ಸೋಮವಾರ, ಏಪ್ರಿಲ್ 28, 2025
HomeCorona UpdatesLockdown : ದಾಖಲೆಯ ಮಟ್ಟದಲ್ಲಿ ಕೊರೊನಾ ಹೆಚ್ಚಳ : ಆಸ್ಟ್ರೀಯಾದಲ್ಲಿ ಸಂಪೂರ್ಣ ಲಾಕ್‌ಡೌನ್‌ ಘೋಷಣೆ

Lockdown : ದಾಖಲೆಯ ಮಟ್ಟದಲ್ಲಿ ಕೊರೊನಾ ಹೆಚ್ಚಳ : ಆಸ್ಟ್ರೀಯಾದಲ್ಲಿ ಸಂಪೂರ್ಣ ಲಾಕ್‌ಡೌನ್‌ ಘೋಷಣೆ

- Advertisement -

ಆಸ್ಟ್ರೀಯಾ : ಹಲವು ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದರೂ ಕೂಡ, ಹಲವು ದೇಶಗಳಲ್ಲಿ ಸೋಂಕು ತೀವ್ರವಾಗಿ ಏರಿಕೆಯಾಗುತ್ತಿದೆ. ಇದೀಗ ಕೊರೊನಾ ಸೊಂಕು ತೀವ್ರವಾಗಿ ಏರಿಕೆಯಾದ ಬೆನ್ನಲ್ಲೇ ಆಸ್ಟ್ರೀಯಾ ದೇಶ ಸಂಪೂರ್ಣವಾಗಿ ಲಾಕ್‌ಡೌನ್‌ (Lockdown) ಘೋಷಣೆ ಮಾಡಿದೆ. ಅಲ್ಲದೇ ದೇಶದ ಪ್ರತೀ ಪ್ರಜೆಯೂ ವ್ಯಾಕ್ಸಿನ್‌ ಪಡೆಯುವುದನ್ನು ಕಡ್ಡಾಯಗೊಳಿಸಿದೆ.

ಇತ್ತೀಚಿನ ಕೆಲವು ವಾರಗಳಲ್ಲಿ ದೈನಂದಿನ ಸರಾಸರಿ ಸಾವಿನ ಪ್ರಮಾಣ ಮೂರು ಪಟ್ಟು ಹೆಚ್ಚಳವಾಗಿದೆ. 13 ಯುಎಸ್ ರಾಜ್ಯಗಳು ಈಗಾಗಲೇ 100,000 ಜನರಿಗೆ ಹೆಚ್ಚಿನ ಸಾವುಗಳು ಸಂಭವಿಸಿದೆ. ಆಸ್ಟ್ರೀಯಾದಲ್ಲಿ ಈಗಾಗಲೇ ನಿತ್ಯವೂ 15,809 ಹೊಸ ಸೋಂಕು ವರದಿಯಾಗುತ್ತಿದೆ. ಈ ಹಿನ್ನೆಲೆಯಲ್ಲೀಗ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ಆರಂಭದಲ್ಲಿ 10 ದಿನಗಳವರೆಗೆ ಲಾಕ್‌ಡೌನ್‌ ಜಾರಿ ಮಾಡಲಾಗಿದ್ದು, ಸಾಧಕ ಬಾಧಕಗಳನ್ನು ಚರ್ಚಿಸಿದ ನಂತರದಲ್ಲಿ ಮತ್ತೆ ವಿಸ್ತರಣೆ ಮಾಡುವ ಸಾಧ್ಯತೆಯಿದೆ.

