ಲಂಡನ್ : ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ತನ್ನ ಪ್ರೇಯಸಿಯನ್ನು ರಹಸ್ಯವಾಗಿ ಮದುವೆಯಾಗಿದ್ದಾರೆ. 56 ವರ್ಷದ ಬೋರಿಸ್ ಜಾನ್ಸನ್ ಮತ್ತು 33 ವರ್ಷದ ಸೈಮಂಡ್ಸ್ವೆಸ್ಟ್ಮಿನ್ಸ್ಟರ್ ಕ್ಯಾಥೆಡ್ರಲ್ನಲ್ಲಿ ರಹಸ್ಯವಾಗಿ ಮದುವೆಯಾಗಿರುವ ಕುರಿತು ಇಂಗ್ಲೆಂಡ್ ಪತ್ರಿಕೆಗಳು ವರದಿ ಮಾಡಿವೆ.
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಇಂಗ್ಲೆಂಡ್ ನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ಮದುವೆ ಸಮಾರಂಭಗಳಿಗೆ ಕೇವಲ 30 ಜನರಿಗೆ ಮಾತ್ರವೇ ಅವಕಾಶ ನೀಡಲಾಗುತ್ತಿದೆ. ಹೀಗಾಗಿಯೇ ಸೆಂಟ್ರಲ್ ಲಂಡನ್ ಸಮಾರಂಭಕ್ಕೆ ಅಂತಿಮ ಹಂತದಲ್ಲಿ ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಅಷ್ಟೇ ಯಾಕೆ ಪ್ರಧಾನಿ ಕಾರ್ಯಾಲಯದ ಸಿಬ್ಬಂದಿಗಳಿಗೂ ಮದುವೆಯ ಬಗ್ಗೆ ತಿಳಿದಿರಲಿಲ್ಲ ಎಂದು ಸನ್ ಮತ್ತು ಮೇಲ್ ಆನ್ ಸಂಡೇ ಪತ್ರಿಕೆಗಳು ವರದಿ ಮಾಡಿವೆ.
2019ರಿಂದಲೂ ಬೋರಿಸ್ ಜಾನ್ಸನ್ ಹಾಗೂ ಸೈಮಂಡ್ಸ್ ಲಿವಿಂಗ್ ಟು ಗೆದರ್ ನಲ್ಲಿದ್ದರು. ಕಳೆದ ವರ್ಷವೇ ಇಬ್ಬರೂ ಕೂಡ ತಾವು ಎಂಗೇಜ್ ಆಗಿದ್ದೇವೆ ಅಂತಾ ಹೇಳಿಕೊಂಡಿದ್ದರು. ಅಲ್ಲದೇ ವಿಲ್ಫ್ರೆಡ್ ಲಾವ್ರಿ ನಿಕೋಲಸ್ ಜಾನ್ಸನ್ ಎಂಬ ಮಗುವನ್ನೂ ಹೊಂದಿದ್ದರು. ಲೀವಿಂಗ್ ಟುಗೆದರ್ ರಿಲೇಷನ್ ಶಿಪ್ ಹೊಂದಿದ ಕಾರಣಕ್ಕೆ ಜಾನ್ಸನ್ ಅವರನ್ನು ಕನ್ಸರ್ವೇಟಿವ್ ಪಕ್ಷದ ನೀತಿ ತಂಡದಿಂದ ವಜಾಗೊಳಿಸಲಾಗಿತ್ತು.
ಈಗಾಗಲೇ ಎರಡು ಮದುವೆಯಾಗಿದ್ದು, ಇಬ್ಬರಿಗೂ ಕೂಡ ವಿಚ್ಚೇಧನ ನೀಡಿದ್ದಾರೆ. ಇದೀಗ ರಹಸ್ಯವಾಗಿ ಬೋರಿಸ್ ಜಾನ್ಸನ್ ಮದುವೆಯಾಗಿರುವುದನ್ನು ಖಚಿತ ಪಡಿಸಲು ಜಾನ್ಸನ್ ಡೌನಿಂಗ್ ಸ್ಟ್ರೀಟ್ ಕಚೇರಿಯ ವಕ್ತಾರರು ನಿರಾಕರಿಸಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ.