deadly nose bleed fever : ಜಗತ್ತಿನಲ್ಲಿ ಸಾಲು ಸಾಲು ಸಾಂಕ್ರಾಮಿಕ ರೋಗಳು ಹೆಚ್ಚುತ್ತಲೇ ಇದ್ದು ಜನತೆಯಲ್ಲಿ ಆತಂಕ ಹೆಚ್ಚಾಗಿದೆ. ಕೊರೊನಾ ಮಾರಿ ಇನ್ನೂ ಕಡಿಮೆಯೇ ಆಗಿಲ್ಲ. ಅಷ್ಟರಲ್ಲಿ ಇದೀಗ ಮಂಕಿಪಾಕ್ಸ್ ಭಯ ಶುರುವಾಗಿದೆ. ಇವೆರಡು ಸಾಲದು ಎಂಬಂತೆ ಇರಾಕ್ನಲ್ಲಿ ಹೊಸದೊಂದು ಭಯಾನಕ ಕಾಯಿಲೆ ಶುರುವಾಗಿದೆ. ರಕ್ತಸ್ರಾವದಿಂದ ಜನರು ಮೃತರಾಗುವ ವಿಚಿತ್ರ ಜ್ವರ ಇದಾಗಿದ್ದು ಈ ಸಾಂಕ್ರಾಮಿಕವು ಇನ್ನಷ್ಟು ಆತಂಕವನ್ನು ಹೆಚ್ಚಿಸಿದೆ.
ಪ್ರಾಣಿಗಳಲ್ಲಿ ರಕ್ತ ಹೀರುವ ಕೀಟಗಳ ಮೂಲಕ ಈ ವೈರಾಣುಗಳು ಮನುಷ್ಯರಿಗೂ ಹರಡುತ್ತಿದೆ. ಜ್ವರದಿಂದ ಬಳಲುವ ಮನುಷ್ಯರು ಬಳಿಕ ರಕ್ತಸ್ರಾವದಿಂದ ಸಾಯುತ್ತಾರೆ. ಇದರಿಂದ ಅಲರ್ಟ್ ಆಗಿರುವ ಇರಾಕ್ನ ಆರೋಗ್ಯ ಇಲಾಖೆಯು ಅಲ್ಲಿನ ಹಳ್ಳಿ ಹಳ್ಳಿಗೆ ತೆರಳಿ ಆರೋಗ್ಯ ಕಾರ್ಯಕರ್ತರ ಮೂಲಕ ಪ್ರಾಣಿಗಳಿಗೆ ಕೀಟನಾಶಕಗಳನ್ನು ಸಿಂಪಡಣೆ ಮಾಡಲಾಗುತ್ತಿದೆ.
ಈ ಜ್ವರಕ್ಕೆ ಕ್ರಿಮಿಯನ್ ಕಾಂಗೋ ಹೆಮೋರೇಜ್ ಎಂದು ಕರೆಯಲಾಗುತ್ತದೆ. ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಮಾಹಿತಿ ನೀಡಿದೆ. ಈ ಕಾಯಿಲೆ ಶುರುವಾದರೆ ಮನುಷ್ಯನಿಗೆ ಮೂಗಿನಲ್ಲಿ ರಕ್ತ ಸ್ರಾವ ಆರಂಭವಾಗುತ್ತದೆ. ಅತ್ಯಂತ ವೇಗವಾಗಿ ಹರಡುವ ಈ ಕಾಯಿಲೆಯು ದೇಹದ ಬಾಹ್ಯ ಹಾಗೂ ಒಳಗೆ ವಿಪರೀತ ರಕ್ತಸ್ರಾವವನ್ನು ಉಂಟು ಮಾಡುತ್ತದೆ. ಈ ಕಾಯಿಲೆಗೆ ನಿರ್ದಿಷ್ಟವಾದ ಲಸಿಕೆ ಅಥವಾ ಔಷಧಿಗಳು ಲಭ್ಯವಿರದ ಹಿನ್ನೆಲೆಯಲ್ಲಿ ಜನರು ಈ ಕಾಯಿಲೆಗೆ ಸಾಯುತ್ತಾರೆ. ಐವರಲ್ಲಿ ಇಬ್ಬರು ಸೋಂಕಿತರು ಸಾಯುತ್ತಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಸೋಂಕು ತಗುಲಿದ ಉಣ್ಣೆಯು ಪ್ರಾಣಿಗಳಿಗೆ ಕಡಿದಾಗ ವೈರಸ್ ಪ್ರಾಣಿಗಳಿಗೂ ಹರಡುತ್ತದೆ. ಬಳಿಕ ಈ ಉಣ್ಣೆ ಅಥವಾ ಸೋಂಕು ತಗುಲಿದ ಪ್ರಾಣಿಗಳಿಂದ ಈ ವೈರಾಣು ಮನುಷ್ಯನ ದೇಹವನ್ನು ಪ್ರವೇಶಿಸುತ್ತದೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 1979ರಲ್ಲಿ ಇರಾಕ್ನಲ್ಲಿ ಈ ವೈರಸ್ ಮೊಟ್ಟ ಮೊದಲ ಬಾರಿಗೆ ಪತ್ತೆಯಾಗಿತ್ತು. ಕಳೆದ ವರ್ಷ ಡಿ ಖಾರ್ನಲ್ಲಿ 16 ಪ್ರಕರಣಗಳು ಹಾಗೂ 7 ಸಾವುಗಳು ವರದಿಯಾಗಿತ್ತು. ಈ ವರ್ಷ ಎಲ್ಲಕ್ಕಿಂತ ಹೆಚ್ಚು ಅಂದರೆ 43 ಪ್ರಕರಣ ಹಾಗೂ ಎಂಟು ಸಾವು ವರದಿಯಾಗಿದೆ.
ಇದನ್ನು ಓದಿ : temple in the malali mosque : ಮಳಲಿ ಮಸೀದಿಯಲ್ಲಿತ್ತು ಹಿಂದೂ ಧಾರ್ಮಿಕ ಸ್ಥಳ : ತಾಂಬೂಲ ಪ್ರಶ್ನೆಯಲ್ಲಿ ಉತ್ತರ
ಇದನ್ನೂ ಓದಿ : acid attack victim : ಆ್ಯಸಿಡ್ ಸಂತ್ರಸ್ತೆಗೆ 5ನೇ ಶಸ್ತ್ರಚಿಕಿತ್ಸೆ: ಅನಾರೋಗ್ಯಕ್ಕೊಳಗಾದ ಯುವತಿ ಐಸಿಯುಗೆ ಶಿಫ್ಟ್
deadly nose bleed fever by blood sucking ticks shocks iraq