ಮಲೇಷ್ಯಾ: (Kuala Lumpur landslide) ಮಲೇಷ್ಯಾದ ರಾಜಧಾನಿ ಕೌಲಾಲಂಪುರ್ ನ ಹೊರವಲಯದ ಕ್ಯಾಂಪ್ ಸೌಟ್ ನಲ್ಲಿ ಭೂಕುಸಿತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಐವತ್ತಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ರಾಜಧಾನಿ ಕೌಲಾಲಂಪುರ್‌ನ ಹೊರವಲಯದಲ್ಲಿರುವ ಸೆಲಂಗೋರ್ ರಾಜ್ಯದಲ್ಲಿ ಶುಕ್ರವಾರ ಮುಂಜಾನೆ ಸುಮಾರು 3 ಗಂಟೆಗೆ ಭೂಕುಸಿತ ಸಂಭವಿಸಿದೆ ಎಂದು ವರದಿಯಾಗಿದೆ.
ಭೂಕುಸಿತದಲ್ಲಿ (Kuala Lumpur landslide) ಒಟ್ಟು 79 ಮಂದಿ ಸಿಲುಕಿದ್ದು, 23 ಮಂದಿ ಸುರಕ್ಷಿತವಾಗಿದ್ದಾರೆ ಎಂದು ಇಲಾಖೆ ತಿಳಿಸಿದೆ. ಅಲ್ಲದೆ,ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. 79 ಮಂದಿಯಲ್ಲಿ 51 ಮಂದಿ ನಾಪತ್ತೆಯಾಗಿದ್ದು, ಅಗ್ನಿಶಾಮಕ ದಳ ಮತ್ತು ರಕ್ಷಣಾ ಇಲಾಖೆಯ ಸಿಬ್ಬಂದಿಗಳಿಂದ ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಅಂದಾಜು 30 ಮೀಟರ್ (98 ಅಡಿ) ಎತ್ತರದಿಂದ ಭೂಕುಸಿತ ಸಂಭವಿಸಿದ್ದು, ಸುಮಾರು ಒಂದು ಎಕರೆ (0.4 ಹೆಕ್ಟೇರ್) ಪ್ರದೇಶವನ್ನು ಆವರಿಸಿದೆ ಎಂದು ಸೆಲಂಗೋರ್ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಯ ಮುಖ್ಯಸ್ಥ ನೋರಜಮ್ ಖಾಮಿಸ್ ಹೇಳಿದ್ದಾರೆ. ಅಲ್ಲದೆ ರಸ್ತೆ ಬದಿಯಲ್ಲಿ ಕ್ಯಾಂಪಿಂಗ್ ಸೌಲಭ್ಯಗಳನ್ನು ಒದಗಿಸುವ ಫಾರ್ಮ್ ಹೌಸ್ ಕೂಡ ಭೂಕುಸಿತದಿಂದ ನಾಶವಾಗಿದೆ ಎಂದು ರಾಜ್ಯ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಯವರು ತಿಳಿಸಿದ್ದಾರೆ.
ಇದನ್ನೂ ಓದಿ : Australia’s Queenland : ಇಬ್ಬರು ಪೊಲೀಸರು ಸೇರಿ ಗುಂಡಿಕ್ಕಿ 6 ಮಂದಿಯ ಹತ್ಯೆ
ಇದನ್ನೂ ಓದಿ : China guest house Kabul :ಕಾಬೂಲ್‌ನಲ್ಲಿ ಚೀನಾ ಮೂಲದ ಹೋಟೆಲ್‌ನಲ್ಲಿ ಸ್ಪೋಟ ನಡೆಸಿದ ಉಗ್ರರು
ಇದನ್ನೂ ಓದಿ : World Tallest Person: ಸತ್ತ ಮೇಲೂ ದಾಖಲೆ ಉಳಿಸಿಕೊಂಡ ವಿಶ್ವದ ಅತ್ಯಂತ ಎತ್ತರದ ವ್ಯಕ್ತಿ ಇವರೇ ನೋಡಿ: ವೈರಲ್ ಆಯ್ತು 1935ರ ಫೋಟೋ
ಕ್ಯಾಂಪ್‌ಸೈಟ್ ಜೆಂಟಿಂಗ್ ಹೈಲ್ಯಾಂಡ್ಸ್ ಹಿಲ್ ರೆಸಾರ್ಟ್‌ನಿಂದ ಸ್ವಲ್ಪ ದೂರದಲ್ಲಿರುವ ಸಾವಯವ ಫಾರ್ಮ್‌ನಲ್ಲಿರುವ ಕ್ಯಾಂಪ್ ಸೈಟ್, ಥೀಮ್ ಪಾರ್ಕ್‌ಗಳು ಮತ್ತು ಮಲೇಷ್ಯಾದ ಏಕೈಕ ಕ್ಯಾಸಿನೊದೊಂದಿಗೆ ಜನಪ್ರಿಯ ಪ್ರವಾಸಿ ತಾಣವಾಗಿದೆ.
A landslide occurred in the outskirts of Kuala Lumpur, the capital of Malaysia, and two people died. More than fifty people are missing. The landslide was reported in Selangor state on the outskirts of the capital Kuala Lumpur at around 3am on Friday.