Xiaomi Mi Band 7 Pro : ದೊಡ್ಡ ಸ್ಕ್ರೀನ್‌, ಜಿಪಿಎಸ್‌ ಮುಂತಾದ ವಿಶೇಷತೆಯೊಂದಿಗೆ ಬಿಡುಗಡೆಯಾದ ಶಿಯೋಮಿ ಮಿ ಬ್ಯಾಂಡ್‌ 7 ಪ್ರೋ!!

ಶಿಯೋಮಿ(Xiaomi) 12S ಸರಣಿಯ ಸ್ಮಾರ್ಟ್‌ಫೋನ್‌(Smarphone)ಗಳನ್ನು ಬಿಡುಗಡೆ ಮಾಡಿದೆ. ಶಿಯೋಮಿ 12S , ಶಿಯೋಮಿ 12Pro, ಮತ್ತು ಶಿಯೋಮಿ 12S ಅಲ್ಟ್ರಾ ಇವು ಬಿಡುಗಡೆಯಾದ ಸ್ಮಾರ್ಟ್‌ ಫೋನ್‌ಗಳಾಗಿವೆ. ಇವುಗಳ ಜೊತೆಗೆ ಶಿಯೋಮಿ ತನ್ನ ಇತ್ತೀಚಿನ ಫಿಟ್‌ನೆಸ್‌ ಟ್ರಾಕರ್‌, ಮಿ ಬ್ಯಾಂಡ್‌ 7 ಪ್ರೋ (Xiaomi Mi Band 7 Pro) ಅನ್ನು ಸಹ ಬಿಡುಗಡೆ ಮಾಡಿದೆ. ಶಿಯೊಮಿ ಮಿ ಬ್ಯಾಂಡ್‌ 7 ಪ್ರೋ ಹಲವಾರು ವಿಶೇಷತೆಗಳಿಂದ ಬಿಡುಗಡೆಯಾಗಿದೆ. ಇದು ದೊಡ್ಡದಾದ ಸ್ಮಾರ್ಟ್‌ವಾಚ್‌ ಡಿಸ್ಪ್ಲೇ, AMOLED ಸ್ಕ್ರೀನ್‌, ಜಿಪಿಎಸ್‌ ಬೆಂಬಲಿಸುವ ಮತ್ತು ಹಲವಾರು ಪ್ರೀಮಿಯಂ ವಿಶೇಷತೆಯನ್ನು ಹೊಂದಿದೆ.

ಶಿಯೋಮಿ ಮಿ ಬ್ಯಾಂಡ್‌ 7 ಪ್ರೋ ಬೆಲೆ :

ಶಿಯೋಮಿ ಮಿ ಬ್ಯಾಂಡ್‌ 7 ಪ್ರೋ ಅನ್ನು ಪರಿಚಯಾತ್ಮಕವಾಗಿ CNY 379(ಸುಮಾರು 4,500) ಕ್ಕೆ ಬಿಡುಗಡೆ ಮಾಡಲಾಗಿದೆ. ಪರಿಚಯಾತ್ಮಕ ಕೊಡುಗೆ ನಂತರ ಫಿಟ್‌ನೆಸ್‌ ಟ್ರಾಕರ್‌ನ ಬೆಲೆಯು CNY 399(ಸುಮಾರಿಗೆ 4700) ನಿಗದಿಪಡಿಸಲಾಯಿತು. ಇಲ್ಲಿಯವರು ಚೀನಾದಲ್ಲಿ ಮಾತ್ರ ಪ್ರಾರಂಭಿಸಿಲಾದ ಸ್ಮಾರ್ಟ್‌ ಬ್ಯಾಂಡ್‌ ಭವಿಷ್ಯದಲ್ಲಿ ಜಾಗತಿಕವಾಗಿ ಬಿಡುಗಡೆಯಾಗಲಿದೆ. ನೀಲಿ, ಹಸಿರು, ಕಿತ್ತಳೆ ಗುಲಾಬಿ ಮತ್ತು ಬಿಳಿ ಬಣ್ಣಗಳಲ್ಲಿ ಶಿಯೋಮಿ ಮಿ ಬ್ಯಾಂಡ್‌ ಪ್ರೋ 7 ಬಿಡುಗಡೆಯಾಗಿದೆ.

ವಿಶೇಷತೆಗಳು :

1.64 ಇಂಚಿನ AMOLED ಡಿಸ್ಪ್ಲೇ , 280 X 456 ಪಿಕ್ಸೆಲ್‌ಗಳ ರೆಸಲ್ಯೂಷನ್‌ ಗಳೊಂದಿಗೆ ಬಿಡುಗಡೆ ಮಾಡಲಾಗಿದೆ. 326 ppi ಪಿಕ್ಸೆಲ್‌ ಸಾಂದ್ರತೆ ಮತ್ತು 2.5 D ಗ್ಲಾಸ್‌ ಪ್ರೊಟೆಕ್ಷನ್‌ ಹೊಂದಿದೆ. ಇದು ಅಲ್ವೇಸ್‌–ಆನ್‌ ಡಿಸ್ಪ್ಲೇ ವಿಶೇಷತೆಯನ್ನು ಬೆಂಬಲಿಸುತ್ತದೆ. ಬಿಲ್ಟ್‌ ಇನ್‌ ಜಿಪಿಎಸ್‌ ಹೊಂದಿರುವ ಸ್ಮಾರ್ಟ್‌ ಬ್ಯಾಂಡ್‌ನಿಂದ ಬಳಕೆದಾರರ ಸ್ಥಳವನ್ನು ಟ್ರಾಕ್‌ ಮಾಡಬಹುದಾಗಿದೆ. ಇದಲ್ಲದೆ 24 ಗಂಟೆಗಳ ಕಾಲ ಹೃದಯ ಬಡಿತ ಮಾನಿಟರ್‌, SpO2 ಮಾನಿಟರಿಂಗ್‌, ಸ್ಲೀಪ್‌ ಟ್ರಾಕಿಂಗ್‌, ಸ್ಟೆಪ್‌ ಕೌಂಟರ್‌, ಕ್ಯಾಲೋರಿ ಕೌಂಟರ್ ಮುಂತಾದ ಹೆಲ್ತ್‌ ಮತ್ತು ಫಿಟ್‌ನೆಸ್‌ ವೈಶಿಷ್ಟ್ಯಗಳನ್ನು ಹೊಂದಿದೆ. ಫಿಟ್‌ನೆಸ್‌ ಟ್ರ್ಯಾಕರ್‌ ಬ್ಯಾಂಡ್‌ 5ATM ವಾಟರ್‌ ರೆಸಿಸ್ಟೆನ್ಸ್‌ (ವಾಟರ್‌ ಪ್ರೂಫ್‌) ಸಹ ಹೊಂದಿದೆ.

ಫಿಟ್‌ನೆಸ್‌ ಟ್ರ್ಯಾಕರ್‌ 180 ಕ್ಕೂ ಹೆಚ್ಚಿನ ವಾಚ್‌ ಫೇಸ್‌ ಮತ್ತು 117 ವ್ಯಾಯಾಮ ವಿಧಾನಗಳನ್ನು ಬೆಂಬಲಿಸುತ್ತದೆ. ಬ್ಯಾಟರಿಯ ಕ್ಷಮತೆಯು 235mAh ಆಗಿದ್ದು, ಒಂದೇ ಚಾರ್ಜ್‌ನಲ್ಲಿ 12 ದಿನಗಳ ವರೆಗೆ ಇರುತ್ತದೆ ಎಂದು ಹೇಳಲಾಗಿದೆ. ಸ್ಮಾರ್ಟ್‌ವಾಚ್‌ ಸಂಪರ್ಕಕ್ಕಾಗಿ ಬ್ಲೂಟೂತ್‌ v 5.2, NFC ಮತ್ತು ಶಿಯೋಮಿ Xiao AI ಧ್ವನಿ ಸಹಾಯ ಹೊಂದಿದೆ.

ಇದನ್ನೂ ಓದಿ : Railway Luggage Rules: ಎಚ್ಚರ ! ಲಗೇಜ್‌ ನಿಯಮ ಮರೆತರೆ ಹೊರಬೇಕಾದೀತು ‘ದಂಡದ ಹೊರೆ’!!

ಇದನ್ನೂ ಓದಿ : Technology for Disability people : ವಿಕಲಚೇತನರಿಗೂ ಸಹಾಯವಾಗುವ ತಂತ್ರಜ್ಞಾನದ ಬಗ್ಗೆ ನಿಮಗೆ ಗೊತ್ತೇ?

(Xiaomi Mi Band 7 Pro launched, know the price and specifications)

Comments are closed.