ಬ್ರೆಜಿಲ್: ಬಾರ್ಸಿಲೋಸ್‌ನಲ್ಲಿ ವಿಮಾನ ಪತನ : 14 ಮಂದಿ ಸಾವು

ಪ್ರಯಾಣಿಸುತ್ತಿದ್ದ ವಿಮಾನ ಪತನಗೊಂಡು ಕನಿಷ್ಠ 14 ಮಂದಿ ಸಾವನ್ನಪ್ಪಿರುವ ಘಟನೆ ಬ್ರೆಜಿಲ್‌ (Brazil) ನ ಬಾರ್ಸಿಲೋಸ್‌ನಲ್ಲಿ (Barcelos) ನಡೆದಿದೆ. ವಿಮಾನ ದುರಂತದಲ್ಲಿ(plane Crash) ಯಾರೊಬ್ಬರೂ ಬದುಕಿಲ್ಲೆ ಎಂದು ಸಿಎನ್‌ಎನ್‌ ಬ್ರೆಸಿಲ್‌ ವರದಿ ಮಾಡಿದೆ.

ಬಾರ್ಸಿಲೋಸ್: ಪ್ರಯಾಣಿಸುತ್ತಿದ್ದ ವಿಮಾನ ಪತನಗೊಂಡು ಕನಿಷ್ಠ 14 ಮಂದಿ ಸಾವನ್ನಪ್ಪಿರುವ ಘಟನೆ ಬ್ರೆಜಿಲ್‌ (Brazil) ನ ಬಾರ್ಸಿಲೋಸ್‌ನಲ್ಲಿ (Barcelos) ನಡೆದಿದೆ. ವಿಮಾನ ದುರಂತದಲ್ಲಿ(plane Crash) ಯಾರೊಬ್ಬರೂ ಬದುಕಿಲ್ಲೆ ಎಂದು ಸಿಎನ್‌ಎನ್‌ ಬ್ರೆಸಿಲ್‌ ವರದಿ ಮಾಡಿದೆ.

ಪ್ರವಾಸಿಗರನ್ನು ಹೊತ್ತು ಸಾಗುತ್ತಿದ್ದ ಬಂದೈರಾಂಟೆ ಮಾದರಿಯ ವಿಮಾನದಲ್ಲಿ 12 ಮಂದಿ ಪ್ರವಾಸಿಗರು, ಪೈಲಟ್ ಮತ್ತು ಸಹ ಪೈಲಟ್ ಇದ್ದರು. ಬ್ರೆಸಿಲ್‌ ರಾಜಧಾನಿ ಮನೌಸ್‌ನಿಂದ ಸುಮಾರು 400 ಕಿಮೀ ದೂರದಲ್ಲಿರುವ ನಗರಕ್ಕೆ ಲ್ಯಾಂಡಿಂಗ್ ವಿಧಾನದ ಸಮಯದಲ್ಲಿ ವಿಮಾನ ಅಪಘಾತ ಸಂಭವಿಸಿದೆ ಎಂದು ಸಿವಿಲ್‌ ಡಿಫನ್ಸ್‌ ವರದಿ ಹೇಳಿದೆ.

ಮನೌಸ್‌ನಿಂದ ಬ್ರೆಜಿಲ್ ಕಾಲಮಾನ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ಎಲ್ಲಾ ಪ್ರವಾಸಿಗರು ಕೂಡ ಮೀನುಗಾರಿಕಾ ಪ್ರವಾಸಿ ತಾಣಕ್ಕೆ ಭೇಟಿ ನೀಡಲು ತೆರಳುತ್ತಿದ್ದರು ಎಂದು ಸಿಎನ್‌ಎನ್‌ ಬ್ರೆಸಿಲ್‌ ವರದಿ ಮಾಡಿದೆ.

