Indian Student Murdered : ಅಮೇರಿಕಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ನಿಗೂಢ ಹತ್ಯೆ

ವಾಷಿಗ್ಟನ್ : (Indian Student Murdered )ಭಾರತ ಮೂಲದ ವಿದ್ಯಾರ್ಥಿಯೋರ್ವ ನಿಗೂಢವಾಗಿ ಹತ್ಯೆಯಾಗಿರುವ ಘಟನೆ ಅಮೇರಿಕದಲ್ಲಿ ನಡೆದಿದೆ. ʼಪರ್ಡ್ಯೂ ವಿಶ್ವವಿದ್ಯಾಲಯʼದ ವಿದ್ಯಾರ್ಥಿಯಾಗಿದ್ದು, ಯುನೈಟೆಡ್‌ ಸ್ಟೇಟ್ಸ್‌ ನ ಇಂಡಿಯಾನಾ ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಆತನ ಸ್ನೇಹಿತನೇ ಹತ್ಯೆ ಮಾಡಿರುವ ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಭಾರತ ಮೂಲದ ವರುಣ್‌ ಮನೀಶ್‌ ಛೇಡಾ (20 ವರ್ಷ ) ಎಂಬಾತನೇ ಸಾವನ್ನಪ್ಪಿರುವ ವಿದ್ಯಾರ್ಥಿಯಾಗಿದ್ದಾನೆ. ʼಪರ್ಡ್ಯೂ ವಿಶ್ವವಿದ್ಯಾಲಯʼದ ʼಯುನೈಟೆಡ್‌ ಸ್ಟೇಟ್ಸ್‌ ನ ಇಂಡಿಯಾನ ಕ್ಯಾಂಪಸ್‌ʼ ನಲ್ಲಿರುವ ಹಾಸ್ಟೆಲ್‌ ನಲ್ಲಿ ವಾಸವಾಗಿದ್ದು, ಬುಧವಾರ ನಿಗೂಢವಾಗಿ ಕೊಲೆ( Indian Student Murdered )ಯಾಗಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ.ಶವ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಇದೊಂದು ಕೊಲೆ ಎನ್ನುವುದು ದೃಢಪಟ್ಟಿದೆ. ಆದರೆ ಈ ವಿದ್ಯಾರ್ಥಿಯ ಸಾವು ಹಲವು ಅನುಮಾನ ಮಾಡಿಕೊಟ್ಟಿದೆ.

ಇನ್ನು ವರುಣ್‌ ಮನೀಶ್‌ ಛೇಡಾನ ರೂಮ್‌ ಮೇಟ್‌ ಈ ಹತ್ಯೆಯನ್ನು ನಡೆಸಿದ್ದು, ಕೊರಿಯಾದ ಜಿ ಮಿನ್‌ ಜಿಮ್ಮಿ ಶಾ (22 ವರ್ಷ) ಎಂಬಾತನೇ ಕೊಲೆ ಆರೋಪಿಯಾಗಿದ್ದಾನೆ. ಜಿಮ್ಮಿ ಶಾ ಕೊರಿಯಾದ ಜೂನಿಯರ್‌ ಸೈಬರ್‌ ಸೆಕ್ಯುರಿಟಿ ಮೇಜರ್‌ ಹಾಗೂ ಅಂತರಾಷ್ಟ್ರೀಯ ವಿದ್ಯಾರ್ಥಿಯಾಗಿದ್ದು, ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರ ಬೆಳಿಗ್ಗೆ 12:45 ರ ಹೊತ್ತಿಗೆ ಜಿಮ್ಮಿ ಶಾ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ : Bharat Jodo Yatra :ಎರಡು ದಿನಗಳ ವಿರಾಮದ ಬಳಿಕ ಮತ್ತೆ ಆರಂಭಗೊಂಡ ಭಾರತ್​ ಜೋಡೋ ಯಾತ್ರೆ : ರಾಹುಲ್​ ಗಾಂಧಿಗೆ ಸೋನಿಯಾ ಸಾಥ್​

ಇದನ್ನೂ ಓದಿ : Minister Prabhu Chavan:‘ಜಾಮೀನಿನ ಮೇಲೆ ಹೊರಗಿರುವವರಿಂದ ಎಂತಹ ಭಾರತ್​ ಜೋಡೋ ನಿರೀಕ್ಷಿಸಬಹುದು’ : ಸಚಿವ ಪ್ರಭು ಚವ್ಹಾಣ್​ ವ್ಯಂಗ್ಯ

ಇದನ್ನೂ ಓದಿ : kerala bus accident:ಕೇರಳದಲ್ಲಿ ಭೀಕರ ರಸ್ತೆ ಅಪಘಾತ : ಒಂಬತ್ತು ವಿದ್ಯಾರ್ಥಿಗಳ ದುರ್ಮರಣ

ಆದರೆ ಛೇಡಾನನ್ನು ಯಾವ ಕಾರಣಕ್ಕೆ ಕೊಲೆ ಮಾಡಲಾಗಿದೆ ಅನ್ನೋದು ಇನ್ನೂ ಬಹಿರಂಗವಾಗಿಲ್ಲ. ನಿಗೂಢ ಸಾವನ್ನು ಪೋಲೀಸರು ಕೊಲೆ ಎಂದು ಪರಿಗಣಿಸಿದ್ದು, ತನಿಖೆಯ್ನು ಮುಂದುವರಿಸಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೇ ಸತ್ಯಾಸತ್ಯತೆ ಬಯಲಾಗಲಿದೆ.

(Indian Student Murdered) An incident in which a student of Indian origin was murdered mysteriously took place in America. A student of ‘Purdue University’, he died mysteriously in a hostel in the Indiana campus of the United States. The police have arrested him and are interrogating him on the suspicion that his friend killed him.

Comments are closed.