Dhoni : ಬಿಳಿ ಕುದುರೆಯ ಜೊತೆಗೆ ರೇಸ್ ಗೆ ಇಳಿದ ಧೋನಿ

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಆಟಕ್ಕೆ ಮನಸೋಲದವರೇ ಇಲ್ಲಾ. ಅದ್ರಲ್ಲೂ ಪಿಚ್ ಮೇಲೆ ರನ್ ಕದಿಯಲು ಧೋನಿ ಓಡುವ ಓಟಕ್ಕೆ ಎಲ್ಲರೂ ನಿಬ್ಬೆರಗಾಗುತ್ತಾರೆ. ಇದೀಗ ಧೋನಿ ಬಿಳಿ ಕುದುರೆಯ ಜೊತೆಗೆ ರೇಸ್ ಗೆ ಇಳಿದಿದ್ದಾರೆ.

ಟೀಂ ಇಂಡಿಯಾ ನಾಯಕನಾಗಿ ಏಕದಿನ ಹಾಗೂ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಮಹೇಂದ್ರ ಸಿಂಗ್ ಧೋನಿ ಕಳೆದ ವರ್ಷವಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಣೆ ಮಾಡಿದ್ದರು. ವಿಕೆಟ್ ಹಿಂದೆ ಧೋನಿ ಮಾಡುವ ಮೋಡಿ, ಹೆಲಿಕಾಪ್ಟರ್ ಶಾಟ್ ಮೂಲಕ ಪ್ರೇಕ್ಷಕರನ್ನು ರಂಚಿಸುವ ಧೋನಿ, ಚಾಣಾಕ್ಷತೆಯಿಂದ ಅದೆಷ್ಟೋ ಪಂದ್ಯಗಳನ್ನು ಗೆಲ್ಲಿಸುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದಾರೆ. ಹೀಗಾಗಿಯೇ ಧೋನಿ ಅಂದ್ರೆನೆ ಎಲ್ಲರಿಗೂ ಅಚ್ಚುಮೆಚ್ಚು.

ಐಪಿಎಲ್ ಪಂದ್ಯಗಳು ಅರ್ಧಕ್ಕೆ ಸ್ಥಗಿತವಾದ ಹಿನ್ನೆಲೆಯಲ್ಲಿ ರಾಂಚಿಯಲ್ಲಿರು ಫಾರ್ಮ್ ಹೌಸ್ ನಲ್ಲಿ ಕುಟುಂಬಸ್ಥರ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಇದೀಗ ಧೋನಿ ತಮ್ಮ ಫಾರ್ಮ್ ಹೌಸ್ ನ ಬಿಳಿಯ ಕುದುರೆಯ ಜೊತೆಗೆ ಓಡುತ್ತಿರುವ ವಿಡಿಯೋವನ್ನು ಧೋನಿ ಪತ್ನಿ ಸಾಕ್ಷಿ ಇನ್ ಸ್ಟಾ ಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಧೋನಿ ವಿಡಿಯೋ ನೋಡಿದ ಅಭಿಮಾನಿಗಳು ಪುಲ್ ಫಿದಾ ಆಗಿದ್ದಾರೆ.

Comments are closed.