Barcelos 14th dead After plane Crash in Brazil
Image Credit : twitter

ಇದನ್ನೂ ಓದಿ : ಸೂರ್ಯ ಮುಳುಗದ ವಿಶ್ವದ 8 ದೇಶಗಳು ! ಇಲ್ಲಿ ದಿನದ 24 ಗಂಟೆಯೂ ಸೂರ್ಯನ ಬೆಳಕು

ಘಟನಾ ಸ್ಥಳಕ್ಕೆ ಏರೋನಾಟಿಕಲ್ ಅಪಘಾತಗಳ ಸಂಶೋಧನೆ ಮತ್ತು ತಡೆಗಟ್ಟುವಿಕೆ ಕೇಂದ್ರವು (ಸೆನಿಪಾ) ಮತ್ತು ಏಳನೇ ಪ್ರಾದೇಶಿಕ ಸೇವೆಯ ತನಿಖೆ ಮತ್ತು ಏರೋನಾಟಿಕಲ್ ಅಪಘಾತಗಳ ತಡೆಗಟ್ಟುವಿಕೆ (ಸೆರಿಪಾ VII) ಅಧಿಕಾರಿಗಳು ಈಗಾಗಲೇ ಘಟನಾ ಸ್ಥಳಕ್ಕೆ ಭೇಟಿ ನೀಡದ್ದು, ಪರಿಶೀಲನೆಯನ್ನ ನಡೆಸುತ್ತಿದಾರೆ.

ನ್ಯಾಶನಲ್ ಸಿವಿಲ್ ಏವಿಯೇಷನ್ ಏಜೆನ್ಸಿ (ಅನಾಕ್) ಈ ವಿಮಾನವು ಮನೌಸ್ ಟ್ಯಾಕ್ಸಿ ಏರಿಯೊಗೆ ಸೇರಿದ್ದು ಮತ್ತು ಏರ್ ಟ್ಯಾಕ್ಸಿ ಸೇವೆಗಳನ್ನು ನಡೆಸಲು ಅನುಮತಿಯನ್ನು ಪಡೆದುಕೊಂಡಿದೆ.ಇನ್ನು ಪಿಟಿ-ಎಸ್‌ಒಜಿ ವಿಮಾನವನ್ನು ಒಳಗೊಂಡಿತ್ತು ಎಂದು ವಿಮಾನವನ್ನು ನಿರ್ವಹಿಸುವ ಕಂಪನಿ ಮನೌಸ್ ಏರೋಟಾಕ್ಸಿ ದೃಢಪಡಿಸಿದೆ.

ಇದನ್ನೂ ಓದಿ : ಅರಬ್‌ ನಾಡಲ್ಲಿ ಕೆಎಂಎಫ್ ನಂದಿನಿ, ದುಬೈನಲ್ಲಿ ನೂತನ ನಂದಿನಿ ಕಫೆ ಮೂ ಆರಂಭ‌

ಮನೌಸ್ ಏರೋಟಾಕ್ಸಿ ಅವರು ಪ್ರಯಾಣಿಕರ ಮತ್ತು ಸಿಬ್ಬಂದಿ ಸುರಕ್ಷತೆಗೆ ಹೆಚ್ಚಿನ ಅಧ್ಯತೆಯನ್ನು ನೀಡಲಾಗುತ್ತಿದೆ. ಉತ್ತಮ ಸಿಬ್ಬಂದಿಗಳನ್ನು ಹೊಂದಿದ್ದೇವೆ. ಜೊತೆಗೆ ನಾಗರೀಕ ವಿಮಾನಯಾನ ಪ್ರಾಧಿಕಾರ ಸಹಕಾರವನ್ನು ನೀಡುತ್ತಿದೆ ಎಂದಿದ್ದಾರೆ. ಜೊತೆಗೆ ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ :ದಿನಭವಿಷ್ಯ ಸೆಪ್ಟೆಂಬರ್‌ 17 2023 : ಈ ರಾಶಿಯವರಿಗೆ ಬ್ರಹ್ಮ, ದ್ವಿಪುಷ್ಕರ ಯೋಗದಿಂದ ಲಾಭ..!

