Shreyas Iyer : ಶತಕ ಮಿಸ್ಸಾದ್ರೂ ಯಾರೂ ಮಾಡಲಾಗದ ದಾಖಲೆ ಬರೆದ ಶ್ರೇಯಸ್ ಅಯ್ಯರ್


ಛಟ್ಟೋಗ್ರಾಮ್: ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಶ್ರೇಯಸ್ ಅಯ್ಯರ್ (Shreyas Iyer) , ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ (India Vs Bangladesh test match) ಪಂದ್ಯದಲ್ಲಿ ಶತಕವಂಚಿತರಾಗಿದ್ದಾರೆ. ಶತಕ ಮಿಸ್ಸಾದ್ರೂ ಅಯ್ಯರ್ ಭಾರತೀಯ ಕ್ರಿಕೆಟ್’ನಲ್ಲಿ ಯಾರೂ ಮಾಡಲಾಗದ ದಾಖಲೆಯೊಂದನ್ನು ಬರೆದಿದ್ದಾರೆ. ಛಟ್ಟೋಗ್ರಾಮ್’ನ ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ 86 ರನ್ ಗಳಿಸಿ ಔಟಾಗಿದ್ದಾರೆ. ಮೊದಲ ದಿನದಂತ್ಯಕ್ಕೆ 82 ರನ್ ಗಳಿಸಿ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದ ಅಯ್ಯರ್, 2ನೇ ದಿನ ಶತಕದ ನಿರೀಕ್ಷೆಯಲ್ಲಿದ್ದರು. ಆದರೆ ಮೊದಲ ದಿನ ಸ್ಕೋರ್’ಗೆ ಕೇವಲ 4 ರನ್ ಸೇರಿಸಿ 86 ರನ್’ಗಳಿಗೆ ಔಟಾದರು.

ಕಳೆದ ವರ್ಷದ ನವೆಂಬರ್’ನಲ್ಲಿ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಶ್ರೇಯಸ್ ಅಯ್ಯರ್ ಇದುವರೆಗೆ ಭಾರತ 10 ಇನ್ನಿಂಗ್ಸ್’ಗಳನ್ನು ಆಡಿದ್ದಾರೆ. ಆ 10 ಇನ್ನಿಂಗ್ಸ್’ಗಳಲ್ಲಿ ಒಮ್ಮೆಯೂ ಸಿಂಗಲ್ ಡಿಜಿಟ್’ಗೆ ಔಟಾಗಿಲ್ಲ ಎಂಬುದು ವಿಶೇಷ. ಪ್ರತೀ ಇನ್ನಿಂಗ್ಸ್’ನಲ್ಲೂ 10 ಅಥವಾ 10ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ನಾಲ್ಕು ಅರ್ಧಶತಕಗಳು ಸೇರಿವೆ. ಮೊದಲ 10 ಟೆಸ್ಟ್ ಇನ್ನಿಂಗ್ಸ್’ಗಳಲ್ಲಿ ಸಿಂಗಲ್ ಡಿಜಿಟ್’ಗೆ ಔಟಾಗದ ಭಾರತದ ಮೊದಲ ಆಟಗಾರನೆಂಬ ಹಿರಿಮೆಗೆ ಶ್ರೇಯಸ್ ಅಯ್ಯರ್ ಪಾತ್ರರಾಗಿದ್ದಾರೆ.

Shreyas Iyer : ಶ್ರೇಯಸ್ ಅಯ್ಯರ್ ಟೆಸ್ಟ್ ರನ್ (ಮೊದಲ 10 ಇನ್ನಿಂಗ್ಸ್)

105, 65, 18, 14, 27, 92, 67, 15, 19, 86

ಕಳೆದ ವರ್ಷ ಕಾನ್ಪುರದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಶ್ರೇಯಸ್ ಅಯ್ಯರ್, ಆಡಿದ ಚೊಚ್ಚಲ ಟೆಸ್ಟ್ ಇನ್ನಿಂಗ್ಸ್’ನಲ್ಲೇ ಅಮೋಘ ಶತಕ ಬಾರಿಸಿದ್ದರು. 5ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದಿದ್ದ ಅಯ್ಯರ್, ಆಕರ್ಷಕ 105 ರನ್ ಗಳಿಸಿ ವೃತ್ತಿಜೀವನದ ಮೊದಲ ಟೆಸ್ಟ್’ನಲ್ಲೇ ಪಂದ್ಯಶ್ರೇಷ್ಠರಾಗಿ ಮೂಡಿ ಬಂದಿದ್ದರು.

Shreyas Iyer : ಶ್ರೇಯಸ್ ಅಯ್ಯರ್ ಟೆಸ್ಟ್ ಸಾಧನೆ

ಪಂದ್ಯ: 06
ಇನ್ನಿಂಗ್ಸ್: 10
ರನ್: 508
ಶತಕ: 01
ಅರ್ಧಶತಕ: 04

ಇದನ್ನೂ ಓದಿ : Ravindra Jadeja: ದಕ್ಷಿಣ ಭಾರತದ ಪಂಚೆ-ಶಲ್ಯದಲ್ಲಿ ಮಿಂಚಿದ ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜ

ಇದನ್ನೂ ಓದಿ : Siraj Vs Litton Das: ಕೆಣಕಿದ ಬಾಂಗ್ಲಾ ದಾಂಡಿಗ ಮುಂದಿನ ಎಸೆತದಲ್ಲೇ ಕ್ಲೀನ್ ಬೌಲ್ಡ್.. ಸಿರಾಜ್ ಆರ್ಭಟದ ವೀಡಿಯೊ ವೈರಲ್

English News : News Next Live

Shreyas Iyer has written a record that no one can do without a century miss India Vs Bangladesh test match

Comments are closed.