ಭಾನುವಾರ, ಏಪ್ರಿಲ್ 27, 2025
HomeWorldMakeup Divorce : ಮೇಕ್‌ಅಪ್‌ ಇಲ್ಲದ ಪತ್ನಿಯ ನೋಡಿ ಡೈವೋರ್ಸ್‌ ಕೊಟ್ಟ ಪತಿ !

Makeup Divorce : ಮೇಕ್‌ಅಪ್‌ ಇಲ್ಲದ ಪತ್ನಿಯ ನೋಡಿ ಡೈವೋರ್ಸ್‌ ಕೊಟ್ಟ ಪತಿ !

- Advertisement -

ಕೈರೋ : ಇತ್ತೀಚಿನ ವರ್ಷಗಳಲ್ಲಿ ಡೈವೋರ್ಸ್‌ ಅನ್ನೋದು ಸಾಮಾನ್ಯವಾಗ್ತಿದೆ. ಕ್ಷುಲಕ ಕಾರಣಕ್ಕೆ ಪತಿ, ಪತ್ನಿಯರು ಬೇರೆ ಬೇರೆಯಾಗುತ್ತಿದೆ. ಇದೀಗ ಮೇಕ್‌ ಇಲ್ಲದ ಪತ್ನಿಯನ್ನು ನೋಡಿದ ಪತಿ ಮಹಾಶಯನೋರ್ವ ಮದುವೆಯಾದ ಒಂದೇ ತಿಂಗಳಲ್ಲಿ ವಿಚ್ಚೇದನ ನೀಡಿರುವ ಅಪರೂಪದ ಘಟನೆ ಈಜಿಫ್ಟ್‌ನಲ್ಲಿ ನಡೆದಿದೆ.

ಮದುವೆಯಾದ ಮರು ದಿನ ಬೆಳಗ್ಗೆ ತನ್ನ ಹೆಂಡತಿಯನ್ನು ನೋಡಿದ ವ್ಯಕ್ತಿ ಆಘಾತಕ್ಕೆ ಒಳಗಾಗಿದ್ದ. ಮದುವೆಗೂ ಮುನ್ನ ಹೆವಿ ಮೇಕಪ್‌ ಮಾಡಿಕೊಳ್ಳುತ್ತಿದ್ದ ಆಕೆಯನ್ನು ಮೇಕ್‌ಅಪ್‌ ಇಲ್ಲದೇ ನೋಡಿದ ಪತಿ ನಿಜಕ್ಕೂ ಆಘಾತಕ್ಕೆ ಒಳಗಾಗಿದ್ದಾನೆ. ಅವಳು ಮೇಕ್‌ಅಪ್‌ ಇಲ್ಲದೇ ಚೆನ್ನಾಗಿ ಕಾಣಿಸುತ್ತಿಲ್ಲ. ಆಕೆಯಿಂದ ತಾನು ಮೋಸ ಹೋಗಿದ್ದಾನೆ ಅಂತ ವ್ಯಕ್ತಿ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದಾನೆ.

ವ್ಯಕ್ತಿಗೆ ಆಕೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದಳು. ಪರಿಚಯ ನಂತರದಲ್ಲಿ ಪ್ರೀತಿಗೆ ತಿರುಗಿತ್ತು. ಆಕೆ ಪೂರ್ಣ ಮೇಕ್‌ ಅಪ್‌ ಧರಿಸಿ ಸುಂದರವಾದ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡುತ್ತಿದ್ದಳು. ಹಲವು ಬಾರಿ ಭೇಟಿಯಾದ ನಂತರದ ಅವಳನ್ನು ಮದುವೆಯಾಗಲು ನಿರ್ಧಾರ ಮಾಡಿದ್ದೆ. ಆದರೆ ಮದುವೆಯಾದ ನಂತರ ಆಕೆಯ ಮುಖವನ್ನು ನೋಡಿ ಆಘಾತಕ್ಕೆ ಒಳಗಾಗಿದ್ದೇನೆ ಅಂತಾ ವ್ಯಕ್ತಿ ನ್ಯಾಯಾಲಯದಲ್ಲಿ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.

ಆಕೆಯನ್ನು ಮೇಕ್‌ಅಪ್‌ ಇಲ್ಲದೇ ನೋಡಿದಾಗ ಆಕೆಯನ್ನು ನಾನು ಹಲವು ಬಾರಿ ಭೇಟಿಯಾದವಳಂತೆ ನನಗೆ ಕಾಣಿಸುತ್ತಿಲ್ಲ. ತನ್ನನ್ನು ಆಕೆ ಮೋಸ ಮಾಡಿದ್ದಾಳೆ ಎಂದು ಆತ ಹೇಳಿಕೊಂಡಿದ್ದಾನೆ. ತನಗೆ ಆಕೆಯಿಂದ ವಿಚ್ಚೇಧನ ನೀಡುವಂತೆ ನ್ಯಾಯಾಲಯದಲ್ಲಿ ಕೇಳಿಕೊಂಡಿದ್ದಾನೆ. ಅಂತಿಮವಾಗಿ ನ್ಯಾಯಾಲಯ ಇಬ್ಬರಿಗೂ ವಿಚ್ಚೇಧನವನ್ನು ನೀಡಿದೆ.

ಇಷ್ಟೇ ಅಲ್ಲಾ ಇಂತಹ ಹಲವು ಪ್ರಕರಣಗಳು ಈಗಾಗಲೇ ನಡೆದಿದೆ. 2016 ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನವವಿವಾಹಿತ ದಂಪತಿಗಳು ಆರು ತಿಂಗಳ ನಂತರ ತಮ್ಮ ಮೇಕಪ್‌ ವಿಚಾರಕ್ಕೆ ಮದುವೆ ಮುರಿದುಕೊಂಡಿದ್ದಾರೆ. ಶಾರ್ಜಾದ ಅಲ್ ಮಮ್ಜಾರ್ ಬೀಚ್‌ನಲ್ಲಿ ಜೋಡಿ ಈಜಲು ಹೋದಾಗ ಪತ್ನಿಯ ಮುಖದಲ್ಲಿದ್ದ ಮೇಕ್‌ ಅಪ್‌ ಮಾಯವಾಗಿತ್ತು. ಇದರನ್ನು ನೋಡಿ ಶಾಕ್‌ ಆದ ಪತಿ ಪತ್ನಿಗೆ ವಿಚ್ಚೇದನವನ್ನು ನೀಡಿದ್ದಾನೆ.

(I was shocked: Egyptian man divorces wife after seeing her without makeup)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular