ಅಮೇರಿಕಾ : ತಿಮಿಂಗಲದ ಬಾಯಿಗೆ ತುತ್ತಾಗಿದ್ದ ವ್ಯಕ್ತಿಯೋರ್ವ ಪವಾಡ ಸದೃಶವಾಗಿ ತಿಮಿಂಗಲದ ಬಾಯಿಯಿಂದ ಹೊರ ಬಂದ ಘಟನೆ ಅಮೇರಿಕಾದ ಮಸ್ಸಾಚುಸೆಟ್ಸ್ ನಲ್ಲಿ ನಡೆದಿದೆ.
56 ವರ್ಷದ ಲ್ಯಾಬಸ್ಟರ್ ಡ್ರೈವರ್ ಆಗಿರುವ ಮೈಕಲ್ ಪ್ಯಾಕಾರ್ಡ್ ಎಂಬವರೇ ತಿಮಿಂಗಲದ ಬಾಯಿಯಿಂದ ಹೊರ ಬಂದವರು. ಸಮುದ್ರದಲ್ಲಿ ಸುಮಾರು 45 ಅಡಿ ಆಳದಲ್ಲಿ ಈಜುತ್ತಿರುವ ವೇಳೆಯಲ್ಲಿ ತಿಮಿಂಗಲವೊಂದು ಪ್ಯಾಕಾರ್ಡ್ ಮೇಲೆ ದಾಳಿ ನಡೆಸಿ ನುಂಗಿ ಹಾಕಿತ್ತು.
ಅರೆಕ್ಷಣ ಮೈಕಲ್ ಫ್ಯಾಕಾರ್ಡ್ ಭಯಗೊಂಡಿದ್ದರು. ತನ್ನ ಮೇಲೆ ಶಾರ್ಕ್ ದಾಳಿ ನಡೆಸಿರಬಹುದು ಅಂದುಕೊಂಡಿದ್ದರು. ಆದ್ರೆ ಸ್ವಲ್ಪ ಹೊತ್ತಲೇ ಶಾರ್ಕ್ ಅಲ್ಲಾ ತಿಮಿಂಗಿಲ ಅನ್ನೋದು ಅವರ ಅರಿವಿಗೆ ಬಂದಿತ್ತು. ತಿಮಿಂಗಲದ ಹೊಟ್ಟೆಯೊಳಗೆ ಸೇರುತ್ತಿದ್ದಂತೆಯೇ ಇನ್ನೇನು ತಾನು ಬದುಕೋದೇ ಇಲ್ಲಾ ಅಂತಾ ಡಿಸೈಡ್ ಮಾಡಿಕೊಂಡಿದ್ದಾರೆ.
ಆದ್ರೆ ಸ್ವಲ್ಪ ಹೊತ್ತಲೇ ತಿಮಿಂಗಲ ನೀರಿನ ಮೇಲಕ್ಕೆ ಬಂದು ಬಾಯಿ ಕಳೆದು ಉಸಿರಾಡಿದೆ. ಈ ವೇಳೆಯಲ್ಲಿ ಮೈಕಲ್ ಫ್ಯಾಕಾರ್ಡ್ ಗಾಳಿಯಲ್ಲಿ ತೇಲುತ್ತಾ ಸಮುದ್ರದ ಮೇಲ್ಬಾಗದಲ್ಲಿ ಬಿದ್ದಿದ್ದಾರೆ. ಅಲ್ಲದಿದ್ದವರು ಫ್ಯಾಕಾರ್ಡ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಫ್ಯಾಕಾರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಅವರೇ ಹೇಳುವ ಪ್ರಕಾರ ಸುಮಾರು 30 ಸೆಕೆಂಡ್ ಗಳ ಕಾಲಷ್ಟೇ ಅವರು ತಿಮಿಂಗಲದ ಬಾಯಿಯಲ್ಲಿದ್ದರು. ಅಷ್ಟೇ ಅಲ್ಲಾ ತನ್ನ ಕೈಕಾಲು ಮುರಿದು ಹೋಗಿರ ಬಹುದು ಅಂತಾ ಅಂದುಕೊಂಡಿದ್ದರು. ಆದರೆ ಅದೃಷ್ಟವಶಾತ್ ದೇಹದ ಯಾವುದೇ ಭಾಗಕ್ಕೂ ಹಾನಿಯಾಗಿಲ್ಲ. ಇದೀಗ ಮೈಕಲ್ ಫ್ಯಾಕಾರ್ಡ್ ತಮ್ಮ ಅನುಭವವನ್ನು ಎಲ್ಲರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ.