FIR: ಜೈಲಿನಿಂದ ಹೊರಬರುತ್ತಿದ್ದಂತೆ ಸಂಕಷ್ಟಕ್ಕೆ ಸಿಲುಕಿದ ವಿನಯ್ ಕುಲಕರ್ಣಿ: ಮತ್ತೆರಡು FIR ದಾಖಲು!

ಬೆಳಗಾವಿ : ಜಿ.ಪಂ ಸದಸ್ಯ ಯೋಗೇಶ್ ಗೌಡ ಮರ್ಡರ್ ಪ್ರಕರಣದಲ್ಲಿ ಜೈಲು ಸೇರಿ 9 ತಿಂಗಳ ಬಳಿಕ ಜಾಮೀನಿನ ಮೇಲೆ ಹೊರಬಂದ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಜೈಲಿನಿಂದ ಹೊರಬಂದು ಮನೆ ಸೇರುವ ಮುನ್ನವೇ ಮತ್ತೆರಡು ಎಫ್ಆಯ್ಆರ್ ದಾಖಲಾಗಿದೆ.

ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಪಡೆದ ಮಾಜಿ ಸಚಿವ ವಿನಯ್ ಕುಲಕರ್ಣಿ ಶನಿವಾರ ಮುಂಜಾನೆ ಜೈಲಿನಿಂದ ಹೊರಬಂದಿದ್ದಾರೆ. ಆದರೆ ಜೈಲಿನಿಂದ ಹೊರಬರುತ್ತಿದ್ದಂತೆ ಕೊರೋನಾ ಮಾರ್ಗಸೂಚಿ ಹಾಗೂ ವೀಕೆಂಡ್ ಕರ್ಪ್ಯೂ ನಿಯಮಗಳನ್ನು ವಿನಯ್ ಕುಲಕರ್ಣಿ ಗಾಳಿಗೆ ತೂರಿದ್ದಾರೆ.

ವಿನಯ್ ಕುಲಕರ್ಣಿ ಸ್ವಾಗತಕ್ಕೆ ಜೈಲಿನ ಹೊರಗೆ ಭಾರಿ ಪ್ರಮಾಣದಲ್ಲಿ ಅಭಿಮಾನಿಗಳು ನೆರೆದಿದ್ದು, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲಿಸಲಾಗಿರಲಿಲ್ಲ. ಅಷ್ಟೇ ಅಲ್ಲ ವಿನಯ್ ಕುಲಕರ್ಣಿ ಬೃಹತ ಮೆರವಣಿಗೆಯಲ್ಲಿ ಬೆಳಗಾವಿ ನಗರಕ್ಕೆ ಪ್ರವೇಶಿಸಿದ್ದಾರೆ.

ಹೀಗಾಗಿ ಮಾಜಿ ಸಚಿವ ಕುಲಕರ್ಣಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಇನ್ನಿತರ 300 ಜನರ ವಿರುದ್ಧ ಪೊಲೀಸರು ಕೊರೋನಾ ನಿಯಮ ಉಲ್ಲಂಘನೆ ಹಾಗೂ ವೀಕೆಂಡ್ ಕರ್ಪ್ಯೂ ಉಲ್ಲಂಘಿಸಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : ಕೊನೆಗೂ ಜೈಲಿನಿಂದ ಹೊರಬಂದ ಮಾಜಿ ಸಚಿವ: ತಿಲಕವಿಟ್ಟು ಸ್ವಾಗತಿಸಿದ ಕಾಂಗ್ರೆಸ್ ಶಾಸಕಿ!

ಹಿಂಡಲಗಾ ಗ್ರಾಮ ಪಂಚಾಯತ್ ಪಿಡಿಓ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆಯನ್ವಯ 188 ಅಡಿಯಲ್ಲಿ ವಿನಯ್ ಕುಲಕರ್ಣಿ ವಿರುದ್ಧ ರಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ : Yogesh Murder: ಯೋಗೇಶ್ ಗೌಡ ಕೊಲೆ ಪ್ರಕರಣ…! ವಿನಯ ಕುಲಕರ್ಣಿ ಆಪ್ತ ಕೆಎಎಸ್ ಅಧಿಕಾರಿ ಸೋಮು ಆರೇಸ್ಟ್….!!

Comments are closed.