(Humpback whale video viral) ಪ್ರಕೃತಿ ತುಂಬಾ ವಿಶಾಲವಾದದ್ದು, ಮತ್ತು ಅದ್ಭುತ ವಿದ್ಯಾಮಾನಗಳಿಂದ ತುಂಬಿದೆ. ಪ್ರಕೃತಿ ತನ್ನದೇ ಆದ ವಿಶೇಷತೆಗಳಿಂದ ನಮ್ಮನ್ನು ಅದರತ್ತ ಆಕರ್ಷಿಸುತ್ತದೆ. ಹಾಗೇ ಪ್ರಕೃತಿಯ ವಿಶೇಷತೆಗಳ ಸಾಲಿಗೆ ಸಾಗರಗಳು ಸೇರಿವೆ. ಸಾಗರಗಳು ಪ್ರಕೃತಿಯ ಒಂದು ಅವಿಭಾಜ್ಯ ಅಂಗವೆಂದರೆ ತಪ್ಪಾಗದು. ಆದರೆ ಪ್ರಕೃತಿಯಲ್ಲಿ ನಮಗೆ ತಿಳಿದಿರದ ಅನೇಕ ರಹಸ್ಯಗಳಿವೆ. ಪ್ರಕೃತಿಯಲ್ಲಿ ನಮಗೆ ತಿಳಿದಿರದ ಕೆಲವು ರಹಸ್ಯಗಳನ್ನು ಈಗಿನ ಅತ್ಯಾಧುನಿಕ ಸಾಧನಗಳೊಂದಿಗೆ ಬಹಿರಂಗಪಡಿಸಲು ಸಾಧ್ಯವಾಗಿದೆ.
ಇಲ್ಲಿ ಬಹಿರಂಗಪಡಿಸಲು ಹೊರಟ ರಹಸ್ಯವೇನೆಂದರೆ ಸಾಗರಗಳಲ್ಲಿ ಕಂಡು ಬರುವ ಜೀವಿಗಳು, ಅಂದರೆ ವಿವಿಧ ಜಾತಿಗಳಲ್ಲಿ ಕಂಡುಬರುವ ತಿಮಿಂಗಿಲದ ಬಗ್ಗೆ. ಸಾಮಾನ್ಯವಾಗಿ ತಿಮಿಂಗಿಲದಂತಹ ದೊಡ್ಡ ಗಾತ್ರದ ಸಸ್ತನಿಗಳು ಪೋಷಕರ ಪ್ರವೃತ್ತಿಯನ್ನು ಹೊಂದಿರುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಅದಕ್ಕೆ ವಿರುದ್ದವಾಗಿದೆ ತಿಮಿಂಗಿಲದ ಈ ರಹಸ್ಯ. ತಿಮಿಂಗಿಲಗಳು ತಮ್ಮ ಮರಿಗಳನ್ನು ಸಂಪೂರ್ಣವಾಗಿ ಪೋಷಣೆ ಮಾಡುತ್ತವೆ ಮತ್ತು ಹೆಚ್ಚಿನ ಕಾಳಜಿಯಿಂದ ಅವುಗಳನ್ನು ನೋಡಿಕೊಳ್ಳುತ್ತವೆ ಎಂಬುದಕ್ಕೆ ಈ ಕೆಳಗೆ ನೀಡಲಾದ ವಿಡಿಯೋನೆ ಸಾಕ್ಷಿ.