ದಿನಸಿ ವಸ್ತುಗಳನ್ನು ಖರೀದಿಸುವುದು, ವೈದ್ಯರ ಬಳಿಗೆ ಹೋಗುವುದು ಅಥವಾ ವ್ಯಾಯಾಮ ಮಾಡುವುದು ಸೇರಿದಂತೆ ಕೆಲವು ಕಾರಣಗಳಿಗಾಗಿ ಮಾತ್ರ ಜನರು ತಮ್ಮ ಮನೆಯಿಂದ ಹೊರಗೆ ಬರಲು ಅವಕಾಶವನ್ನು ಕಲ್ಪಿಸಲಾಗಿದೆ. ಆರೋಗ್ಯ ಸಚಿವ ವೋಲ್ಫ್‌ಗ್ಯಾಂಗ್ ಮ್ಯೂಕ್‌ಸ್ಟೈನ್, ಶಿಶುವಿಹಾರಗಳು ಮತ್ತು ಶಾಲೆಗಳು ಓಪನ್‌ ಇರಲಿದೆ. ಆದರೆ ಪೋಷಕರು ಮಕ್ಕಳನ್ನು ಮನೆಯಲ್ಲಿಯೇ ಇರಿಸಿಕೊಳ್ಳಬಹುದಾಗಿದೆ ಎಂದು ಸರಕಾರ ಹೇಳಿದೆ. ಆಸ್ಟ್ರೀಯಾದ ಚಾನ್ಸೆಲರ್ ಅಲೆಕ್ಸಾಂಡರ್ ಸ್ಚಾಲೆನ್‌ಬರ್ಗ್ ಅವರು ಸರಕಾರದ ನಿಯಮ ಪಾಲನೆ ಮಾಡದವರ ವಿರುದ್ದ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಫೆಬ್ರವರಿ 1 ರಿಂದ, ದೇಶದಲ್ಲಿ ಲಸಿಕೆ ನೀಡುವ ಕಾರ್ಯವನ್ನು ಕಡ್ಡಾಯಗೊಳಿಸಲಾಗಿದೆ. ಆಸ್ಟ್ರಿಯಾ ಹಲವಾರು ಪಾಶ್ಚಿಮಾತ್ಯ ಯುರೋಪಿಯನ್ ದೇಶಗಳಲ್ಲಿ ಒಂದಾಗಿದೆ, ಅಲ್ಲಿ ಸೋಂಕುಗಳು ವೇಗವಾಗಿ ಹೆಚ್ಚುತ್ತಿವೆ ಮತ್ತು ವ್ಯಾಕ್ಸಿನೇಷನ್ ದರಗಳು ತುಲನಾತ್ಮಕವಾಗಿ ಹೆಚ್ಚಿದ್ದರೂ, ಆಸ್ಪತ್ರೆಗಳಲ್ಲಿ ಚಳಿಗಾಲದ ಉಲ್ಬಣವನ್ನು ಹಿಡಿದಿಡಲು ಸಾಕಾಗುವುದಿಲ್ಲ ಎಂಬ ಆತಂಕಗಳಿವೆ. ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಆಸ್ಟ್ರಿಯಾದ ಹೊಸದಾಗಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಇದುವರೆಗೆ ಇದು ನಾಲ್ಕನೇ ಬಾರಿಗೆ ಕಠಿಣ ಲಾಕ್‌ಡೌನ್‌ ಜಾರಿಯಾಗಿದೆ. ಕ್ರಿಸ್ಮಸ್‌ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಿಷೇಧ ಹೇರುವ ಸಾಧ್ಯತೆಯೂ ಇದೆ.

ಇದನ್ನೂ ಓದಿ : ಲಸಿಕೆ ತಲುಪಿಸೋಕೆ ಡ್ರೋನ್‌ : ರಾಜಧಾನಿಯಲ್ಲಿ ಯಶಸ್ವಿಯಾಯ್ತು ಹೊಸ ಸಾಹಸ

ಇದನ್ನೂ ಓದಿ : ಕೊರೊನಾ ಲಸಿಕೆ ಪಡೆದವರಿಗೆ ಮಾತ್ರ ರೇಷನ್‌ : ಸರಕಾರದ ಹೊಸ ಆದೇಶ

( Corona cases hit record high in this country, imposed complete Lockdown)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular