Earthquake : ಸೆಂಟ್ರಲ್ ಮೆಕ್ಸಿಕೋದ ಕರಾವಳಿಯಲ್ಲಿ 6.3 ತೀವ್ರತೆಯ ಭೂಕಂಪ

ನವದೆಹಲಿ: Earthquake : ಸೆಂಟ್ರಲ್ ಮೆಕ್ಸಿಕೋದ ಕರಾವಳಿಯಲ್ಲಿ ಭಾನುವಾರ ರಾತ್ರಿ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿಯ ಪ್ರಕಾರ 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದಿದೆ. ಭೂಕಂಪವು ಸರಿಸುಮಾರು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದ್ದು, ಭಾನುವಾರ ರಾತ್ರಿ ಸುಮಾರು 2:00 ಗಂಟೆಗೆ (02:00:20 IST) ಸಂಭವಿಸಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಡಿರುವ ಟ್ವೀಟ್‌ನಲ್ಲಿ, ಜೂನ್‌ ೧೯ರಂದು ರಾತ್ರಿ ೨ ಗಂಟೆಗೆ ಭೂ ಕಂಪ ಸಂಭವಿಸಿದ್ದು, ಲ್ಯಾಟ್: 22.87 & ಉದ್ದ: -108.82, ಆಳ: 10 ಕಿಮೀ, ಸ್ಥಳ: ಆಫ್ ಕೋಸ್ಟ್ ಆಫ್ ಸೆಂಟ್ರಲ್, ಮೆಕ್ಸಿಕೋ ಎಂದು ಹೇಳಿದೆ. ಬಾರೀ ಭೂಕಂಪ ಸಂಭವಿಸಿರುವ ಹಿನ್ನೆಲೆಯಲ್ಲಿ ಸುನಾಮಿ ಉಂಟು ಮಾಡುವ ಯಾವುದೇ ಸಾಧ್ಯತೆಗಳಿಲ್ಲ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ಮಾಹಿತಿಯನ್ನು ನೀಡಿದೆ.

ಮೆಕ್ಸಿಕೋದಲ್ಲಿ ನಡೆದಿರುವ ಭೂಕಂಪದಿಂದಾಗಿ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಯಾವುದೇ ಹಾನಿಯು ಉಂಟಾಗಿಲ್ ಮೆಕ್ಸಿಕೋದಲ್ಲಿ ಭೂಕಂಪಗಳು ಸಾಮಾನ್ಯವಾಗಿದೆ. ಭೂಕಂಪ ಮಾತ್ರವಲ್ಲದೇ ಸಕ್ರೀಯ ಜ್ವಾಲಮುಖಿಗಳ ನೆಲೆಯಾಗಿದೆ. 2022ರ ಸಪ್ಟೆಂಬರ್‌ ತಿಂಗಳಿನಲ್ಲಿ 7.6ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕೊಲಿಮಾ ಮತ್ತು ಮಯಕೋವಾಕನ್‌ ರಾಜ್ಯಗಳಲ್ಲಿ ಸಾಕಷ್ಟು ಅನಾಹುತ ಸೃಷ್ಟಿಸಿತ್ತು. ಅಲ್ಲದೇ ಇದು ಅಮೇರಿಕಾದ ಮೇಲೆ ಪರಿಣಾಮ ಬೀರಿತ್ತು.

ಇದನ್ನೂ ಓದಿ : Sowjanya Murder case : ಸೌಜನ್ಯ ಕೊಲೆ ಪ್ರಕರಣ : 1 ರೂ. ಹಣ ಪಡೆಯದೆ ನಿರಪರಾಧಿಗೆ ನ್ಯಾಯ ಕೊಡಿಸಿದ ಯುವ ನ್ಯಾಯವಾದಿಗಳು

ಇದನ್ನೂ ಓದಿ : Murder Case : ಲಂಡನ್‌ನಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಚಾಕುವಿನಿಂದ ಇರಿದು ಹತ್ಯೆ

Earthquake 0f 6.3 Magnitude Hits central Mexico

Comments are closed.