Google Chrome Hack : ಗೂಗಲ್ ಕ್ರೋಮ್‌ನಲ್ಲಿ ನೀವು ಸರ್ಚ್ ಮಾಡುವ ವಿಷಯ ಹ್ಯಾಕ್ ಆಗದಿರಲು ಹೀಗೆ ಮಾಡಿ

ನೀವು ಕಂಪ್ಯೂಟರ್ ಅಥವಾ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಏನನ್ನಾದರೂ ಗೂಗಲ್ ಸರ್ಚ್ (Google Search) ಮಾಡಲು ಯಾವ  ಬ್ರೌಸರ್ ಬಳಸುತ್ತೀರಿ? ನೀವೇನಾದರೂ ಗೂಗಲ್ ಕ್ರೋಮ್ (Google Chrome) ಬಳಸುತ್ತೀರಿ ಅಂತಾದರೆ ಸ್ವಲ್ಪ ಎಚ್ಚರಿಕೆ ವಹಿಸಬೇಕಾದ ಸುದ್ದಿಯೊಂದು ಸರ್ಕಾರದ ಅಧಿಕೃತ ಮೂಲಗಳಿಂದ ಹೊರಬಿದ್ದಿದೆ.  ಗೂಗಲ್ ಕ್ರೋಮ್ ಬ್ರೌಸರ್‌ನಲ್ಲಿ ಹಲವಾರು ದೋಷಗಳು (Google Chrome Hack) ಕಂಡುಬಂದಿದ್ದು ಇದರಿಂದ ಹ್ಯಾಕರ್​ಗಳು (Hacker) ನಿಮ್ಮ ಪಿಸಿ ಒಳಗಡೆ ಪ್ರವೇಶ ಪಡೆಯುವ ಸಾಧ್ಯತೆ ಇದೆ ಎಂದು CERT-In ಅಂದರೆ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಎಚ್ಚರಿಕೆ ನೀಡಿದೆ.

ಜೊತೆಗೆ ಹೀಗೆ ಎಚ್ಚರಿಕೆ ನೀಡಿದ ತಂಡವು ಭಾರತದ ಐಟಿ ಸಚಿವಾಲಯಕ್ಕೆ ಸಂಬಂಧಿಸಿದ್ದೇ  ಆಗಿದೆ ಎಂಬುದರಿಂದ ಈ ಸುದ್ದಿ  ಅತ್ಯಂತ ಮಹತ್ವ ಪಡೆದಿದೆ. ಈ ಎಚ್ಚರಿಕೆಯಲ್ಲಿ ಬಳಕೆದಾರರ ಡೇಟಾ ಅಥವಾ ಮಾಹಿತಿ ಕಳವಾಗುವ ಸಾಧ್ಯತೆ ಕೂಡ ಇದೆ. ಪಿಸಿಯಲ್ಲಿ ನಿಮಗೆ ತಿಳಿಯದಂತೆ  ವೈರಸ್ ಅನ್ನು ಸೇರಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಅಂದಹಾಗೆ ಈ ಅಪಾಯದಿಂದ ಪಾರಾಗುವ ದಾರಿಯಿಲ್ಲವೇ ಎಂದು ನೀವು ಯೋಚಿಸತೊಡಗಿದಿರೇ? ತೀರಾ ಕಳವಳ ಬೇಡ. ಇತ್ತೀಚೆಗಷ್ಟೆ ಗೂಗಲ್ ಕ್ರೋಮ್ ಬಿಡುಗಡೆಗೊಳಿಸಿರುವ ಹೊಸ ಆವೃತ್ತಿಯನ್ನು ನೀವು ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳಲ್ಲಿ ಅಳವಡಿಸಿಕೊಳ್ಳಬೇಕು. ಈ ಅಪ್‌ಡೇಟ್ ಸಾಪ್ಟ್‌ವೇರ್‌ನ್ನು ಅಪ್ಡೇಟ್ ಮಾಡಿಕೊಳ್ಳುವ ಮೂಲಕ ಸಂಭವಿಸಬಹುದಾ ಅಪಾಯದಿಂದ ಪಾರಾಗಬಹುದು ಎಂದು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಸೂಚಿಸಿದೆ.

ಇಂಟರ್‌ನೆಟ್ ಅಂದರೆ ಅಲ್ಲಿ ಖಾಸಗಿ ಮಾಹಿತಿ ಆದಷ್ಟು ಖಾಸಗಿ ಮತ್ತು ಭದ್ರವಾಗಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಬಳಕೆದಾರರ ಖಾಸಗಿ ಮಾಹಿತಿ ಸೋರಿಕೆಯಾಗುತ್ತಿರುವ ಘಟನೆಗಳು ನಡೆಯುತ್ತಿವೆ. ಹ್ಯಾಕರ್‌ಗಳ ಕೈವಾಡ ಇಂತಹ ಸಂದರ್ಭದಲ್ಲಿ ಹೆಚ್ಚಿನದಾಗಿ ನಡೆಯುತ್ತಿದೆ. ಆದರೆ ಟೆಕ್ ದೈತ್ಯ ಗೂಗಲ್‌ ರೂಪಿಸಿರುವ ಬ್ರೌಸರ್‌ ಕ್ರೋಮ್​ನಲ್ಲಿ ಇಂತಹ ದೋಷ ಈ ಹಿಂದೆಯೂ ಕೆಲವೊಮ್ಮೆ ಕಂಡುಬಂದಿದ್ದವು. ಇಂತಹ ಸಮಸ್ಯೆಗಳನ್ನು ನಿವಾರಿಸಲೆಂದೇ ಹಲವು ಬಾರಿ ಕ್ರೋಮ್ ಅಪ್‌ಡೇಟ್ ಆವೃತ್ತಿಗಳನ್ನು ಬಿಡುಗಡೆಗೊಳಿಸಿತ್ತು. ಸಾಫ್ಟ್‌ವೇರ್‌ಅನ್ನು ಅಪ್‌ಡೇಟ್ ಮಾಡಿಕೊಂಡಲ್ಲಿ ಈ ಸಮಸ್ಯೆ ಬಗೆಹರಿಯುವುದಾಗಿ ಗೂಗಲ್ ತಿಳಿಸಿತ್ತು. ಅದೇ ರೀತಿ ಈಬಾರಿಯೂ ಹೊಸ ವರ್ಶನ್‌ ಅಪ್‌ಡೇಟ್ ಮಾಡಿಕೊಂಡರೆ ಹ್ಯಾಕ್ ಆಗುವ ಸಂಭಾವ್ಯತೆ ಕಡಿಮೆಯಿದೆ ಎಂದು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಜಾಗೃತಿ ನೀಡಿದೆ.

ಇದನ್ನೂ ಓದಿ: Google Search Tricks : ಗೂಗಲ್‌ ಸರ್ಚ್‌ನಲ್ಲಿ ನಮಗೆ ಬೇಕಾದ ಮಾಹಿತಿಯನ್ನೇ ಪಡೆಯುವುದು ಹೇಗೆ? ಸರಳವಾದ 5 ವಿಧಾನಗಳು

(Google Chrome Hack Users warned by Government)

Comments are closed.