ಟೋಕಿಯೋ : Japan’s former Prime Minister Shinzo Abe : ನಾರಾ ನಗರದಲ್ಲಿ ಸಾರ್ವಜನಿಕ ಸಭೆಯಲ್ಲಿ ಗುಂಡಿನ ದಾಳಿಗೆ ತುತ್ತಾಗಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಮಧ್ಯಾಹ್ನವಷ್ಟೇ ಶಿಂಜೋ ಅಬೆಯನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಜಪಾನ್ ಪ್ರಧಾನಿ ಫ್ಯೂಮಿಯೋ ಕಿಶಿಡಾ ಹೇಳಿಕೆ ನೀಡಿದ್ದರು. ಜಪಾನ್ನ ಮಾಜಿ ಪ್ರಧಾನಿ ಶಿಂಜೋ ಅಬೆ ಪ್ರಚಾರ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ದಾಳಿಕೋರರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು.

ದಾಳಿಕೋರರು ನಡೆಸಿದ ಫೈರಿಂಗ್ ಸಂದರ್ಭದಲ್ಲಿ ಶಿಂಜೋ ಅಬೆ ಕುತ್ತಿಗೆ ಹಾಗೂ ಎದೆಗೆ ಗುಂಡೇಟು ತಗುಲಿದೆ ಎಂದು ಹೇಳಲಾಗಿತ್ತು. ನಾರಾ ನಗರದಲ್ಲಿ ಶಿಂಜೋ ಅಬೆ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಎದೆಗೆ ಗುಂಡು ನಾಟಿತ್ತು. ಎರಡನೇ ಗುಂಡು ಅವರ ದೇಹದಿಂದ ಹಾದು ಹೋಗುತ್ತಿದ್ದಂತೆಯೇ ಶಿಂಜೋ ಅಬೆ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದರು. ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ್ದ ಶಿಂಜೋ ಅಬೆಯನ್ನು ಪ್ರಿಫೆಕ್ಚರಲ್ ಆಸ್ಪತ್ರೆಗೆ ಏರ್ಲಿಫ್ಟ್ ಮಾಡಲಾಗಿತ್ತು. ಆದರೆ ಅವರನ್ನು ಆಸ್ಪತ್ರೆಗೆ ಏರ್ಲಿಫ್ಟ್ ಮಾಡುವ ಸಂದರ್ಭದಲ್ಲಿಯೇ ಅವರು ಉಸಿರಾಡುತ್ತಿರಲಿಲ್ಲ ಹಾಗೂ ಅವರ ಎದೆ ಬಡಿತ ನಿಂತಿತ್ತು ಎಂದು ಸ್ಥಳೀಯ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಮಕೊಟೊ ಮೊರಿಮೊಟೊ ಮಾಹಿತಿ ನೀಡಿದ್ದರು.

ಮೇಲ್ಮನೆ ಚುನಾವಣೆಗೂ ಮುನ್ನ ನಡೆದ ಕಾರ್ಯಕ್ರಮವೊಂದರಲ್ಲಿ ಜಪಾನ್ನ ಮಾಜಿ ಪ್ರಧಾನಿ ಶಿಂಜೋ ಅಬೆ ಸಾರ್ವಜನಿಕವಾಗಿ ಪ್ರಚಾರ ಭಾಷಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ಗುಂಡೇಟು ಶಿಂಜೋ ಅಬೆಯ ಎದೆಗೆ ನಾಟಿದ್ದು ಸ್ಥಳದಲ್ಲೇ ಶಿಂಜೋ ಅಬೆ ಕುಸಿದು ಬಿದ್ದಿದ್ದರು. ಅವರ ಎದೆಯ ಭಾಗದಲ್ಲಿ ತೀವ್ರ ರಕ್ತ ಸ್ರಾವ ಉಂಟಾಗಿತ್ತು . 67 ವರ್ಷದ ನಾಯಕನ ಸಾವಿಗೆ ಕಾರಣರಾದ ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಇವರಿಂದ ಬಂದೂಕುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನು ಓದಿ : Ola driver kills passenger : ಒಟಿಪಿ ವಿಚಾರಕ್ಕೆ ಜಗಳ : ಕೋಪಗೊಂಡ ಓಲಾ ಚಾಲಕನಿಂದ ಪ್ರಯಾಣಿಕನ ಕೊಲೆ
ಇದನ್ನೂ ಓದಿ : Airtel New Recharge Plan : ಏರ್‌ಟೆಲ್‌ನ ರೇಟ್ ಕಟರ್ ಪ್ಲಾನ್‌ಗಳು! ಅಗ್ಗದ 4 ಹೊಸ ಪ್ಲಾನ್‌ಗಳು ಯಾವುದು ಗೊತ್ತಾ?
Japan’s former Prime Minister Shinzo Abe has died