ಸೋಮವಾರ, ಏಪ್ರಿಲ್ 28, 2025
HomeWorldParalympics: ಪ್ಯಾರಾಒಲಂಪಿಕ್ ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಪದಕ ಗೆದ್ದ ಕನ್ನಡಿಗ ಐಎಎಸ್ ಅಧಿಕಾರಿ ಸುಹಾಸ್

Paralympics: ಪ್ಯಾರಾಒಲಂಪಿಕ್ ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಪದಕ ಗೆದ್ದ ಕನ್ನಡಿಗ ಐಎಎಸ್ ಅಧಿಕಾರಿ ಸುಹಾಸ್

- Advertisement -

ಟೋಕಿಯೋ ಪ್ಯಾರಾಒಲಂಪಿಕ್ಸ್ ನಲ್ಲಿ ಪುರುಷರ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತದ ಐಎಎಸ್ ಅಧಿಕಾರಿ ಸುಹಾಸ್ ಬೆಳ್ಳಿ ಪದಕ ಪಡೆದು ಸಾಧನೆಗೈಯ್ದಿದ್ದಾರೆ. ಆ ಮೂಲಕ ಈ ದಾಖಲೆ ಬರೆದ ಮೊದಲ ಐಎಎಸ್ ಅಧಿಕಾರಿ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.

ಪ್ರಸ್ತುತ ಉತ್ತರ ಪ್ರದೇಶದ ಗೌತಮ ಬುದ್ಧ ನಗರದ  ಜಿಲ್ಲಾಧಿಕಾರಿಯಾಗಿರುವ ಸುಹಾಸ್ ಯತಿರಾಜ್ ಪ್ಯಾರಾಒಲಂಪಿಕ್ ನಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದು, ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 18 ಕ್ಕೆ ಏರಿಕೆಯಾಗಿದೆ.

ಭಾನುವಾರ ಬೆಳಗ್ಗೆ ನಡೆದ ಫೈನಲ್ ಪಂದ್ಯಾವಳಿಯಲ್ಲಿ ಫ್ರಾನ್ಸ್ ನ ಲೂಕಾಸ್ ಮಜೂರ್ ಎದುರು ಸೋಲನ್ನಪ್ಪಿದ್ದಾರೆ. ಶನಿವಾರ ನಡೆದ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಸುಹಾಸ್ ಯತಿರಾಜ್, ಸತ್ಯವಾನ್ ಫ್ರೆಡಿ ವಿರುದ್ಧ 21-9,21-15 ರಅಂತರದಲ್ಲಿ ಗೆಲುವು ಸಾಧಿಸಿದ್ದರು. ಆಮೂಲಕ ಫೈನಲ್ ಗೆ ಎಂಟ್ರಿಯಾಗಿದ್ದರು.

ಎಸ್.ಎಲ್.ವಿಭಾಗದಲ್ಲಿ ಸುಹಾಸ್ ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಹಾಸನದಲ್ಲಿ ಜನಿಸಿ ಶಿವಮೊಗ್ಗದಲ್ಲಿ ಬೆಳೆದ ಸುಹಾಸ್ ದಕ್ಷಿಣ ಕನ್ನಡದ ಸುರತ್ಕಲ್ ಎನ್ಐಟಿಯಲ್ಲಿ ಕಂಪ್ಯೂಟರ್ ಇಂಜೀನಿಯರಿಂಗ್ ಪದವಿ ಪಡೆದ ಅವರು ಉತ್ತರ ಪ್ರದೇಶದಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದುವರೆಗೂ ಹಲವು ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಸುಹಾಸ್ ಯತಿರಾಜ್, ನಾಲ್ಕು ಚಿನ್ನ, ಐದು ಬೆಳ್ಳಿ ಹಾಗೂ 8 ಕಂಚಿನ ಪದಕ ಪಡೆದಿದ್ದಾರೆ.

Goutham bhudda nagar dc suhas yathiraj clinches silver in badminton

RELATED ARTICLES

Most Popular