರು.

ಕಳೆದ ವಾರದಲ್ಲಿ ಜಾಗತಿಕವಾಗಿ ಹೊಸ ಕರೋನವೈರಸ್ ಪ್ರಕರಣಗಳ ಸಂಖ್ಯೆ 19% ರಷ್ಟು ಕುಸಿದಿದೆ ಮತ್ತು ಸಾವಿನ ಸಂಖ್ಯೆ ಸ್ಥಿರವಾಗಿದೆ ಎಂದು WHO ಈ ವಾರದ ಆರಂಭದಲ್ಲಿ ಹೇಳಿದೆ. ಕಳೆದ ವಾರ ವಿಶ್ವಾದ್ಯಂತ ಕೇವಲ 16 ಮಿಲಿಯನ್‌ಗಿಂತಲೂ ಹೆಚ್ಚು ಹೊಸ ಕೋವಿಡ್ -19 ಸೋಂಕುಗಳು ಮತ್ತು ಸುಮಾರು 75,000 ಸಾವುಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ಸಾಪ್ತಾಹಿಕ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 1

(Another Pandemic warns by Bill Gates Microsoft Co Founder)

Comments are closed.