Tips to Online Payment : ಆನ್‌ಲೈನ್ ಪೇಮೆಂಟ್ ಮಾಡ್ತೀರಾ? ಮೋಸ ಹೋಗದಿರಲು ಈ ಸಲಹೆ ಅನುಸರಿಸಿ

ಡಿಜಿಟಲ್ ಇಂಡಿಯಾ (Digital India) ಹಾಗೂ ಕ್ಯಾಶ್ ಲೆಸ್ ಕಾನ್ಸೆಪ್ಟ್ (Cashless India) ಬಂದ ಮೇಲೆ ಬಹುತೇಕ ಮಂದಿ ಆನ್‌ಲೈನ್ ಪೇಮೆಂಟ್ (Online Payment) ಬಳಕೆಯನ್ನೇ ಅವಲಂಬಿಸಿದ್ದಾರೆ. ಭಾರತದ ಎಲ್ಲ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಆನ್‌ಲೈನ್ ಸೌಲಭ್ಯ ಒದಗಿಸಿವೆ. ಅಷ್ಟೇ ಅಲ್ಲದೆ ಗೂಗಲ್ ಪೇ (Google Pay), ಫೋನ್ ಪೇ(Phone Pe), ಪೇಟಿಎಂ (Paytm), ಭೀಮ್ ಮುಂತಾದ ಅನೇಕ ಅಪ್ಲಿಕೇಶನ್ ಮೂಲಕವೂ ಆನ್‌ಲೈನ್ ಪೇಮೆಂಟ್(Tips to Online Payment) ಮಾಡಲು ಸಾಧ್ಯವಿದೆ.

ಆದರೆ ಮೊದಮೊದಲಿಗೆ ಗ್ರಾಹಕರ ಖಾಸಗಿ ಮಾಹಿತಿ ಸೋರಿಕೆ ಆಗುತ್ತಿದೆ ಎಂದು ದೂರುಗಳು ಬಂದ ನಂತರ ಭಾರತದಲ್ಲಿ ಗ್ರಾಹಕರ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಸೇವ್ ಮಾಡುವಂತಿಲ್ಲ ಎಂಬ ನಿಯಮವನ್ನು ತರಲಾಗಿತ್ತು. ಅಷ್ಟೇ ಅಲ್ಲದೆ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿ ನೀಡದೆ ಯುಪಿಐ ಪಾವತಿ ಮಾಡುತ್ತಿದ್ದಾರೆ.

ಈ ಆನ್ಲೈನ್ ಪೇಮೆಂಟ್ ಎಷ್ಟು ಸುರಕ್ಷಿತವೋ ಅಷ್ಟೇ ಡೇಂಜರ್ ಕೂಡ ಆಗಿದೆ. ಒಂದು ಸಣ್ಣ ತಪ್ಪು ನಡೆದರೂ, ದುಡ್ಡು ಕಳೆದುಕೊಳ್ಳುವ ಸಂಭವ ಇದೆ. ಹಾಗಾಗಿ ಇಲ್ಲಿ ಒಂದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ನಾವು ಆನ್‌ಲೈನ್ ಪೇಮೆಂಟ್ ಮಾಡುವ ಮುನ್ನ ಅನುಸರಿಸಲೇಬೇಕಿದೆ. ಆನ್ಲೈನ್ ಪೇಮೆಂಟ್ ಸೈಟ್ ಲಿಂಕ್ ಪರಿಶೀಲಿಸಿ. URL https:// ಇದರಲ್ಲಿ s ಇದ್ದರೆ ಅದು ಸೇಫ್ ಎಂದರ್ಥ. ಇಲ್ಲಿಯೂ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ನೀಡುವ ಬದಲು ಯುಪಿಎ ಮಾಹಿತಿಯನ್ನು ನೀಡುವುದು ಉತ್ತಮ.

