Travel Tips: ವಿದೇಶಕ್ಕೆ ಹೊರಟಿದ್ದೀರಾ ? ಹಾಗಾದರೆ ನಿಮ್ಮ ಪಾಸ್‌ಪೋರ್ಟ್‌ನ ರಕ್ಷಣೆ ಹೀಗೆ ಮಾಡಿ

ಪಾಸ್‌ಪೋರ್ಟ್‌(Travel Tips) ಗಾತ್ರದಲ್ಲಿ ಚಿಕ್ಕದಾದರೂ ಅದರ ಕೀರ್ತಿ ಅಪಾರ. ವಿದೇಶಗಳಲ್ಲಂತೂ ಅದರ ಬಗ್ಗೆ ನಿರ್ವಿವಾದ. ಪಾಸ್‌ಪೋರ್ಟ್‌ ನಿಮ್ಮನ್ನು ಬೇರೆ ಪ್ರದೇಶಗಳಿಗೆ ಮಾತ್ರ ಕರೆದುಕೊಂಡು ಹೋಗುವುದಿಲ್ಲ, ಅದರ ಜೊತೆಗೆ ನಿಮ್ಮ ಪೌರತ್ವದ ಗುರುತು ಹೇಳುತ್ತದೆ. ಅದಕ್ಕಾಗಿಯೇ ಅದು ಕಳೆದರೆ ಅತೀ ಭಯವಾಗುವುದು. ಅಷ್ಟೇ ಅಲ್ಲ ಯಾವುದೋ ಜಾಗದಲ್ಲಿ ಇಟ್ಟು ಮರೆತು ಬಿಟ್ಟಾಗ ಅಥವಾ ಡ್ಯಾಮೇಜ್‌ ಆದಾಗ ಪ್ರಯಾಣಿಸಲು ಸಾಧ್ಯವೇ ಇಲ್ಲ ನೋಡಿ, ಅದಕ್ಕಾಗಿಯೇ ಇನ್ನೂ ಹೆಚ್ಚಿನ ಭಯ ಈ ಪ್ರಯಾಣದಲ್ಲಿ ಪಾಸ್‌ಪೋರ್ಟ್‌ಗಳನ್ನು ಕಾಯ್ದುಕೊಳ್ಳುವುದು ಆಗಿದೆ. ಹಾಗಾದರೆ ಪಾಸ್‌ಪೋರ್ಟ್‌ಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಹೇಗೆ?

ಜಾಗರೂಕರಾಗಿರುವುದೇ ಇದೆಲ್ಲದಕ್ಕೂ ಉತ್ತರ. ಯಾರಾದರೂ ಬೇಕೆಂದೇ ಅಪರಿಸಿದರೆ ಅದು ಬೇರೆಯದೇ ವಿಷಯ ಬಿಡಿ. ಅದನ್ನು ಬಿಟ್ಟು ಉಳಿದವುಗಳಲ್ಲಿ ಜಾಗರೂಕರಾಗಿರಬಹುದಲ್ಲವೇ? ಅದನ್ನೇ ನೆನಪಿನಲ್ಲಿಟ್ಟುಕೊಂಡು ನಾವು ನಿಮಗೆ ಕೆಲವು ಟಿಪ್ಸ್‌ ಹೇಳುತ್ತಿದ್ದೇವೆ. ನೀವೂ ಪ್ರಯಾಣದಲ್ಲಿ ಅದನ್ನು ಪಾಲಿಸಿ, ನಿಮ್ಮ ಪಾಸ್‌ಪೋರ್ಟ್‌ ಕಾಪಾಡಿಕೊಳ್ಳಿ.

ಕಾಪಿಗಳನ್ನು ಮಾಡಿಟ್ಟುಕೊಳ್ಳಿ:
ಪ್ರಯಾಣಕ್ಕೆ ಹೊರಡುವ ಮೊದಲೇ ನೀವು ಪಾಸ್‌ಪೋರ್ಟ್‌ ನ ಕೆಲವು ಕಾಪಿಗಳನ್ನು ಮಾಡಿ ಬ್ಯಾಗ್‌ನಲ್ಲಿಟ್ಟುಕೊಳ್ಳಿ. ಅದಕ್ಕೆ ಇನ್ನೂ ಹೆಚ್ಚಿನ ಜಾಗ್ರತೆ ವಹಿಸಬೇಕೆಂದರೆ ಅದನ್ನು ಬ್ಯಾಗ್‌ ನ ಕೆಳಗಡೆಯ ಜಿಪ್‌ನಲ್ಲಿ ಇಡಿ. ಒಂದು ಕಾಪಿಯನ್ನು ಮನೆಯಲ್ಲಿಯೇ ಬಿಟ್ಟು ಹೋಗಿ. ಮನೆಯಲ್ಲಿದ್ದವರು ಅಂತಹ ಸಂದರ್ಭ ಬಂದಾಗ ಸಹಾಯ ಮಾಡಲು ಅನುಕೂಲವಾಗುವುದು.

