Nipah Virus: ಮಾರಕ ನಿಫಾ ವೈರಸ್ ಗೆ ಮೊದಲ ಬಲಿ: ಆಸ್ಪತ್ರೆಯಲ್ಲಿ 12 ವರ್ಷದ ಬಾಲಕ ಸಾವು

ಕೋಯಿಕ್ಕೋಡ್: ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ಕಾಣಿಸಿಕೊಂಡ ನಿಫಾ ವೈರಸ್ 12 ವರ್ಷದ ಬಾಲಕನನ್ನು ಬಲಿ ತೆಗೆದುಕೊಂಡಿದೆ. ನಿಫಾ ವೈರಸ್ ನಿಂದ ಬಾಲಕ ಸಾವನ್ನಪ್ಪಿರುವ ಸಂಗತಿಯನ್ನು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಖಚಿತ ಪಡಿಸಿದ್ದಾರೆ.

ನಿಫಾ ವೈರಸ್ ಲಕ್ಷಣದೊಂದಿಗೆ 12 ವರ್ಷದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಪರೀಕ್ಷೆಗೆಂದು ಬಾಲಕನ ಮಾಹಿತಿಯನ್ನು ಪುಣೆಯ ನ್ಯಾಷನಲ್ ಇನ್ಸಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ಬಾಲಕನಿಗೆ ನಿಫಾ ವೈರಸ್ ತಗುಲಿರುವುದು ದೃಢಪಟ್ಟಿದೆ.

 ಈ ಮಧ್ಯೆ ತೀವ್ರ ಅಸ್ವಸ್ಥನಾಗಿದ್ದ ಬಾಲಕ ಬೆಳಗಿನ ಜಾವ ಸಾವನ್ನಪ್ಪಿದ್ದಾನೆ. ಇನ್ನು ಬಾಲಕನ ಸಾವಿನ ಬಳಿಕ ಈಗಾಗಲೇ ಆರೋಗ್ಯ ತಂಡವನ್ನು ರಚಿಸಲಾಗಿದ್ದು, ನಿಫಾ ವೈರಸ್ ಬಾಲಕಿಗೆ ಹೇಗೆ ತಗುಲಿತು ಸೇರಿದಂತೆ ವಿವಿಧ ಅಂಶಗಳನ್ನು ಪತ್ತೆಹಚ್ಚಲಾಗುತ್ತಿದೆ.

ಇನ್ನೊಂದೆಡೆ ಬಾಲಕನ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಪ್ರತ್ಯೇಖಗೊಳಿಸಲಾಗಿದ್ದು, ಕೇಂದ್ರದ ತಂಡ ಕೇರಳದಲ್ಲಿ ಪತ್ತೆಯಾಗಿರುವ ಈ ನಿಫಾ ವೈರಸ್ ಕುರಿತು ಅಧ್ಯಯನ ನಡೆಸಲು ಭೇಟಿ ನೀಡಲಿದೆ. 2018 ರಲ್ಲಿ ಕೇರಳದಲ್ಲಿ ಮೊದಲ ನಿಫಾ ವೈರಸ್ ಪತ್ತೆಯಾಗಿದ್ದು, ಇದುವರೆಗೂ ಕೇರಳದಲ್ಲಿ 17 ಜನರು ನಿಫಾನಿಂದ ಸಾವನ್ನಪ್ಪಿದ್ದರು.

kerala 12 year old boy dies due to nipah virus

Comments are closed.