ಕಾಬೂಲ್ : ತಾಲಿಬಾನಿಗಳಿಂದ ಕಿಡ್ನಾಪ್ ಆಗಿದ್ದ 150 ಭಾರತೀಯರು ಸುರಕ್ಷಿತರಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಅಪ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದಲ್ಲಿದ್ದ ಭಾರತೀಯರ ಪಾಸ್‌ಪೋರ್ಟ್‌ಗಳನ್ನು ತಾಲಿಬಾನಿಗಳು ಪರಿಶೀಲನೆ ನಡೆಸಿದ್ದು, ಎಲ್ಲರೂ ವಿಮಾನ ನಿಲ್ದಾಣ ಬಳಿಯ ಗ್ಯಾರೇಜ್‌ನಲ್ಲಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.
ಅಪ್ಘಾನಿಸ್ತಾನದಲ್ಲಿ ಸಿಲುಕಿದ್ದ 150 ಭಾರತೀಯರನ್ನು ತಾಲಿಬಾನಿಗಳು ಕಿಡ್ನಾಪ್ ಮಾಡಿದ್ದಾರೆ ಅನ್ನುವ ಕುರಿತು ಅಪ್ಘಾನ್ ಮಾಧ್ಯಮಗಳು ವರದಿ ಮಾಡಿವೆ. ಇದು ಭಾರತೀಯರಿಗೆ ಆತಂಕ ಮೂಡಿಸಿತ್ತು. ಇದರ ಬೆನ್ನಲ್ಲೇ ಭಾರತೀಯ ರಾಯಬಾರ ಕಚೇರಿಯಿಂದ ಮಾಹಿತಿ ಲಭ್ಯವಾಗಿದ್ದು, ಎಲ್ಲಾ ಭಾರತೀಯರು ಸೇಫ್ ಆಗಿದ್ದಾರೆ ಎಂದಿದೆ.
ಭಾರತಕ್ಕೆ ಏರ್‌ಲಿಫ್ಟ್ ಮಾಡಲು ಕಾಯುತ್ತಿದ್ದ ಭಾರತೀಯರ ಬಳಿಗೆ ಬಂದ ತಾಲಿಬಾನಿಗಳು ಪಾಸ್‌ಪೋರ್ಟ್ ಪರಿಶೀಲನೆಯನ್ನು ನಡೆಸಿ ವಾಪಾಸಾಗಿದ್ದಾರೆ. ಆದರೆ ಯಾವುದೇ ಪ್ರಾಣಹಾನಿಯನ್ನು ಮಾಡಿಲ್ಲ. ಇದರಿಂದಾಗಿ ಭಾರತೀಯರು ನಿಟ್ಟಿಸಿರುವ ಬಿಟ್ಟಿದ್ದಾರೆ. ಇನ್ನು ಅಪ್ಘಾನಿಸ್ತಾನದಲ್ಲಿರುವ ಭಾರತೀಯರ ಪೈಕಿ ಎಷ್ಟು ಮಂದಿ ಕನ್ನಡಿಗರು ಇದ್ದಾರೆ ಅನ್ನುವ ಕುರಿತು ನಿಖರವಾದ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ : Taliban Kidnap : 150ಕ್ಕೂ ಅಧಿಕ ಭಾರತೀಯರನ್ನು ಅಪಹರಿಸಿದ ತಾಲಿಬಾನ್ !
ಅಪ್ಘಾನಿಸ್ತಾನದಲ್ಲಿ ಸಿಲುಕಿದ್ದ ಹಲವರನ್ನು ಈಗಾಗಲೇ ಭಾರತಕ್ಕೆ ಕರೆತರಲಾಗಿದೆ. ಅಲ್ಲದೇ ಉಳಿದವರ ರಕ್ಷಣೆಗಾಗಿ ಹೆಲ್ತ್ ಡೆಸ್ಕ್ ಆರಂಭಿಸಿದ್ದು, ಕರ್ನಾಟಕ ಸರಕಾರ ಕೂಡ ಕನ್ನಡಿಗರ ಕುರಿತು ಮಾಹಿತಿ ಪಡೆಯುವ ಕಾರ್ಯವನ್ನು ಮಾಡುತ್ತಿದೆ. ಇನ್ನೊಂದೆಡೆ ಅಪ್ಘಾನಿಸ್ತಾನದಿಂದ ಭಾರತಕ್ಕೆ ಬರಲು ಇಚ್ಚಿಸುವವರಿಗೆ ಆರು ತಿಂಗಳ ವೀಸಾ ನೀಡಲು ಸರಕಾರ ಮುಂದಾಗಿದ್ದು, ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಲು ಸೂಚಿಸಿದೆ.
ಇದನ್ನೂ ಓದಿ : ಕಾಬೂಲ್‌ನಲ್ಲಿ ಸಿಲುಕಿದ 6 ಕನ್ನಡಿಗರು : 2 ವಿಮಾನಗಳಲ್ಲಿ ಏರ್‌ಲಿಫ್ಟ್ ಗೆ ಇನ್ನೂ ಸಿಗದ ಕ್ಲಿಯರೆನ್ಸ್