ಅದೇನಪ್ಪ ಅಂತಹ ವಿಡಿಯೋ ಎಂದು ಆಲೋಚಿಸುತ್ತಿದ್ದಿರಾ? ಹಂಪ್ ಬ್ಯಾಕ್ ತಿಮಿಂಗಿಲ (Humpback whale video viral) ಮತ್ತು ಅದರ ಮರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ವನ್ನು ನೋಡಲು ಹಿತವೆನಿಸುತ್ತದೆ. ತಿಮಿಂಗಿಲಗಳು ಪೋಷಕ ಪ್ರವೃತ್ತಿಯನ್ನು ನಿರ್ವಹಣೆ ಮಾಡುವುದಿಲ್ಲ ಎಂಬ ನಮ್ಮೆಲ್ಲರ ಅಭಿಪ್ರಾಯಕ್ಕೆ ವಿರುದ್ದವಾಗಿದೆ ಈ ವಿಡಿಯೋ. ಹೌದು..! ನಾವು ಮಕ್ಕಳನ್ನು ತೋಳಿನಲ್ಲಿಟ್ಟು ಆರೈಕೆ ಮಾಡುತ್ತೇವೆ. ಹಕ್ಕಿಗಳು ತಮ್ಮ ರೆಕ್ಕೆಗಳನ್ನು ಬಳಸಿ ಮರಿಗಳನ್ನು ಆರೈಕೆ ಮಾಡುತ್ತವೆ. ಅಂತೆಲೇ ಈ ಹಂಪ್ ಬ್ಯಾಕ್ ತಿಮಿಂಗಿಲ ಅದರ ಮರಿಯನ್ನು ತನ್ನ ರೆಕ್ಕೆಯಿಂದ ಮುಚ್ಚುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ. ಅಂದರೆ ತಿಮಿಂಗಿಲದಂತಹ ಸಸ್ತನಿ ಜೀವಿಗಳು ಕೂಡ ಪೋಷಕ ಪ್ರವೃತ್ತಿಯನ್ನು ಹೊಂದಿವೆ. ಅವುಗಳು ಕೂಡ ಮರಿಗಳನ್ನು ಸಾಕುತ್ತವೆ ಎಂದು ಈ ವಿಡಿಯೋ ತೋರಿಸುತ್ತದೆ.
ಇದೀಗ ವೈರಲ್ ಆದ ತಿಮಿಂಗಿಲದ ಪೋಷಕ ಪ್ರವೃತ್ತಿಯ ವಿಡಿಯೋವನ್ನು ಫ್ಯಾಸಿನೇಟಿಂಗ್ ಎನ್ನುವವರು ತಮ್ಮ ಟ್ವಿಟರ್ ಪೇಜ್ ನಲ್ಲಿ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.” ಒಂದು ಗೂನು ತಿಮಿಂಗಿಲ ಮತ್ತು ಅದರ ಕರುವನ್ನು ಪಾಲ್ ನಿಕ್ಲೆನ್ ಅವರು ವೀಡಿಯೊದಲ್ಲಿ ಸೆರೆಹಿಡಿದಿದ್ದಾರೆ.” ಎನ್ನುವುದಾಗಿ ಶೀರ್ಷಿಕೆ ಇದೆ. ಜನವರಿ 7 ರಂದು ಬೆಳಿಗ್ಗೆ 10: 14 ಗಂಟೆಗೆ ಹಂಚಿಕೊಳ್ಳಲಾದ ಈ ವಿಡಿಯೋ ಕೇವಲ ಆರು ಗಂಟೆಗಳಲ್ಲಿ 312. 1 K ವೀಕ್ಷಣೆಯನ್ನು ಪಡೆದುಕೊಂಡಿದ್ದು, ಸಕತ್ ವೈರಲ್ ಆಗುತ್ತಿದೆ.
ಸಮುದ್ರದಲ್ಲಿ ಕಂಡುಬರುವ ಅತಿದೊಡ್ಡ ಸಸ್ತನಿಗಳ ತಾಯಿಯ ಪ್ರವೃತ್ತಿಯನ್ನು ಪ್ರತಿಬಿಂಬಿಸುವ ಅತ್ಯಂತ ಸುಂದರವಾದ ಚಿತ್ರಣಗಳಲ್ಲಿ ಇದು ಕೂಡ ಒಂದಾಗಿದೆ.
Humpback whale video viral: A beautiful image that reflects maternal instincts: Humpback whale video viral