ಮಂಗಳವಾರ, ಏಪ್ರಿಲ್ 29, 2025
HomeWorldBangladesh Ferry Fire: ಬಾಂಗ್ಲಾದೇಶದಲ್ಲಿ ಹಡಗು ಬೆಂಕಿಗಾಹುತಿ: ಸಾವಿನ ಸಂಖ್ಯೆ 37ಕ್ಕೇರಿಕೆ

Bangladesh Ferry Fire: ಬಾಂಗ್ಲಾದೇಶದಲ್ಲಿ ಹಡಗು ಬೆಂಕಿಗಾಹುತಿ: ಸಾವಿನ ಸಂಖ್ಯೆ 37ಕ್ಕೇರಿಕೆ

- Advertisement -

Bangladesh Ferry Fire:ದಕ್ಷಿಣ ಬಾಂಗ್ಲಾದೇಶದಲ್ಲಿ ಹಡಗು ಬೆಂಕಿಗಾಹುತಿಯಾದ ಪ್ರಕರಣದಲ್ಲಿ ಸಾವನ್ನಪ್ಪಿದರವ ಸಂಖ್ಯೆ 37ಕ್ಕೆ ಏರಿಕೆ ಕಂಡಿದೆ. ಈ ಸಂಖ್ಯೆಯು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ದಕ್ಷಿಣ ಬಾಂಗ್ಲಾದೇಶದಿಂದ ಸುಗಂಧಾ ನದಿಯಲ್ಲಿ ಸುಮಾರು 500 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಮೂರು ಅಂತಸ್ತಿನ ಹಡಗಿಗೆ ಬೆಂಕಿ ಹೊತ್ತಿಕೊಂಡ ಹಿನ್ನೆಲೆಯಲ್ಲಿ ಈ ಅವಘಡ ಸಂಭವಿಸಿದೆ. ಈ ದುರಂತದಲ್ಲಿ 200 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ವರದಿಯ ಪ್ರಕಾರ ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ 250 ಕಿಲೋಮೀಟರ್​ ದೂರದಲ್ಲಿರುವ ದಕ್ಷಿಣ ಗ್ರಾಮೀಣ ಪಟ್ಟಣವಾದ ಜಲಕಾತಿ ಎಂಬಲ್ಲಿ ಶುಕ್ರವಾರ ಮುಂಜಾನೆ 3 ಗಂಟೆಯ ಸುಮಾರಿಗೆ(ಸ್ಥಳೀಯ ಕಾಲಮಾನ) ಈ ಅವಘಡ ಸಂಭವಿಸಿದೆ. ಢಾಕಾದಿಂದ ಪ್ರಯಾಣ ಆರಂಭಿಸಿದ್ದ ಬರ್ಗುನಾ ಬೌಂಡ್​ ಎಂವಿ ಅಭಿಜನ್​ 10 ಹಡಗಿನ ಇಂಜಿನ್ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.


ಜಲಕಾತಿ ಸುಗಂಧ ನದಿಯಲ್ಲಿರುವ ಪ್ರಯಾಣಿಕರ ಲಾಂಜ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಪರಿಣಾಮ 37 ಮಂದಿಯ ಮೃತದೇಹಗಳನ್ನು ಈವರೆಗೆ ಹೊರತೆಗೆಯಲಾಗಿದೆ ಎಂದು ಢಾಕಾ ಟ್ರಿಬ್ಯೂನ್​ ವರದಿ ಮಾಡಿದೆ.
ಸುಟ್ಟ ಗಾಯಗಳಿಂದ ಬಳಲುತ್ತಿರುವ ಇನ್ನೂರು ಜನರು ಪ್ರಸ್ತುತ ಸ್ಥಳೀಯ ಬರಿಸಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಹಡಗಿನ ಹೆಚ್ಚಿನ ಪ್ರಯಾಣಿಕರು ಇದ್ದಿದ್ದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದೆಂದು ನಿರೀಕ್ಷಿಸಲಾಗಿದೆ. ರಕ್ಷಣಾ ಸಿಬ್ಬಂದಿ ಈವರೆಗೆ 37 ಶವಗಳನ್ನು ಹೊರತೆಗೆದಿದ್ದಾರೆ ಎಂದು ಜಲಕತಿ ಉಪ ಆಯುಕ್ತ ಜೊಹೋರ್​ ಅಲಿ ಮಾಹಿತಿ ನೀಡಿದ್ದಾರೆ.


ಅಗ್ನಿಶಾಮಕ ದಳ ಸೇವಾ ನಿಯಂತ್ರಣ ಕೊಠಡಿ ನೀಡಿರುವ ಮಾಹಿತಿಯ ಪ್ರಕಾರ ಈವರೆಗೆ 72 ಮಂದಿಗೆ ಸುಟ್ಟ ಗಾಯಗಳುಂಟಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಡಗಿನಲ್ಲಿ ಸರಿಸುಮಾರು ಮೂರು ಗಂಟೆಗಳ ಕಾಲ ಬೆಂಕಿ ಕಾಣಿಸಿಕೊಂಡಿದ್ದು ಅನೇಕ ಪ್ರಯಾಣಿಕರು ತಮ್ಮ ಜೀವ ಉಳಿಸಿಕೊಳ್ಳಲು ನೀರಿಗೆ ಜಿಗಿದಿದ್ದಾರೆ ಎಂದು ಬದುಕುಳಿದ ಪ್ರಯಾಣಿಕರು ಘಟನೆಯನ್ನು ವಿವರಿಸಿದರು.

Bangladesh Ferry Fire: 37 Dead As Three-Storey Packed Ferry Catches Fire Mid River, 200 Injured

ಇದನ್ನು ಓದಿ : KV Raju No More: ಖ್ಯಾತ ನಿರ್ದೇಶಕ ಕೆ.ವಿ ರಾಜು ಇನ್ನಿಲ್ಲ : ಸ್ಯಾಂಡಲ್​ವುಡ್​ನಲ್ಲಿ ಮಡುಗಟ್ಟಿದ ಶೋಕ

ಇದನ್ನೂ ಓದಿ : Hurricane of the Philippines: ಫಿಲಿಪೈನ್ಸ್​ನಲ್ಲಿ ಚಂಡಮಾರುತದ ಆರ್ಭಟ; ಸಾವಿನ ಸಂಖ್ಯೆ 208ಕ್ಕೆ ಏರಿಕೆ

RELATED ARTICLES

Most Popular