ಸದ್ಯ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ. ಹವಾಮಾನ ವೈಪರಿತ್ಯದಿಂದಾಗಿ ಈ ದುರಂತ ಸಂಭವಿಸಿದೆಯೇ ? ಇಲ್ಲಾ ವಿಮಾನದಲ್ಲಿ ಯಾವುದಾದ್ರೂ ತಾಂತ್ರಿಕ ದೋಷ ಇದೆಯೇ ಅನ್ನೋ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ.

ಬಿರುಗಾಳಿಯಿಂದ ವಿಮಾನಪತನ :

ಬಾರ್ನಿಲೋಸ್‌ನಲ್ಲಿ ಬಿರುಗಾಳಿಯ ವಾತಾವರಣವಿದ್ದು, ಇದೇ ಸಮಯದಲ್ಲಿ ವಿಮಾನ ಲ್ಯಾಡಿಂಗ್‌ ಆಗಲು ಯತ್ನಿಸಿದೆ. ಇದರಿಂದಾಗಿ ಬ್ರಿಜೆಲ್‌ನ ಅಮೇಜಾನ್‌ನಲ್ಲಿ ವಿಮಾನ ಪತನವಾಗಿದೆ. ಫೈಲಟ್‌ ರನ್‌ವೇ ಮಧ್ಯಭಾಗದಲ್ಲಿ ವಿಮಾನವನ್ನು ಲ್ಯಾಂಡಿಂಗ್‌ ಮಾಡಲು ಯತ್ನಿಸಿದ್ದಾರೆ ಇದರಿಂದಾಗಿ ದುರಂತ ಸಂಭವಿಸಿದೆ ಎಂದು ಅಮೇಜಾನಾಸ್‌ ರಾಜ್ಯ ಭದ್ರತಾ ಕಾರ್ಯದರ್ಶಿ ವಿನಿಶಿಯಸ್‌ ಆಲ್ಮೇಡಾ ತಿಳಿಸಿದ್ದಾರೆ.

Barcelos 14th dead After plane Crash in Brazil
Image Credit : twitter

ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಕೂಡ ಬ್ರೆಜಿಲ್‌ನ ಪುರುಷರಾಗಿದ್ದಾರೆ. ವಿಮಾನವು ರಾಜ್ಯದ ರಾಜಧಾನಿ ಮನೌಸ್‌ನಿಂದ ಬಾರ್ಸೆಲೋಸ್‌ಗೆ ಸುಮಾರು 90 ನಿಮಿಷಗಳ ಹಾರಾಟ ನಡೆಸಿತ್ತು. ಈ ವೇಳೆಯಲ್ಲಿ ಹವಾಮಾನದ ಸಮಸ್ಯೆಯಿಂದಾಗಿ ಎರಡು ವಿಮಾನಗಳು ಬಾರ್ಸಿಲೋಸ್‌ಗೆ ವಾಪಾಸ್‌ ಆಗಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತರ ಶವಗಳನ್ನು ಗುರುತಿಸಲು ಎಲ್ಲಾ ಮೃತದೇಹಗಳನ್ನು ರಾಜಧಾನಿಗೆ ಕೊಂಡೊಯ್ಯಲಾಗಿದೆ. ಇನ್ನು ಅಮೇಜಾನ್‌ನ ಉಪನದಿಯಾಗಿರುವ ರಿಯೋ ನೀಗ್ರೋದಲ್ಲಿರುವ ಬಾರ್ಸೆಲೋನ್‌ ಹಲವು ರಾಷ್ಟ್ರೀಯ ಉದ್ಯಾನವನ ಮತ್ತು ಸುರಕ್ಷಿತ ಪ್ರದೇಶಗಳನ್ನು ಒಳಗೊಂಡಿದೆ.

Barcelos 14th dead After plane Crash in Brazil

Comments are closed.