ಮುಂಬೈ: ಹಾಲಿವುಡ್ ನಟಿ,ಮಾಡೆಲ್ ಹಾಗೂ ಟೆಲಿವಿಷನ್ ಸ್ಟಾರ್ ಕಿಮ್ ಕರದಾಶೈನ್ ಮೈಮುಚ್ಚೋದಕ್ಕಿಂತ ಬಿಚ್ಚಮ್ಮನಂತ ಬಟ್ಟೆಗಳಿಂದಲೇ ಸುದ್ದಿಯಾಗೋದು ಕಾಮನ್. ಆದರೆ ಇದೇ ಮೊದಲ ಬಾರಿಗೆ ಮುಖವನ್ನು ಮುಚ್ಚಿಕೊಳ್ಳೋ ಬಟ್ಟೆ ಧರಿಸಿ ಕಿಮ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದಾರೆ.

ನ್ಯೂಯಾರ್ಕ್ ನಲ್ಲಿ ನಡೆಯುತ್ತಿರೋ ಗಾಲಾ-2021 ಫ್ಯಾಶನ್ ಶೋದಲ್ಲಿ ಕಿಮ್ ಕರದಾಶೈನ್ ಏಲಿಯನ್ ನಂತೆ ಕಾಣುವ ಬಟ್ಟೆ ಧರಿಸಿ ಬಂದು ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ.

ಕಪ್ಪು ಬಣ್ಣದ ಸಂಪೂರ್ಣ ಲೆದರ್ ಕೋಟ್ ನಲ್ಲಿ ಕಿಮ್ ಮೈಮುಚ್ಚಿಕೊಂಡಿದ್ದು, ಮುಖವನ್ನು ಲೆದರ್ ಜಾಕೆಟ್ ನಿಂದ ಕವರ್ ಮಾಡಿಕೊಂಡು ಅಕ್ಷರಷಃ ಏಲಿಯನ್ ನಂತೆ ಮಿಂಚಿದ್ದಾರೆ.

ಇಂತಹದೊಂದು ಟ್ರೆಂಡಿ,ಲೆಟೆಸ್ಟ್ ಫ್ಯಾಶನ್ ಏಲಿಯನ್ ನಂತಹ ಕಾಸ್ಟ್ಯೂಮ್ ಪೋಟೋವನ್ನು ನಟಿ ಹಾಗೂ ಮಾಡೆಲ್ ಕಿಮ್ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲೂ ಶೇರ್ ಮಾಡಿದ್ದಾರೆ.
( Kim Kardashian’s complete undercover Balenciaga look )