ಫಿಲಿಪೈನ್ಸ್ನಲ್ಲಿ(Hurricane of the Philippines) ಅಪ್ಪಳಿಸಿದ ಪ್ರಬಲ ಚಂಡಮಾರುತದಿಂದಾಗಿ ಬರೋಬ್ಬರಿ 208 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಇಂದು ಮಾಹಿತಿ ನೀಡಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿ ಫಿಲಿಪೈನ್ಸ್ಗೆ ಅಪ್ಪಳಿಸಿದ ಅತ್ಯಂತ ಮಾರಣಾಂತಿಕ ಚಂಡಮಾರುತಗಳಲ್ಲಿ ಒಂದಾಗಿದೆ ಎನ್ನಲಾಗಿದೆ.
ಗುರುವಾರ ಸಂಭವಿಸಿದ ಚಂಡಮಾರುತದಲ್ಲಿ ಫಿಲಿಪೈನ್ಸ್ನ ದಕ್ಷಿಣ ಹಾಗೂ ಮಧ್ಯ ಪ್ರದೇಶಗಳು ಸಂಪೂರ್ಣ ಹಾನಿಗೊಳಗಾಗಿದೆ. ರೈ ಚಂಡಮಾರುತದ ರುದ್ರ ನರ್ತನ ದಿಂದಾಗಿ 239 ಮಂದಿ ಗಾಯಗೊಂಡಿದ್ದರೆ 52 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ರೈ ಚಂಡಮಾರುತವು ಗಂಟೆಗೆ 195 ಕಿಮೀ/ ಗಂಟೆ ವೇಗದಲ್ಲಿ ಅಪ್ಪಳಿಸಿದೆ. ರೆಡ್ ಕ್ರಾಸ್ ಕರಾವಳಿ ಪ್ರದೇಶದಲ್ಲಿ ಸೂಪರ್ ಟೈಫೂನ್ನಿಂದ ಅತೀ ಹೆಚ್ಚಿನ ಹಾನಿ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ಕರಾವಳಿ ಪ್ರದೇಶದಲ್ಲಿ ವಾಸವಿದ್ದ 3 ಲಕ್ಷಕ್ಕೂ ಅಧಿಕ ಜನರು ತಮ್ಮ ಮನೆ ಹಾಗೂ ಬೀಚ್ ಫ್ರಂಟ್ ರೆಸಾರ್ಟ್ ತೊರೆದಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಫಿಲಿಪೈನ್ಸ್ ರೆಡ್ಕ್ರಾಸ್ ಅಧ್ಯಕ್ಷ ರಿಚರ್ಡ್ ಗಾರ್ಡನ್ ರೈ ಚಂಡಮಾರುತದಿಂದಾಗಿ ಮನೆ, ಆಸ್ಪತ್ರೆ, ಶಾಲೆ, ವಿದ್ಯುತ್ ಕಂಬಗಳು, ಸಮುದಾಯ ಕಟ್ಟಡಗಳು ಚೂರು ಚೂರಾಗಿದೆ. ಅನೇಕ ಸ್ಥಳಗಳಲ್ಲಿ ಸಂಪರ್ಕ ಕಡಿತಗೊಂಡಿದೆ.ಗ್ರಾಮೀಣ ಭಾಗಗಳು ಜಲಾವೃತವಾಗಿದೆ. ಭೂಕುಸಿತದಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗಬಹುದೆಂದು ನಿರೀಕ್ಷಿಸಲಾಗಿದೆ. ನಷ್ಟದ ಪ್ರಮಾಣವನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರೈ ಚಂಡಮಾರುತವು ಫಿಲಿಪೈನ್ಸ್ನ್ನು ಸಂಪೂರ್ಣವಾಗಿ ಹಾನಿಗೊಳಪಡಿಸಿದೆ. ಪ್ರವಾಹ , ಭೂಕುಸಿತದಿಂದಾಗಿ ರಕ್ಷಣಾ ಕಾರ್ಯಕ್ಕೂ ಅಡ್ಡಿಯಾಗಿದೆ. ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ಎಲ್ಲಾ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದಾಗಿದೆ. ರಕ್ಷಣಾ ಕಾರ್ಯಕ್ಕೆಂದು ಅಗ್ನಿಶಾಮಕ ದಳ, ಕೋಸ್ಟ್ ಗಾರ್ಡ್, ನೌಕಾ ಪಡೆ ಹೀಗಾ ಎಲ್ಲರನ್ನೂ ನಿಯೋಜಿಸಲಾಗಿದೆ. ಮರಗಳು, ವಿದ್ಯುತ್ ಕಂಬಗಳು ಹಾಗೂ ಕಟ್ಟಡಗಳು ಧರಾಶಾಹಿಯಾಗಿರುವ ಪರಿಣಾಮ ರಸ್ತೆ ಸಂಪರ್ಕ ಅನೇಕ ಕಡೆಗಳಲ್ಲಿ ಕಡಿತಗೊಂಡಿದೆ.
ಇದನ್ನು ಓದಿ :Aadhaar Card for Babies: ಹುಟ್ಟಿದ ತಕ್ಷಣವೇ ಮಗುವಿಗೆ ಆಧಾರ್ ಕಾರ್ಡ್
ಇದನ್ನೂ ಓದಿ :Aishwarya Rai Bachchan: ನಟಿ ಐಶ್ವರ್ಯಾ ರೈ ಬಚ್ಚನ್ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ
ಇದನ್ನೂ ಓದಿ : ಯುಎಇನಲ್ಲಿ ಓಮಿಕ್ರಾನ್ ಭೀತಿ, ಸಪ್ಟೆಂಬರ್‌ನಿಂದ ಕೋವಿಡ್ ಹೆಚ್ಚಳ
Hurricane of the Philippines; Death toll rises to 208