ರಾಜ್ಯದಲ್ಲಿ ಸಿಎಂ ಬದಲಾವಣೆ ಖಚಿತ : ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಮುಖ್ಯಮಂತ್ರಿ, ಯತ್ನಾಳ್ ಉಪ ಮುಖ್ಯಮಂತ್ರಿ.!!!

ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ಸೋಂಕಿನ ನಡುವಲ್ಲೇ ರಾಜಕೀಯ ಚಟುವಟಿಕೆ ಮಿತಿಮೀರಿದೆ. ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆಯ ಮಾತು ಕೇಳಿ ಬಂದಿದ್ದು, ಅಶ್ವತ್ ನಾರಾಯಣ್ ಸಿಎಂ ಹಾಗೂ ಬಸನಗೌಡ ಪಾಟೀಲ ಯತ್ನಾಳ್ ಡಿಸಿಎಂ ಆಗೋದು ಖಚಿತ.

ಕೊರೊನಾ ವೈರಸ್ ಸೋಂಕಿನ ವಿಚಾರದಲ್ಲಿ ರಾಜ್ಯ ಸರಕಾರದ ವೈಫಲ್ಯದ ಕುರಿತು ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಇನ್ನೊಂದೆಡೆ ರಾಜ್ಯದಲ್ಲಿ ಪಕ್ಷದ ವರ್ಚಸ್ಸಿಗೂ ಧಕ್ಕೆ ಬಂದಿದೆ. ಮುಂಬರುವ ಚುನಾವಣೆ ಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರವುದು ಕಷ್ಟ ಸಾಧ್ಯ ಅನ್ನೋದು ಹೈಕಮಾಂಡ್ ಗಮನಕ್ಕೆ ಬಂದಿದೆ. ಸಾಲದಕ್ಕೆ ಬಿಜೆಪಿ ಶಾಸಕರೇ ಖುದ್ದು ಯಡಿಯೂರಪ್ಪ ವಿರುದ್ದ ಸೆಟೆದು ನಿಂತಿದ್ದಾರೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ರಾಜ್ಯದ ಬಿಜೆಪಿ ‌ನಾಯಕರು ಕೇಂದ್ರದ ನಾಯಕರಿಗೆ ಮನವಿ ಮಾಡಿದ್ದಾರೆ. ಇನ್ನೊಂದೆಡೆ ಸಂಘ ಪರಿವಾರಕ್ಕೆ ಕೂಡ  ಪ್ರಸ್ತುತ ಆಡಳಿತ ಬೇಸರವನ್ನು ತರಿಸಿದೆ. ಪ್ರಬಲ ಬಿಜೆಪಿ ಮುಖಂಡ ಸಂತೋಷ್ ಜೀ ನೇತೃತ್ವದಲ್ಲಿ ಈಗಾಗಲೇ ಸಿಎಂ ಬದಲಾವಣೆಗೆ ಮುಂದಾಗಿದ್ದು, ಡಿಸಿಎಂ ಆಗಿರುವ ಅಶ್ವತ್ಥ್ ನಾರಾಯಣ‌ ಅವರನ್ನು ಮುಖ್ಯಮಂತ್ರಿಯನ್ನಾಗಿ ಹಾಗೂ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಡಿಸಿಎಂ ಆಗಿ ನೇಮಕ ಮಾಡಿ ಬಿಜೆಪಿ ಹೈಕಮಾಂಡ್ ಅಧಿಕೃತ ಮುದ್ರೆಯೊತ್ತಿದೆ.

ಅಶ್ವತ್ಥ್ ನಾರಾಯಣ್‌ ಸಿಎಂ ಆಗೋದಕ್ಕೆ ಬಿಜೆಪಿಯ ಹಲವು ನಾಯಕರು ಬೆಂಬಲ ಸೂಚಿಸಿದ್ದಾರೆ. ಸಿಎಂ ಬದಲಾವಣೆಯ ಸೂಚನೆ ಸಿಗುತ್ತಿದ್ದಂತೆಯೆ‌ ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ವರಿಷ್ಠ ರನ್ನು ಭೇಟಿ ಮಾಡಿ ಯಡಿಯೂರಪ್ಪ ಬದಲಾವಣೆ ಮಾಡದಂತೆ ಮನವಿ‌ ಮಾಡಿದ್ದರು.‌ ಆದರೆ ಬಿಜೆಪಿ ಹೈಕಮಾಂಡ್ ಯಾವುದಕ್ಕೂ ಸೊಪ್ಪು ಹಾಕಿಲ್ಲ ಎನ್ನಲಾಗುತ್ತಿದೆ.

ಕಳೆದ ಒಂದು ವರ್ಷಗಳಿಂದಲೂ ಬಸನ ಗೌಡ ಪಾಟೀಲ ಯತ್ನಾಳ್ ಯಡಿಯೂರಪ್ಪ ವಿರುದ್ದ ತೊಡೆ ತಟ್ಟಿದ್ದರು. ಬಹಿರಂಗವಾಗಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ಸ್ವೀಕರಿಸ ಲಾರೆ ಎಂದಿದ್ದರು. ಮಾತ್ರವಲ್ಲ ಸಿಎಂ ಯಡಿಯೂರಪ್ಪ ವರ್ಚಸ್ಸು ಕುಂದುವಂತೆ ಮಾಡಿ, ತಾವು ಪ್ರಬಲ ಲಿಂಗಾಯಿತ ಮುಖಂಡರಾಗಿ ಹೊರ ಹೊಮ್ಮಿದ್ದಾರೆ. ಬಿಜೆಪಿ ಕೇಂದ್ರ ನಾಯಕರ ಬೆಂಬಲದಿಂದಲೇ ಯತ್ನಾಳ್ ಯಡಿಯೂರಪ್ಪ ವಿರುದ್ದ ತೊಡೆತಟ್ಟಿದ್ದರು ಅನ್ನೋ ಮಾತುಗಳು ಕೇಳಿಬಂದಿತ್ತು.

ಯಡಿಯೂರಪ್ಪ ಬದಲಾವಣೆಯ ಬೆನ್ನಲ್ಲೇ ರಾಜ್ಯದಲ್ಲಿ ಅಸಮಾಧಾನ ವ್ಯಕ್ತವಾದ್ರೆ, ಮರುಗೇಶ್ ನಿರಾಣಿ ಅವರನ್ನು ಡಿಸಿಎಂ ಆಗಿ ನೇಮಕ ಮಾಡುವ ಸಾಧ್ಯತೆ ಯಿದೆ‌. ಈಗಾಗಲೇ ಯಡಿಯೂರಪ್ಪ ಅವರನ್ನು ಹುದ್ದೆಯಿಂದ ‌ಕೆಳಗಿಳಿಸಲು ಹೈಕಮಾಂಡ್ ಅಂತಿಮ ಮುದ್ರೆಯೊತ್ತಿದೆ. ಮುಂದಿನ 15 ದಿನಗಳ ಒಳಗಾಗಿ ಸಿಎಂ ಬದಲಾವಣೆ ಖಚಿತ ಎನ್ನುತ್ತಿವೆ ಬಿಜೆಪಿ ಮೂಲಗಳು.

ಕೇವಲ‌ ಸಿಎಂ ಬದಲಾವಣೆಯಷ್ಟೇ ಅಲ್ಲಾ ರಾಜ್ಯದ ಸಚಿವ ಸಂಪುಟ ವನ್ನೇ ಪುನರಚನೆ ಮಾಡಲು ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಪ್ರಸ್ತುತ ಅಧಿಕಾರದಲ್ಲಿ ಇರುವ ಬಹುತೇಕ ಸಚಿವರನ್ನು ಸಂಪುಟದಿಂದ ಹೊರಗಿಡಲು ಸೂಚನೆಯನ್ನು ನೀಡಲಾಗಿದ್ದು, ಜನಸ್ನೇಹಿಯಾಗಿರದ ಸಚಿವರಿಗೆ ಕೋಕ್ ಸಿಗೋದು ಪಕ್ಕಾ.

Comments are closed.