ಯುಆರ್ ಎಲ್ ನಲ್ಲಿ ಕಾಣುವ ಲಾಕ್ ಚಿಹ್ನೆ ಒತ್ತಿ ಸೆಕ್ಯೂರಿಟಿ ಡೀಟೇಲ್ ಅಥವಾ ಹೆಚ್ಚಿನ ಮಾಹಿತಿಯನ್ನು ನೋಡಬಹುದು. ಆಯಾ ಸೈಟ್ ನಮ್ಮಿಂದ ಯಾವೆಲ್ಲ ಮಾಹಿತಿಯನ್ನು ಕಲೆ ಹಾಕುತ್ತದೆ ಎಂದು ನೋಡಿದ ಮೇಲೆಯೇ ಪೇಮೆಂಟ್ ಮಾಡಬೇಕು. ಇದು ಸುರಕ್ಷತೆಯ ದೃಷ್ಟಿಯಿಂದ ಮಹತ್ವವಾದದ್ದು. ಶಾಪಿಂಗ್ ಮಾಡುವಾಗ ಈಗಾಗಲೇ ಒಂದುಮಟ್ಟಿಗೆ ಸುರಕ್ಷಿತ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿರುವ ಅಮೆಜಾನ್, ಫ್ಲಿಪ್ ಕಾರ್ಟ್, ಸ್ನಾಪ್ ಡೀಲ್ ಮುಂತಾದ ಕಡೆಗಳಿಂದ ಮಾಡುವುದೇ ಒಳ್ಳೆಯದು. ಇಲ್ಲಿ ಮೋಸ ಹೋಗುವ ಸಂಭವ ಕಡಿಮೆ. ವಾಟ್ಸಾಪಲ್ಲಿ ಯಾವುದೋ ಲಿಂಕ್ ಬಂತು ಎಂದು ಕಂಡ ಕಂಡ ವೆಬ್‌ಸೈಟ್‌ಗಳಲ್ಲಿ ಶಾಪಿಂಗ್ ಮಾಡುವುದು ಅಷ್ಟು ಸುರಕ್ಷಿತ ಕ್ಷಮವಲ್ಲ.

ನೀವು ಬಳಸುವ ಕಂಪ್ಯೂಟರ್‌ನಲ್ಲಿ ಆಗಾಗ ಆ್ಯಂಟಿವೈರಸ್ ಅಪ್ಡೇಟ್ ಮಾಡಿಕೊಳ್ಳಬೇಕು. ಇಂದಿನ ಫೋನ್ ಹಾಗೂ ಲ್ಯಾಪ್‌ಟಾಪ್‌ಗಳಲ್ಲಿ ಇದರ ಅಗತ್ಯವಿಲ್ಲ. ಆದರೂ ಹೀಗೆ ಮಾಡಿದರೆ ಡಬಲ್ ಪ್ರೊಟೆಕ್ಷನ್ ಸಿಗುತ್ತದೆ. ನೀವು ಓಪನ್ ಮಾಡುವ ಯಾವುದೇ ಯುಆರ್‌ಎಲ್ ಪಕ್ಕ ಇರುವ ಲಾಕ್ ಚಿಹ್ನೆ ಕ್ಲಿಕ್ ಮಾಡಿ. ಅಲ್ಲಿ ವೆಬ್‌ಸೈಟ್ ಯಾವೆಲ್ಲ ಮಾಹಿತಿ ಕಲೆ ಹಾಕಿದೆ ಎಂದು ತಿಳಿಯಲು ಸಾಧ್ಯವಿದೆ. ಪಾಸ್‌ವರ್ಡ್‌ಗಳನ್ನು ಆಗಾಗ ಬದಲಿಸುತ್ತಲೆ ಇರಿ. ವರ್ಷಗಟ್ಟಲೇ ಒಂದೇ ಪಾಸ್‌ವರ್ಡ್‌ ಬಳಸಬೇಡಿ.

ಇದನ್ನೂ ಓದಿ: Aadhaar Card for Babies: ಹುಟ್ಟಿದ ತಕ್ಷಣವೇ ಮಗುವಿಗೆ ಆಧಾರ್ ಕಾರ್ಡ್‌

(Tips to Online Payment : Pay online with these safest tips in Kannada Digital India )

Comments are closed.