ಪಾಸ್‌ಪೋರ್ಟ್‌ಗೆ ಉತ್ತಮ ಕವರ್‌ ಹಾಕಿ :
ನೀವು ಯಾವಾಗಲೂ ಪ್ರಯಾಣ ಮಾಡುತ್ತಲೇ ಇರುವವರಾಗಿದ್ದರೆ, ನಿಮ್ಮ ಪಾಸ್‌ಪೋರ್ಟ್‌ಗೆ ಒಂದು ಉತ್ತಮ ವಾಟರ್‌ ಪ್ರೂಫ್‌ ಕವರ್‌ ಹಾಕಿ. ಅದಲ್ಲದೇ ನಿಮ್ಮ ಪ್ರಯಾಣದ ಬೀಚ್‌ ಅಥವಾ ನೀರಿರುವ ಪ್ರದೇಶಗಳಿಗೆ ಹೋಗುವುದಿದ್ದರಂತೂ ಕವರ್‌ ಅತ್ಯಗತ್ಯ. ಅಗತ್ಯ ಮಾಹಿತಿಗಳಿರುವ ಪುಟ ನೀರಿನಿಂದ ಹಾಳಾದರೆ, ಆಗ ಆ ಪುಟಗಳನ್ನು ಓದುವುದಕ್ಕೆ ಆಗುವುದಿಲ್ಲ. ಅದರ ಪರಿಣಾಮ ಮತ್ತೊಂದು ಪಾಸ್‌ಪೋರ್ಟ್‌ ಮಾಡಿಸಲೇ ಬೇಕು.

ಇದನ್ನೂ ಓದಿ : Mullayanagiri : ಮಂಜಿನ ಓಟ ಹಚ್ಚ ಹಸಿರ ವನರಾಶಿ : ಇದು ಭೂಲೋಕದ ಸ್ವರ್ಗ ಮುಳ್ಳಯ್ಯನಗಿರಿ

ನಿಮ್ಮ ಹೊಟೇಲ್‌ ರೂಮ್‌ನಲ್ಲಿಯೇ ಇಡಿ :
ಒಮ್ಮೆ ನೀವು ಗಮ್ಯ ತಲುಪಿದ ಮೇಲೆ ನಿಮ್ಮ ಪಾಸ್‌ಪೋರ್ಟ್‌ ಅನ್ನು ನೀವು ತಂಗಿರುವ ಹೊಟೇಲ್‌ನಲ್ಲಿಯೇ ಇರಿಸಿ. ಅದರ ಕಾಪಿ ತೆಗೆದುಕೊಂಡು ಹೋಗಿ. ಒಂದೇ ಕಾಪಿ ಇಟ್ಟುಕೊಂಡು ಪರದಾಡುವುದು ತಪ್ಪುತ್ತದೆ. ಸಾಮಾನ್ಯವಾಗಿ ಹೊಟೇಲ್‌ಗಳಲ್ಲಿ ಸೆಕ್ಯುರಿಟಿ ಕೋಡ್‌ ಇರುವ ಲಾಕರ್‌ ವ್ಯವಸ್ಥೆಯಿರುತ್ತದೆ. ಅದನ್ನು ನಿಮ್ಮ ಪಾಸ್‌ಪೋರ್ಟ್‌ ಸಂರಕ್ಷಿಸಲು ಬಳಸಿ.

ನಿಮ್ಮ ಹಕ್ಕನ್ನು ತಿಳಿದುಕೊಳ್ಳಿ :
ಏರ್‌ಪೋರ್ಟ್‌ ಸೆಕ್ಯುರಿಟಿ ಕ್ಲೀಯರ್‌ ಮಾಡಲು ನಿಮಗೆ ಪಾಸ್‌ಪೋರ್ಟ್‌ ಖಂಡಿತವಾಗಿಯೂ ಬೇಕು. ಆದರೆ ಎಲ್ಲಿ ಒರಿಜಿನಲ್‌ ಪಾಸ್‌ಪೋರ್ಟ್‌ ತೋರಿಸಬೇಕು ಮತ್ತು ಎಲ್ಲಿ ಕಾಪಿಗಳನ್ನು ತೋರಿಸಿದರೆ ಸಾಕು ಎಂಬುದನ್ನು ತಿಳಿದುಕೊಳ್ಳಿ. ಒಂದು ವೇಳೆ ನಿಮ್ಮ ಹತ್ತಿರ ಇಂಟರ್‌ನಾಷನಲ್‌ ಡ್ರೈವರ್‍ಸ ಲೈಸನ್ಸ್‌ ಇದ್ದರೆ ಆಗ ಹೆಚ್ಚಿನ ಸಂದರ್ಭಗಳಲ್ಲಿ ಪಾಸ್‌ಪೋರ್ಟ್‌ ಕಾಪಿ ಮತ್ತು ಡ್ರೈವಿಂಗ್‌ ಲೈಸನ್ಸ್‌ ಸಾಕಾಗುತ್ತದೆ.

ಇದನ್ನೂ ಓದಿ : Hyderabad City of Pearls: ಹೈದರಾಬಾದ್‌ಗೆ ಮುತ್ತಿನ ನಗರಿ ಎಂಬ ಹೆಸರು ಬಂದಿದ್ದೇಗೆ?

(Travel Tips Travelling Abroad tips to protect your passport)

Comments are closed.