hijab controversy : ಹಿಜಾಬ್​ ವಿವಾದ : ಜಿಲ್ಲಾಧಿಕಾರಿಗಳ ಭೇಟಿಗಾಗಿ ಕಚೇರಿಗೆ ತೆರಳಿದ ಮುಸ್ಲಿಂ ವಿದ್ಯಾರ್ಥಿನಿಯರು

ಮಂಗಳೂರು : hijab controversy : ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಾಲೇಜು ಸಮವಸ್ತ್ರ ವಿವಾದ ಮತ್ತೆ ತಾರಕಕ್ಕೇರಿದೆ ವಿಶ್ವ ವಿದ್ಯಾಲಯದಲ್ಲಿ ಸಮವಸ್ತ್ರ ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆಯಾದರೂ ಕೆಲವು ವಿದ್ಯಾರ್ಥಿನಿಯರು ಹಿಜಾಬ್​ ಧರಿಸಿ ತರಗತಿಗೆ ಹಾಜರಾಗಲು ಮುಂದಾದ ಅವರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಇಂದು ಆ ಮುಸ್ಲಿಂ ವಿದ್ಯಾರ್ಥಿನಿಯರು ಈ ವಿಚಾರವಾಗಿ ಚರ್ಚೆಯನ್ನು ನಡೆಸಲು ಕಾಲೇಜಿನ ಪ್ರಾಂಶುಪಾಲೆ ಡಾ. ಅನುಸೂಯಾ ರೈ ಹಾಗೂ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದಾರೆ.


ಕಾಲೇಜಿಗೆ ಒಮ್ಮೆ ಪ್ರವೇಶ ಪಡೆದ ಬಳಿಕ ಮುಸ್ಲಿಂ ವಿದ್ಯಾರ್ಥಿನಿಯರು ವಿಶ್ರಾಂತಿ ಕೊಠಡಿಗೆ ತೆರಳಿ ಹಿಜಾಬ್​ ಕಳಚಿಟ್ಟು ಬಳಿಕ ತರಗತಿಯ ಒಳಗೆ ಪ್ರವೇಶಿಸಬೇಕು ಎನ್ನುವುದು ವಿವಿ ಕಾಲೇಜಿಗೆ ಸೂಚನೆಯಾಗಿದೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರು ಇದೀಗ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದು ಚರ್ಚೆಗೆ ಮುಂದಾಗಿದ್ದಾರೆ.


ಈ ವಿಚಾರವಾಗಿ ಮುಸ್ಲಿಂ ವಿದ್ಯಾರ್ಥಿನಿಯರು ಈ ಹಿ.ದೆ ಕೂಡ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಲು ಯತ್ನಿಸಿದ್ದರು. ಆದರೆ ಜಿಲ್ಲಾಧಿಕಾರಿಗಳು ಸೋಮವಾರ ಈ ಬಗ್ಗೆ ಮಾತನಾಡುತ್ತೇನೆ ಎಂದಿದ್ದರು. ಅದರಂತೆ ಇಂದು ಮುಸ್ಲಿಂ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿ ಕಚೇರಿಯ ಎದುರು ಜಿಲ್ಲಾಧಿಕಾರಿಗಳ ಭೇಟಿಗಾಗಿ ಕಾಯುತ್ತಿದ್ದಾರೆ.

temple in the malali mosque : ಮಳಲಿ ಮಸೀದಿಯಲ್ಲಿತ್ತು ಹಿಂದೂ ಧಾರ್ಮಿಕ ಸ್ಥಳ : ತಾಂಬೂಲ ಪ್ರಶ್ನೆಯಲ್ಲಿ ಉತ್ತರ

ಮಂಗಳೂರು : temple in the malali mosque : ಮಂಗಳೂರು ಹೊರವಲಯದಲ್ಲಿರುವ ಮಳಲಿ ಮಸೀದಿ ವಿವಾದ ಸಂಬಂಧ ಹಿಂದೂ ಪರ ಸಂಘಟನೆಗಳು ನಡೆಸಿರುವ ತಾಂಬೂಲ ಪ್ರಶ್ನೆಯಲ್ಲಿ ಕೇರಳದ ಖ್ಯಾತ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್​​ ತಾಂಬೂಲಗಳನ್ನು ನೋಡಿ ಈ ಮಸೀದಿ ಜಾಗದಲ್ಲಿ ಹಿಂದೂ ದೈವಿ ಶಕ್ತಿಯಿತ್ತು ಎಂಬ ಉತ್ತರವನ್ನು ನೀಡಿದ್ದಾರೆ. ತಾಂಬೂಲಗಳನ್ನು ಲೆಕ್ಕ ಮಾಡಿ ಉತ್ತರ ನೀಡಿದ ತಂತ್ರಿಗಳು ಈ ಹಿಂದೆ ಈ ಸ್ಥಳದಲ್ಲಿ ಯಾವುದೋ ಗುರುಮಠವಿತ್ತು ಎಂಬ ಉತ್ತರವನ್ನು ನೀಡಿದ್ದಾರೆ.

