Earthquake in Indonesia : ಇಂಡೋನೇಷ್ಯಾದಲ್ಲಿ ಭೂಕಂಪ : ಸುನಾಮಿ ಎಚ್ಚರಿಕೆ

ಇಂಡೋನೇಷ್ಯಾ : (Earthquake in Indonesia) ಇಲ್ಲಿನ ಪೂರ್ವ ಪಪುವಾ ಮತ್ತು ಆಸ್ಟ್ರೇಲಿಯಾದ ನ್ಯೂ ಗಿನಿಯಾ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.6ರಷ್ಟಿತ್ತು ಭೂಕಂಪದ ತೀವ್ರತೆ ದಾಖಲಾಗಿದೆ. ಭೂಕಂಪದ ಬೆನ್ನಲ್ಲೇ ಯುಎಸ್ ಜಿಯೋಲಾಜಿಕಲ್ ಸರ್ವೆ ಸುನಾಮಿ ಎಚ್ಚರಿಕೆ ನೀಡಿದೆ. ಕೈನಾಂತು ಪಟ್ಟಣದಿಂದ 67 ಕಿ.ಮೀ ದೂರದಲ್ಲಿ ಭೂಮಿಯಲ್ಲಿ 61 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಸುಮಾರು 1,000 ಕಿ.ಮೀ ಸುತ್ತಳತೆಯಲ್ಲಿ ಸುನಾಮಿ (Tsunami Warning Announcement) ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭೂವಿಜ್ಞಾನ ಇಲಾಖೆ ಎಚ್ಚರಿಕೆ ನೀಡಿದೆ.

ಇಂಡೋನೇಷ್ಯಾದ ಪಶ್ಚಿಮ ಪಪುವಾ ಪ್ರಾಂತ್ಯದಲ್ಲಿ ಸೆಪ್ಟೆಂಬರ್ 10ರಂದು 6.2 ಮತ್ತು 5.5 ರ ತೀವ್ರತೆಯ ಎರಡು ಭೂಕಂಪ ಸಂಭವಿಸಿರುವುದು ವರದಿಯಾಗಿವೆ. ಭೂಕಂಪದ ಕೇಂದ್ರಬಿಂದು ಭೂಮಿಯಿಂದ 16 ಕಿ.ಮೀ ಆಳದಲ್ಲಿದೆ. ನಿನ್ನೆಯ ಭೂಕಂಪದಿಂದ ಯಾವುದೇ ಸುನಾಮಿ ಭೀತಿ ಇಲ್ಲ ಎಂದು ಇಂಡೋನೇಷ್ಯಾದ ಹವಾಮಾನ ಇಲಾಖೆ ತಿಳಿಸಿದೆ. ಆದರೆ ಆಸ್ತಿ ಪಾಸ್ತಿ ಹಾನಿ ಮತ್ತು ಪ್ರಾಣ ಹಾನಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇಂಡೋನೇಷ್ಯಾದ ರಾಜಧಾನಿ ಜಕಾರ್ತದಿಂದ 150 ಕಿ.ಮೀ. ದೂರದ ಸಾಗರದಲ್ಲಿ 42 ಕಿ.ಮೀ. ಇಂಡೋನೇಷ್ಯಾದ ವಿಪತ್ತು ನಿರ್ವಹಣಾ ಸಂಸ್ಥೆ ಸುನಾಮಿ ಸಂಭವಿಸಬಹುದು ಎಂದು ಎಚ್ಚರಿಸಿದೆ. ಇದಾದ ಕೆಲವೇ ದಿನಗಳಲ್ಲಿ ಭೂಕಂಪದ ತೀವ್ರತೆಯನ್ನು 6.8ಕ್ಕೆ ಇಳಿಸಲಾಯಿತು. ಆದರೆ, ಗಾಬರಿಗೊಂಡ ಜನರು ಕಟ್ಟಡದಿಂದ ಹೊರಗೆ ಓಡಿ ಬಂದಿದ್ದಾರೆ.

ಇಂಡೋನೇಷ್ಯಾದಲ್ಲಿ ಆಗಾಗ ಭೂಕಂಪಗಳು ವರದಿಯಾಗುತ್ತಿವೆ. ಸುಮಾರು 2.70 ಕೋಟಿ ಜನಸಂಖ್ಯೆಯನ್ನು ಹೊಂದಿರುವ ದೇಶದಲ್ಲಿ ಜ್ವಾಲಾಮುಖಿಗಳು ಮತ್ತು ಸುನಾಮಿ ವರದಿಯಾಗುತ್ತಲೇ ಇದೆ. ಇನ್ನು ಇಂಡೋನೇಷ್ಯಾ ಭೌಗೋಳಿಕವಾಗಿ ‘ಪೆಸಿಫಿಕ್ ರಿಂಗ್ ಆಫ್ ಫೈರ್’ ವಲಯದೊಳಗೆ ಬರುತ್ತದೆ. ಇಲ್ಲಿ ಉಪಮೇಲ್ಮೈಯಲ್ಲಿರುವ ವಿವಿಧ ಟೆಕ್ಟೋನಿಕ್ ಪ್ಲೇಟ್‌ಗಳು ಸಂಧಿಸುತ್ತವೆ. ಇದು ಭೂಕಂಪಕ್ಕೆ ಕಾರಣವಾಗುತ್ತದೆ. ಇಂಡೋನೇಷ್ಯಾದ ಪಪುವಾ ಪ್ರದೇಶವು ವಿರಳ ಜನಸಂಖ್ಯೆಯನ್ನು ಹೊಂದಿದೆ. ಆದ್ದರಿಂದ ಹೆಚ್ಚಿನ ಸಾವುನೋವುಗಳು, ಅಪಾಯ ವರದಿಯಾಗಿಲ್ಲ.

ಭೂಕಂಪ ಹಾಗೂ ಸುನಾಮಿ ಎಚ್ಚರಿಕೆಯ ಬೆನ್ನಲ್ಲೇ ಇಂಡೋನೇಷ್ಯಾದ ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇಂಡೋನೇಷ್ಯಾ ದ ವಿಪತ್ತು ನಿರ್ವಹಣಾ ಸಂಸ್ಥೆ ಈ ಭೂಕಂಪದ ತೀವ್ರತೆಯು ಸುನಾಮಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಹೇಳಿದೆ.

ಇದನ್ನೂ ಓದಿ : ಗಣೇಶ ವಿಸರ್ಜನೆಯ ವೇಳೆ ವಿದ್ಯಾರ್ಥಿಯ ಬರ್ಬರ ಕೊಲೆ : 4 ವಿದ್ಯಾರ್ಥಿಗಳು ಅರೆಸ್ಟ್‌

ಇದನ್ನೂ ಓದಿ : Heavy Rainfall alert : 4 ದಿನ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಭಾರೀ ಮಳೆ: Yellow Alert ಘೋಷಣೆ

Earthquake in Indonesia: Tsunami Warning Announcement

Comments are closed.