ಸಂಭವನೀಯ ಕೊರೊನಾ ಮೂರನೇ ಅಲೆಗೆ ಕಾರಣವಾಗಬಹುದು ಎನ್ನಲಾದ ಒಮಿಕ್ರಾನ್ ರೂಪಾಂತರಿಯಿಂದ (Omicron Death ) ಮೊದಲ ಸಾವು ಉಂಟಾಗಿದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ( PM Boris Johnson )ಹೇಳಿದ್ದಾರೆ. ಓಮಿಕ್ರಾನ್ ರೂಪಾಂತರಿಯಿಂದ ಆಸ್ಪತ್ರೆಯಲ್ಲಿ ದಾಖಲಾತಿ ಹೆಚ್ಚಾಗುತ್ತಿದೆ ಹೀಗಾಗಿ ಜನರು ಬೂಸ್ಟರ್ ಶಾಟ್ ಪಡೆಯಬೇಕು ಎಂದು ಮನವಿ ಮಾಡಿದರು.
ಒಮಿಕ್ರಾನ್ನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ . ದುರಾದೃಷ್ಟಕರ ಎಂಬಂತೆ ಓರ್ವ ಓಮಿಕ್ರಾನ್ ಸೋಂಕಿತರು ಸಾವನ್ನಪ್ಪಿದ್ದಾರೆ. ನಾವು ಓಮಿಕ್ರಾನ್ ಗಂಭೀರತೆಯನ್ನು ಅರಿಯಬೇಕಿದೆ. ಹೀಗಾಗಿ ನಾವು ಬೂಸ್ಟರ್ ಡೋಸ್ನ್ನು ಪಡೆಯಲೇಬೇಕು ಎಂದು ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಲಂಡನ್ನಲ್ಲಿರುವ ಪ್ರಸ್ತುತ ಕೊರೊನಾ ಪ್ರಕರಣಗಳಲ್ಲಿ 40 ಪ್ರತಿಶತ ಓಮಿಕ್ರಾನ್ ಪ್ರಕರಣವೇ ಆಗಿದೆ.ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಬ್ರಿಟನ್ನಲ್ಲಿ ಅತ್ಯಂತ ವೇಗವಾಗಿ ಓಮಿಕ್ರಾನ್ ಹರಡುತ್ತಿದೆ. ಇಂಗ್ಲೆಂಡ್ನಲ್ಲಿರುವ ಎಲ್ಲಾ ವಯಸ್ಕರಿಗೆ ಡಿಸೆಂಬರ್ ಅಂತ್ಯದ ವೇಳೆಗೆ ಬೂಸ್ಟರ್ ಡೋಸ್ ನೀಡುವ ಗುರಿಯನ್ನು ಹೊಂದಲಾಗಿದೆ. ಓಮಿಕ್ರಾನ್ ಅತ್ಯಂತ ವೇಗವಾಗಿ ಹರಡುವ ರೂಪಾಂತರಿಯಾಗಿದ್ದು ಕೇವಲ 2 ಡೋಸ್ ಲಸಿಕೆಯು ಓಮಿಕ್ರಾನ್ ತಡೆಗಟ್ಟಲು ಸಹಕಾರಿಯಾಗದು ಎಂದು ಹೇಳಿದ್ದಾರೆ.
ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಸೆಕ್ಷನ್ 144 ಜಾರಿ
ಮುಂಬೈ : ದೇಶದಲ್ಲಿ ಕೊರೊನಾ ಒಮಿಕ್ರಾನ್ ರೂಪಾಂತರಿ (Omicron threat) ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಆತಂಕಕಾರಿ ವಿಚಾರವಾಗಿದೆ. ಸಂಭವನೀಯ ಕೊರೊನಾ ಮೂರನೇ ಅಲೆ ಸಮೀಪಿಸುತ್ತಿದೆ ಎಂಬ ಆತಂಕ ಹೆಚ್ಚಾಗುತ್ತಿದ್ದು ವಿವಿಧ ರಾಜ್ಯಗಳು ಒಮಿಕ್ರಾನ್ ಭೂತವನ್ನು ಎದುರಿಸಲು ನಾನಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಇದೀಗ ಮುಂಬೈನಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ
ಮಹಾರಾಷ್ಟ್ರದಲ್ಲಿ ಪ್ರಸ್ತುತ ಒಟ್ಟು 17 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಇಡೀ ದೇಶದಲ್ಲಿಯೇ ಅತೀ ಹೆಚ್ಚು ಒಮಿಕ್ರಾನ್ ಪ್ರಕರಣ ಹೊಂದಿರುವ ರಾಜ್ಯ ಎನಿಸಿದೆ. ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಇಂದು ಹಾಗೂ ನಾಳೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಒಮಿಕ್ರಾನ್ ಮತ್ತಷ್ಟು ಹರಡದಂತೆ ತಡೆಯುವ ಸಲುವಾಗಿ ರ್ಯಾಲಿಗಳು, ಮೆರವಣಿಗೆ ಹಾಗೂ ವಾಹನಗಳ ಸಂಚಾರ ಸೇರಿದಂತೆ ಜನದಟ್ಟಣೆಗೆ ಕಾರಣವಾಗಬಲ್ಲ ಎಲ್ಲಾ ಕಾರ್ಯಕ್ರಮ ಗಳಿಗೆ ಮುಂಬೈನಲ್ಲಿ ನಿಷೇಧ ಹೇರಲಾಗಿದೆ. ಈ ಆದೇಶದ ವಿರುದ್ಧ ನಡೆದುಕೊಂಡವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಬಿಎಂಸಿ ಹೇಳಿದೆ. ಎರಡು ಕಾರಣಗಳಿಗಾಗಿ ಮುಂಬೈನಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.
ಎಐಎಂಐಎಂ ಪಕ್ಷವು ಮುಂಬೈಲ್ಲಿ ರ್ಯಾಲಿಯನ್ನು ಆಯೋಜಿಸಿದ್ದು ಈಗಾಗಲೇ ಸಾಕಷ್ಟು ಕಾರ್ಯಕರ್ತರು ಮುಂಬೈ ಬಂದು ತಲುಪಿದ್ದಾರೆ ಇತ್ತ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಈ ರ್ಯಾಲಿಯಲ್ಲಿ ಭಾಗವಹಿಸುವ ಎಲ್ಲಾ ಸಾಧ್ಯತೆ ಇದೆ. ಆದರೆ ಒಮಿಕ್ರಾನ್ ಗಮನದಲ್ಲಿಟ್ಟುಕೊಂಡು ಮುಂಬೈ ಪೊಲೀಸರು ಅನುಮತಿಯನ್ನು ನೀಡಿಲ್ಲ. ಇದು ನಿಷೇಧಾಜ್ಞೆಯನ್ನು ಜಾರಿಗೆ ತರಲು ಮೊದಲ ಕಾರಣವಾಗಿದ್ದರೆ. ಸಂಜಯ್ ರಾವತ್ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಆಯೋಜಿಸಿರುವ ಪ್ರತಿಭಟನೆಯನ್ನು ತಪ್ಪಿಸುವುದು 2ನೇ ಕಾರಣವಾಗಿದೆ.
ಇದನ್ನು ಓದಿ: workplace accident : ವರ್ಕ್ ಫ್ರಮ್ ಹೋಮ್ನಲ್ಲಿದ್ದರೂ ಉದ್ಯೋಗಿಯ ಜವಾಬ್ದಾರಿ ಕಂಪನಿಯದ್ದೇ : ಕೋರ್ಟ್ ಮಹತ್ವದ ಆದೇಶ
ಇದನ್ನೂ ಓದಿ: World first digital country Dubai : ವಿಶ್ವದ ಮೊದಲ ಸಂಪೂರ್ಣ ಡಿಜಿಟಲ್ ದೇಶವಾದ ದುಬೈ
first Omicron Death Covid-19 Variant Recorded in UK, Informs PM Boris Johnson