ಶ್ರೀರಾಮಾಂಜನೇಯ ದೇಗುಲದಲ್ಲಿ ಆಯೋಜಿಸಲಾಗಿದ್ದ ತಾಂಬೂಲ ಪ್ರಶ್ನೆ ಕಾರ್ಯಕ್ರಮದಲ್ಲಿ ಭಜರಂಗದಳ ಮುಖಂಡ ಶರಣ್​ ಪಂಪ್​ವೆಲ್​ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಮೊದಲು ಪ್ರಾರ್ಥನೆ ಮೂಲಕ ತಾಂಬೂಲ ಹಸ್ತಾಂತರ ಮಾಡಿ ಬಳಿಕ ಜ್ಯೋತಿಷಿಗಳ ಬಳಿ ತಾಂಬೂಲದಲ್ಲಿ ತಿಳಿದುಬಂದ ವಿಚಾರಗಳ ಬಗ್ಗೆ ಮಾಹಿತಿ ಪಡೆಯಲಾಯ್ತು.

ಒಂದೊಂದೇ ತಾಂಬೂಲಗಳ ವಿಶೇಷಣಗಳನ್ನು ಉಲ್ಲೇಖಿಸುತ್ತಾ ಹೋದ ಜ್ಯೋತಿಷಿ ಪೊದುವಾಳ್‌ ಗೋಪಾಲಕೃಷ್ಣ ಪಣಿಕ್ಕರ್​, ವಿವಾದಿತ ಸ್ಥಳದ ಉತ್ತರ ಧಿಕ್ಕಿನಲ್ಲಿ ಹಿಂದೆ ದೇವಸ್ಥಾನವಿರುವ ಕುರುಹು ಪತ್ತೆಯಾಗಿದೆ. ಈ ಮಸೀದಿ ಜಾಗದಲ್ಲಿ (temple in the malali mosque)ಹಿಂದೆ ಶಿವ ಸಾನಿಧ್ಯವಿತ್ತು. ಆದರೆ ವೈಷ್ಣವರು ಹಾಗೂ ಶೈವರ ನಡುವಿನ ಕಲಹದಿಂದ ಈ ದೇವಾಲಯ ನಾಶವಾಗಿರಬಹುದು. ಇಲ್ಲಿಂದ ದೇವರನ್ನು ತೆಗೆದುಕೊಂಡು ಹೋಗಿ ಬೇರೆಯ ಸ್ಥಳದಲ್ಲಿ ಪೂಜೆ ಸಲ್ಲಿಸಲಾಗುತ್ತಿದೆ. ಅಲ್ಲಿ ನಡೆದ ಪೂಜೆಯಿಂದ ಇಲ್ಲಿ ತನ್ನ ಸಾನಿಧ್ಯವನ್ನು ತೋರಿಸಿದೆ. ಪೂರ್ವದಲ್ಲಿ ಇದೊಂದು ಮಠದ ರೂಪದಲ್ಲಿತ್ತು. ನಾವು ಪ್ರಾರ್ಥಿಸಿ ಇಟ್ಟ ರಾಶಿಯಲ್ಲಿ ದೇವರಿದ್ದಾರೆ. ಮಳಲಿ ಮಸೀದಿಯಲ್ಲಿ ದೇವರು ಇರುವುದು ನಿಜ ಎಂದು ಹೇಳಿದ್ದಾರೆ.

ಈ ಸಾನಿಧ್ಯ ಈಗ ಪುನರ್​‌ ಪ್ರತಿಷ್ಠಾಪನೆಯಾಗಲೇಬೇಕು. ಇದಕ್ಕೆ ಈಗ ಈ ಸ್ಥಳ ಯಾರ ಬಳಿ ಇದೆ ಅವರು ಇದಕ್ಕೆ ಸಹಕಾರ ನೀಡಬೇಕು. ಇದು ಆ ಸ್ಥಳದಲ್ಲಿ ಇರುವವರ ಜವಾಬ್ದಾರಿಯಾಗಿದೆ. ಈ ಸ್ಥಳದಲ್ಲಿ ಇದೀಗ ದೈವಾನುಗ್ರಹ ಬಂದಿದೆ. ಆ ಸ್ಥಳದಲ್ಲಿ ಪುನರ್‌ ಪ್ರತಿಷ್ಠೆ ಕಾರ್ಯ ನಡೆಯದೇ ಇದ್ರೆ ಊರಿಗೆ ಅಪಾಯವಿದೆ ಎಂದಿದ್ದಾರೆ. ಈ ಸ್ಥಾನ ಹಿಂದೂಗಳಿಗೆ ಸಿಗುವ ಯೋಗವಿದೆ. ಈ ವಿಚಾರದಲ್ಲಿ ಎಲ್ಲರೂ ಸಮಾಧಾನದಿಂದ ಮುಂದುವರಿಯಬೇಕು. ಇಲ್ಲವಾದಲ್ಲಿ ಇಡೀ ಊರಿಗೆ ಕೆಡುಕು ಉಂಟಾಗಲಿದೆ. ಹಿಂದೂಗಳ ಪ್ರಯತ್ನಕ್ಕೆ ಖಂಡಿತವಾಗಿಯೂ ಫಲ ಸಿಗಲಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ : Punjabi Singer Sidhu Moosewala : ಪಂಜಾಬಿನ ಗಾಯಕ ಸಿಧು ಮೂಸೆವಾಲಾಗೆ ಗುಂಡಿಕ್ಕಿ ಹತ್ಯೆ!

ಇದನ್ನೂ ಓದಿ : Aryan Khan : ಪದವಿ ಓದುವಾಗಲೇ ಗಾಂಜಾ ಸೇವಿಸುತ್ತಿದ್ದೇ : ಆರ್ಯನ್ ಖಾನ್ ತಪ್ಪೊಪ್ಪಿಗೆ

hijab controversy of mangalore vv college

Comments are closed.