Naman veer Singh Brar : ಶೂಟರ್‌ ನಮನ್‌ ವೀರ್‌ ಸಿಂಗ್‌ ಬ್ರಾರ್‌ ನಿಗೂಢ ಸಾವು

ಚಂಡೀಗಢ : ಅಂತರಾಷ್ಟ್ರೀಯ ಶೂಟರ್‌ ನಮನ್‌ವೀರ್ ಸಿಂಗ್‌ ಬ್ರಾರ್‌ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ದೇಹಕ್ಕೆ ಗುಂಡು ತಗಲಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದಕ್ಷಿಣ ಕೊರೊಯಾದಲ್ಲಿ ನಡೆದ ವಿವಿ ವಿಶ್ವಮಟ್ಟದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದ ನಮನ್‌ ವೀರ್‌ ಈ ಬಾರಿ ಕಳೆದ ಮಾರ್ಚ್‌ನಲ್ಲಿ ನಡೆದ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಟೂರ್ನಿಯಲ್ಲಿ ಅರ್ಹತಾ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಅಲ್ಲದೇ ಹಲವು ರಾಷ್ಟ್ರೀಯ ಮಟ್ಟದ ಹಲವು ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದ, 28 ವರ್ಷದ ಶೂಟರ್‌ ನಮನ್‌ ವೀರ್‌ ಸಿಂಗ್‌ ಬ್ರಾರ್‌ ಅವರು ಮೊಹಾಲಿಯಲ್ಲಿರುವ ತನ್ನ ಮನೆಯಲ್ಲಿ ಸಾವನ್ನಪ್ಪಿದ್ದಾರೆ. ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.

ಇದೀಗ ನಮನ್‌ ವೀರ್‌ ಸಿಂಗ್‌ ಅವರ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ವರದಿ ಬಂದ ನಂತರದಲ್ಲಿ ಸಾವಿನ ಹಿಂದಿನ ನಿಖರ ಕಾರಣ ತಿಳಿದುಬರಲಿದೆ. ಅಲ್ಲದೇ ಒಂದೊಮ್ಮೆ ಆತ್ಮಹತ್ಯೆ ಮಾಡಿಕೊಂಡಿದ್ದು, ದೃಢಪಟ್ಟರೆ ಅದಕ್ಕೆ ಕಾರಣವೇನು ಅನ್ನೋ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಮೊಹಾಲಿ ಉಪ ಪೊಲೀಸ್‌ ಆಯುಕ್ತ ಗುರುಶೇರ್‌ ಸಿಂಗ್‌ ತಿಳಿಸಿದ್ದಾರೆ.

ಇದನ್ನೂ ಓದಿ :

ಇದನ್ನೂ ಓದಿ : ಐಪಿಎಲ್‌ನಲ್ಲಿ ನೀಲಿ ಜರ್ಸಿ ತೊಟ್ಟು ಕಣಕ್ಕಿಳಿಯಲಿದೆ ಆರ್‌ಸಿಬಿ

ಇದನ್ನೂ ಓದಿ : ಕ್ರಿಕೆಟ್‌ ಮೈದಾನದಲ್ಲಿ ನಾಯಿಯ ಭರ್ಜರಿ ಫೀಲ್ಡಿಂಗ್‌ : ಚೆಂಡು ಕದ್ದ ನಾಯಿ, ಕ್ರಿಕೆಟ್‌ ಪಂದ್ಯವೇ ಸ್ಥಗಿತ !

( Naman veer Singh Brar, national shooter, found dead with bullet injury in head )

Comments are closed.