100ಕ್ಕೂ ಅಧಿಕ ಸಿನಿಮಂದಿರಗಳಲ್ಲಿ ಕ್ರಾಂತಿ ಟ್ರೈಲರ್‌ ರಿಲೀಸ್‌

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ “ಕ್ರಾಂತಿ” ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ಇದೀಗ ಸಿನಿತಂಡ ಸಿನಿಮಾದ ಟ್ರೈಲರ್‌ ರಿಲೀಸ್‌ಗೆ (Kranti trailer release) ಭರ್ಜರಿ ತಯಾರಿ ನಡೆಸುತ್ತಿದೆ. ಸ್ವತಃ ನಟ ದರ್ಶನ್‌ ನೀಡಿದ ಮಾಹಿತಿ ಪ್ರಕಾರ, ಇಂದು (ಜನವರಿ 7) ಸಂಜೆ 7.30ಕ್ಕೆ ಡಿ ಬೀಟ್ಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ರಿಲೀಸ್‌ ಆಗಲಿದೆ. ಅಷ್ಟೇ ಅಲ್ಲದೇ ಸಿನಿಮಾದ ಟ್ರೈಲರ್‌ನ್ನು ರಾಜ್ಯದ ನೂರಕ್ಕೂ ಅಧಿಕ ಸಿನಿಮಂದಿರಗಳಲ್ಲಿ ಬಿಡುಗಡೆ ಮಾಡಲು ಸಿನಿತಂಡ ಯೋಜಿಸಿದೆ.

ರಾಜ್ಯದ ವಿತರಣೆ ವಿಭಾಗಗಳಾದ ಬೆಂಗಳೂರು, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಬೆಳಗಾವಿ, ವಿಜಾಪುರ, ದಾವಣೆಗೆರೆ, ಚಿತ್ರದುರ್ಗ, ಹೊಸಪೇಟೆ, ಬಳ್ಳಾರಿ, ಹುಬ್ಬಳ್ಳಿ, ಗದಗ, ಧಾರವಾಡ, ಬಾಂಬೆ ಕರ್ನಾಟಕ, ಮಂಗಳೂರು, ದಕ್ಷಿಣಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹೈದರಾಬಾದ್‌ ಕರ್ನಾಟಕದ ಇನ್ನು ಆಯ್ದಾ ಸಿನಿಮಂದಿರಗಳಲ್ಲಿ ಕ್ರಾಂತ ಸಿನಿಮಾದ ಟ್ರೈಲರ್‌ ಇಂದು ಸಂಜೆ 7.30ಕ್ಕೆ ರಿಲೀಸ್‌ ಆಗಲಿದೆ.

ಈ ಎಲ್ಲ ಸಿನಿಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವ ಸಿನಿಮಾಗಳ ಜೊತೆಗೆ ದರ್ಶನ್‌ ಅಭಿನಯದ ಕ್ರಾಂತಿ ಸಿನಿಮಾದ ಟ್ರೈಲರ್‌ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ. ಯೂಟ್ಯೂಬ್‌ ಹಾಗೂ ಸಿನಿಮಂದಿರಗಳನ್ನು ಬಳಸಿಕೊಂಡು ಸಿನಿಮಾ ಟ್ರೈಲರ್‌ ಹೆಚ್ಚು ಜನರಿಗೆ ತಲುಪುವಂತೆ ಮಾಡಲು ಸಿನಿತಂಡ ಈ ಯೋಜನೆ ಹಾಕಿಕೊಂಡಿದೆ. ಈಗಾಗಲೇ ಸಿನಿಮಾದ ಹಾಡುಗಳು ಬಿಡುಗಡೆ ಆಗಿದ್ದು, ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.

ಇದನ್ನೂ ಓದಿ : Kantara Free show: ಮನೆ ಮನೆ ಬಾಗಿಲಿಗೆ ಬಂತು ಕಾಂತಾರ: ಶಾಲೆ, ಗ್ರಾಮಗಳಲ್ಲಿ ನಡಿತಾ ಇದೆ ಉಚಿತ ಪ್ರದರ್ಶನ

ಇದನ್ನೂ ಓದಿ : Kannada Sahitya Sammelana : ಅಗಲಿ ವರ್ಷ ಸಂದರೂ ಬಡಜನರ ಪಾಲಿಗೆ ವರದಾನವಾದ ಅಪ್ಪು; ಹೇಗೆ ಗೊತ್ತಾ..?

ಇದನ್ನೂ ಓದಿ : Sunil Babu passed away : ಸೀತಾ ರಾಮಂ ಕಲಾ ನಿರ್ದೇಶಕ ಸುನೀಲ್ ಬಾಬು ವಿಧಿವಶ : ಸಂತಾಪ ಸೂಚಿಸಿದ ನಟ ದುಲ್ಕರ್ ಸಲ್ಮಾನ್

“ಕ್ರಾಂತಿ” ಸಿನಿಮಾವು ಜನವರಿ 26 ರಂದು ಬಿಡುಗಡೆ ಆಗಲಿದೆ. ಈ ಸಿನಿಮಾವು ಸರಕಾರಿ ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಒಳಗೊಂಡಿದೆ. ಕ್ರಾಂತಿ ಸಿನಿಮಾದಲ್ಲಿ ನಟ ದರ್ಶನ್‌ ಎನ್‌ಆರ್‌ಐ ಆಗಿ ಕಾಣಿಸಿಕೊಳ್ಳಲಿದ್ದಾರೆ. ದರ್ಶನ್‌ ಅವರಿಗೆ ಜೊತೆಯಾಗಿ ರಚಿತಾ ರಾಮ್‌ ನಟಿಸಿದ್ದಾರೆ. ನಟ ದರ್ಶನ್‌ ಅವರ ಈ ಹಿಂದಿನ ‘ಯಜಮಾನ’ ಸಿನಿಮಾ ನಿರ್ದೇಶಿಸಿದ್ದ ಹರಿಕೃಷ್ಣ ಈ ಸಿನಿಮಾವನ್ನೂ ನಿರ್ದೇಶನ ಮಾಡಿದ್ದಾರೆ. ‘ಯಜಮಾನ’ ನಿರ್ಮಾಣ ಮಾಡಿದ್ದ ಶೈಲಜಾ ನಾಗ್ ಅವರು ಈ ಸಿನಿಮಾವನ್ನೂ ನಿರ್ಮಾಣ ಮಾಡಿದ್ದಾರೆ.

Kranti trailer release in more than 100 cinemas

Comments are closed.