ಇತಿಹಾಸ ಪ್ರಸಿದ್ಧ ತಿರುಪತಿ (Tirupati ) ತಿರುಮಲ ದೇವಸ್ಥಾನವು ಇದೇ ಮೊಟ್ಟ ಮೊದಲ ಬಾರಿಗೆ ವಿದೇಶದಲ್ಲಿಯೂ ಭೂಮಿಯನ್ನು ದಾನವಾಗಿ ಪಡೆಯಲು ಸಿದ್ಧತೆ ನಡೆಸಿದೆ. ಸೀಶೆಲ್ಸ್ನಲ್ಲಿ ವಾಸವಿರುವ ಭಾರತೀಯ ಮೂಲದ ವಿದೇಶಿ ನಾಗರಿಕ ರಾಮಕೃಷ್ಣ ಪಿಳ್ಳೈ ಎಂಬವರು ವಿದೇಶಿ ಭೂಮಿಯನ್ನು ತಿರುಪತಿ ತಿರುಮಲನಿಗೆ ದಾನದ ರೂಪದಲ್ಲಿ ನೀಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ತಿರುಪತಿಯ ಸಂಸದ ಡಾ.ಎಂ. ಗುರುಮೂರ್ತಿ ಹಾಗೂ ಗ್ರೂಪ್ನ ಉಪಾಧ್ಯಕ್ಷ ಹಾಗೂ ಟಿಟಿಡಿ ಟ್ರಸ್ಟ್ ಬೋರ್ಡ್ನ ಸದಸ್ಯ ಡಾ. ಎಂ ಗುರುಮೂರ್ತಿ ಮತ್ತು ಗ್ರೂಪ್ ಉಪಾಧ್ಯಕ್ಷ, ಟಿಟಿಡಿ ಟ್ರಸ್ಟ್ ಬೋರ್ಡ್ನ ಸದಸ್ಯ ಡಾ. ಎಸ್ ಶಂಕರ್ ಚೆನ್ನೈನಲ್ಲಿ ರಾಮಕೃಷ್ಣ ಪಿಳ್ಳೈರನ್ನು ಭೇಟಿಯಾಗಿದ್ದರು. ಈ ವೇಳೆ ರಾಮಕೃಷ್ಣ ಪಿಳ್ಳೈ ವೆಂಕಟೇಶ್ವರ ದೇವಾಲಯ ನಿರ್ಮಿಸಲು 5 ಕೋಟಿ ರೂಪಾಯಿ ಬೆಲೆ ಬಾಳುವ ಭೂಮಿಯನ್ನು ದಾನ ಮಾಡುವ ಪ್ರಸ್ತಾಪ ಮಾಡಿದ್ದಾರೆ.
ತಿರುಪತಿ ತಿರುಮಲ ದೇವಸ್ಥಾನಂಗೆ ನಾನು ಸೀಶೆಲ್ಸ್ನ ವಿಕ್ಟೋರಿಯಾದಲ್ಲಿರುವ ಸುಮಾರು 5 ಕೋಟಿ ರೂಪಾಯಿ ಬೆಲೆ ಬಾಳುವ ನಾಲ್ಕು ಎಕರೆ ವಿಸ್ತಾರವಾದ ಭೂಮಿಯನ್ನು ದಾನ ಮಾಡಲು ಬಯಸುತ್ತೇನೆ. ಆ ಜಾಗದಲ್ಲಿ ವೆಂಕಟೇಶ್ವರ ದೇವಸ್ಥಾನವನ್ನು ನಿರ್ಮಿಸಬೇಕು ಎಂದು ಟ್ರಸ್ಟ್ನ್ನು ವಿನಂತಿ ಮಾಡುತ್ತೇನೆ ಎಂದು ರಾಮಕೃಷ್ಣ ಪಿಳ್ಳೈ ಟಿಟಿಡಿಯನ್ನು ಮನವಿ ಮಾಡಿದ್ದಾರೆ.
ಸೀಶೆಲ್ಸ್ನಲ್ಲಿ ಹಿಂದೂಗಳು ಬಹು ಸಂಖ್ಯೆಯಲ್ಲಿದ್ದಾರೆ. ಅಲ್ಲಿನ ಹಿಂದೂ ಸಮುದಾಯವು ಗಣೇಶ ಮಂದಿರವನ್ನು ನಿರ್ಮಿಸಿದೆ. ಈ ದೇವಸ್ಥಾನವು ಹೆಚ್ಚಿನ ಸಂಖ್ಯೆಯ ವಿದೇಶಿಗರನ್ನು ತನ್ನತ್ತ ಸೆಳೆಯುವುದು ಗಮನಕ್ಕೆ ಬಂದ ಬಳಿಕ ಅಲ್ಲಿ ವೆಂಕಟೇಶ್ವರ ದೇವಸ್ಥಾನವನ್ನು ನಿರ್ಮಿಸಲು ಬಯಸಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ : congress leader mallikarjuna kharge : ಇಡಿ ವಿಚಾರಣೆಗೆ ಹಾಜರಾದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ
ಇದನ್ನೂ ಓದಿ : gang rape on girl child : 16 ವರ್ಷದ ಬಾಲಕಿ ಮೇಲೆ 8 ಮಂದಿಯಿಂದ ಗ್ಯಾಂಗ್ ರೇಪ್: ಆರೋಪಿಗಳ ಬಂಧನ
In a first, land in Seychelles offered to Tirupati shrine